ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್; ‘ವಿಕ್ರಾಂತ್ ರೋಣ’ಗೆ ಉಘೇ ಉಘೇ ಎಂದ ಕಿಚ್ಚನ ಫ್ಯಾನ್ಸ್

ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್; ‘ವಿಕ್ರಾಂತ್ ರೋಣ’ಗೆ ಉಘೇ ಉಘೇ ಎಂದ ಕಿಚ್ಚನ ಫ್ಯಾನ್ಸ್

ವಿಕ್ರಾಂತ್ ರೋಣ ಸಿನಿಮಾ ತಂಡ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದು, ಶ್ರೀಲಂಕನ್ ಚಿಂಗಾರಿ , ಬಾಲಿವುಡ್ ಸುಂದ್ರಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಪಾತ್ರ ಫಸ್ಟ್​ ಲುಕ್​ ರಿವೀಲ್​ ಮಾಡಿದೆ.

ಈ ತಿಂಗಳ ಕಳೆದ 10ನೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಕರೆಸಿ ಕುಣಿಸಿ ಒಂದು ಪಾತ್ರವನ್ನ ಮಾಡಿಸಿ ವಿಕ್ರಾಂತ್ ರೋಣ ಫಿಲ್ಮ್ ಟೀಮ್ ಸಖತ್ ಸುದ್ದಿ ಮಾಡಿತ್ತು. ಚಿತ್ರದಲ್ಲಿ ಒಂದು ಹಾಡು ಮತ್ತು ವಿಶೇಷ ಪಾತ್ರದಲ್ಲಿ ಜಾಕ್ಲಿನ್ ಕಾಣಿಸಿಕೊಂಡಿದ್ದಾರೆ. ಅನುಪ್ ಭಂಡಾರಿ ಸಾರಥ್ಯದ ವಿಕ್ರಾಂತ್ ರೋಣ ಸಿನಿಮಾ ಸಿದ್ಧವಾಗುತ್ತಿದ್ದು, ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ.

blank

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದ ವಿಚಾರದಲ್ಲಿ ಕುತೂಹಲ ಕೆರಳಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಅದ್ಯಾವಾಗ ಬರುತ್ತಪ್ಪ ವಿಕ್ರಾಂತ್ ರೋಣ, ಅದ್ಯಾವಾಗ ನೋಡ್ತಿವಪ್ಪ ಸಿನಿಮಾವನ್ನಾ ಸುದೀಪಿಯನ್ಸ್ ಕಾದು ಕುಳಿತಿರುವಂತೆ ಮಾಡಿರುವ ವಿಕ್ರಾಂತ್ ರೋಣ ಸಿನಿ ತಂಡ.. ಚಿತ್ರದ ಕುರಿತು ಆಗಿಂದಾಗೇ ಅಪ್​​ಡೇಟ್​ ನೀಡುತ್ತಾ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತಹ ಸಮಾಚಾರವೂ ಒಂದಿದ್ದು, ಪ್ರತಿಷ್ಠಿತ ಐಎಂಡಿಬಿ ಪ್ರಕಟಿಸಿರುವ most anticipated indian movie ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

blank

Internet Movie Database ವೆಬ್ಸೈಟ್ ಪ್ರಕಟಿಸಿರುವ ಭಾರತೀಯ ಚಿತ್ರರಂಗದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಶೇ.54.0 ಪಡೆದು ವಿಕ್ರಾಂತ್ ರೋಣ ಮೊದಲ ಸ್ಥಾನ ಅಲಂಕರಿಸಿದೆ. ಕೆಜಿಎಫ್ ಚಾಪ್ಟರ್ 2 ಶೇ.18.3 ಇದೆ. ಇನ್ನುಳಿದ ಉಳಿದ ಸಾಲಿನಲ್ಲಿ ನವರಸ, ರಾಧೆ ಶ್ಯಾಮ್, ಪುಷ್ಪ ಸೇರಿದಂತೆ ಅನೇಕ ಸಿನಿಮಾಗಳು ಸ್ಥಾನ ಪಡೆದಿದೆ. ಆದ್ರೆ ಈ ಬಹು ನಿರೀಕ್ಷಿತ ಇಂಡಿಯನ್ ಸಿನಿಮಾ ಪಟ್ಟಿಯಲ್ಲಿ ಥ್ರಿಬಲ್ ಆರ್ ಸ್ಥಾನ ಪಡೆಯದೇ ಇರೋದು ಅಚ್ಚರಿ ಮೂಡಿಸಿದೆ.

blank

The post ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್; ‘ವಿಕ್ರಾಂತ್ ರೋಣ’ಗೆ ಉಘೇ ಉಘೇ ಎಂದ ಕಿಚ್ಚನ ಫ್ಯಾನ್ಸ್ appeared first on News First Kannada.

Source: newsfirstlive.com

Source link