ಆನ್​​ಲೈನ್​ ಗೇಮ್​​ನಲ್ಲಿ ₹40,000 ಕಳ್ಕೊಂಡ 13 ವರ್ಷದ ಬಾಲಕ; ಅಮ್ಮ ಬೈದ್ಲು ಎಂದು ಆತ್ಮಹತ್ಯೆ

ಆನ್​​ಲೈನ್​ ಗೇಮ್​​ನಲ್ಲಿ ₹40,000 ಕಳ್ಕೊಂಡ 13 ವರ್ಷದ ಬಾಲಕ; ಅಮ್ಮ ಬೈದ್ಲು ಎಂದು ಆತ್ಮಹತ್ಯೆ

ನವದೆಹಲಿ: ಆನ್​ಲೈನ್​​ ಗೇಮ್​​ ವಿಚಾರಕ್ಕೆ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕನ ಕುಟುಂಬವು ಛತ್ರಪುರದ ಶಾಂತಿನಗರದಲ್ಲಿ ನೆಲೆಸಿತ್ತು. ಪೋಷಕರಿಗೆ ಗೊತ್ತಿಲ್ಲದೇ ಆನ್​ಲೈನ್​ ಗೇಮ್​ಗೆ ಅಡಿಕ್ಟ್​ ಆಗಿದ್ದ ಬಾಲಕ, ಫ್ರೀ ಫೈರ್​ ಗೇಮ್​ನಲ್ಲಿ ಒಟ್ಟು 40 ಸಾವಿರ ರೂಪಾಯಿ ಕಳೆದುಕೊಂಡಿದ್ದ ಎನ್ನಲಾಗಿದೆ.

blank

ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ.. ಆತ್ಮಹತ್ಯೆ ಮಾಡಿಕೊಂಡ ದಿನ ಮನೆಯಲ್ಲಿ ಬಾಲಕ ಹಾಗೂ ಆತನ ಸಹೋದರಿ ಮಾತ್ರ ಇದ್ದರು. ಕೆಲಸಕ್ಕೆ ಹೋಗಿದ್ದ ಆತನ ತಾಯಿಗೆ ಬ್ಯಾಂಕ್​ನಿಂದ ಮೆಸೇಜ್ ಬರುತ್ತೆ. ನಿಮ್ಮ ಖಾತೆಯಲ್ಲಿದ್ದ ಹಣ 1500 ರೂಪಾಯಿ ಹಣ ಡೆಬಿಟ್ ಆಗಿದೆ ಎಂದು. ಕೂಡಲೇ ತಮ್ಮ ಮಗ ಆನ್​ಲೈನ್​ ಗೇಮ್​​ಗಾಗಿ ಮತ್ತೆ ಹಣವನ್ನ ಕಳೆದುಕೊಂಡಿದ್ದಾನೆ ಎಂದು ಅವರಿಗೆ ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಅವರು ಕಾಲ್ ಮಾಡಿ, ಬುದ್ಧಿ ಹೇಳಿದ್ದಾರೆ.

ಇದರಿಂದ ನೊಂದ ಬಾಲಕ ತನ್ನ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಡ್ಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದನ್ನ ಸಹೋದರಿ ನೋಡಿದ್ದಾಳೆ. ಕೂಡಲೇ ಫೋನ್ ಮಾಡಿ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೈದ್ಯರು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ.

The post ಆನ್​​ಲೈನ್​ ಗೇಮ್​​ನಲ್ಲಿ ₹40,000 ಕಳ್ಕೊಂಡ 13 ವರ್ಷದ ಬಾಲಕ; ಅಮ್ಮ ಬೈದ್ಲು ಎಂದು ಆತ್ಮಹತ್ಯೆ appeared first on News First Kannada.

Source: newsfirstlive.com

Source link