ಸಂಪುಟ ಸರ್ಕಸ್; ಸೋಮವಾರ ಮತ್ತೆ ದೆಹಲಿಗೆ ಬರುವಂತೆ ಸಿಎಂಗೆ ಹೈಕಮಾಂಡ್​ ಬುಲಾವ್​

ಸಂಪುಟ ಸರ್ಕಸ್; ಸೋಮವಾರ ಮತ್ತೆ ದೆಹಲಿಗೆ ಬರುವಂತೆ ಸಿಎಂಗೆ ಹೈಕಮಾಂಡ್​ ಬುಲಾವ್​

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆಯ ಸವಾಲು ಎದುರಾಗಿದೆ. ಈ ನಡುವೆ ಆಗಸ್ಟ್​​​ 2ರ ಸೋಮವಾರದಂದು ಮತ್ತೊಮ್ಮೆ ದೆಹಲಿಗೆ ಆಗಮಿಸುವಂತೆ ಸಿಎಂಗೆ ಬಿಜೆಪಿ ಹೈ ಕಮಾಂಡ್​ ಬುಲಾವ್ ನೀಡಿದೆ ಎಂದ ಮಾಹಿತಿ ಮೂಲಗಳಿಂದ ನ್ಯೂಸ್​​ಫಸ್ಟ್​​ಗೆ ಲಭ್ಯವಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಸಿಎಂ, ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ಸದ್ಯ ಸಿಎಂ ಅವರು ಇಂದು ಮಧ್ಯಾಹ್ನ 2.10ಕ್ಕೆ ದೆಹಲಿಯಿಂದ ಹೊರಲಿದ್ದು, ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇನ್ನು ಸೋಮವಾರ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅಂದೇ ಸಚಿವ ಸಂಪುಟದ ಫೈನಲ್​ ಲಿಸ್ಟ್​ ಅಂತಿಮವಾಗಲಿದೆ. ಸಿಎಂ ಸದ್ಯ 21 ಶಾಸಕರ ಪಟ್ಟಿಯನ್ನು ಹೈಕಮಾಂಡ್​ ಮುಂದಿಟ್ಟಿದ್ದು, ಇದರಲ್ಲಿ 6 ಶಾಸಕರ ಬಗ್ಗೆ ಹೈಕಮಾಂಡ್​ ಚರ್ಚೆ ನಡೆಸಿ, 7 ಹೆಸರನ್ನು ಹೈಕಮಾಂಡ್​​​ ಸೂಚಿಸಿದ್ದಾರೆ ಎನ್ನಲಾಗಿದೆ. ಉಳಿದವರ ಹೆಸರು ಸೋಮವಾರದ ಭೇಟಿಯ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ.

ಇತ್ತ ಬೆಂಗಳೂರಿಗೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಹಣಕಾಸು ಸಚಿವರನ್ನು ‌ಭೇಟಿ ಮಾಡಿ ಜಿಎಸ್​ಟಿ ಸಂಗ್ರಹದ ಬಗ್ಗೆ ಚರ್ಚೆ ಮಾಡಿದ್ದೇನೆ. ಕೃಷಿ ಯೋಜನೆಗಳಿಗೆ ಅನುದಾನ‌ ಕೇಳಿದ್ದು, ಕೇಂದ್ರದ ಯೋಜನೆಗೆಗಳಿಗೆ ಅನುದಾನ ನೀಡುವ ಭರವಸೆ ‌ನೀಡಿದ್ದಾರೆ. ಕಳೆದ ವರ್ಷದ ಜಿಎಸ್​​ಟಿ ಬಾಕಿ ಹಣ 11,400 ಕೋಟಿ ರೂಪಾಯಿ ಬಿಡುಗಡೆ ಕೇಳಿದ್ದೇನೆ. ಈ ವರ್ಷದ 18,000 ಕೋಟಿ ರೂಪಾಯಿಯ ಬಗ್ಗೆಯೂ ಕೇಳಿದ್ದು, ಅವರು ಕಂತುಗಳ ರೂಪದಲ್ಲಿ ಕೊಡಲು ಒಪ್ಪಿದ್ದಾರೆ. ಆರೋಗ್ಯ ಸಚಿವರನ್ನು ಭೇಟಿ ಮಾಡಿ ವ್ಯಾಕ್ಸಿನ್, ಮೂರನೇ ಅಲೆ ಬಗ್ಗೆ ಚರ್ಚೆ ಮಾಡಿದೆ. ತಿಂಗಳಿಗೆ ಒಂದೂವರೆ ಕೋಟಿ ಡೋಸ್ ಕೇಳಿದ್ದೇನೆ ಎಂದು ತಿಳಿಸಿದರು.

The post ಸಂಪುಟ ಸರ್ಕಸ್; ಸೋಮವಾರ ಮತ್ತೆ ದೆಹಲಿಗೆ ಬರುವಂತೆ ಸಿಎಂಗೆ ಹೈಕಮಾಂಡ್​ ಬುಲಾವ್​ appeared first on News First Kannada.

Source: newsfirstlive.com

Source link