ರಸ್ತೆ ಮಧ್ಯೆಯೇ ಬಾಯ್ತೆರೆದ ಗುಂಡಿ; ಸಮಯಪ್ರಜ್ಞೆಯಿಂದ ತಪ್ಪಿತು ಗಂಡಾಂತರ

ರಸ್ತೆ ಮಧ್ಯೆಯೇ ಬಾಯ್ತೆರೆದ ಗುಂಡಿ; ಸಮಯಪ್ರಜ್ಞೆಯಿಂದ ತಪ್ಪಿತು ಗಂಡಾಂತರ

ನವದೆಹಲಿ: ದೆಹಲಿಯ ಹಾಜ್ ಕಾಸ್​ ಬಳಿ ರಸ್ತೆಯೊಂದರ ನಟ್ಟನಡುವೆ ದೈತ್ಯಾಕಾರದ ಗುಂಡಿಯೊಂದು ನಿರ್ಮಾಣವಾಗಿದೆ. ಇಂದು ಬೆಳಗ್ಗೆ 09:30-10:00 ಗಂಟೆ ಸುಮಾರಿಗೆ ಸಾರ್ವಜನಿಕರು ಬೃಹತ್ ಗುಂಡಿಯೊಂದು ರಸ್ತೆ ಮಧ್ಯೆಯೇ ತೆರೆದುಕೊಂಡಿರೋದನ್ನ ಕಂಡು ಗಾಬರಿಬಿದ್ದಿದ್ದಾರೆ. ತಕ್ಷಣವೇ ಗುಂಡಿಯ ಸುತ್ತ ಬ್ಯಾರಿಕೇಡ್​​ಗಳನ್ನ ಜೋಡಿಸಲಾಗಿ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.

ದೆಲ್ಲಿ ಜಲ್ ಬೋರ್ಡ್​ಗೆ ಸಂಪರ್ಕಿಸುವ ಕಾಲುವೆಯೊಂದು ಈ ಮಾರ್ಗವಾಗಿ ಹಾದುಹೋಗಿರುವ ಪರಿಣಾಮ ರಸ್ತೆಯ ಮಧ್ಯೆ ಗುಂಡಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಗುಂಡಿ ನಿರ್ಮಾಣವಾಗಿರುವುದರ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ.. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

blank

The post ರಸ್ತೆ ಮಧ್ಯೆಯೇ ಬಾಯ್ತೆರೆದ ಗುಂಡಿ; ಸಮಯಪ್ರಜ್ಞೆಯಿಂದ ತಪ್ಪಿತು ಗಂಡಾಂತರ appeared first on News First Kannada.

Source: newsfirstlive.com

Source link