ಬೆಂಗಳೂರಿಗೆ ಬಂದಿಳಿದ ಧವನ್ ಪಡೆ- ಲಂಕಾದಲ್ಲೇ ಉಳಿದ ಕೃನಾಲ್, ಕೆ.ಗೌತಮ್, ಚಹಲ್

ಬೆಂಗಳೂರಿಗೆ ಬಂದಿಳಿದ ಧವನ್ ಪಡೆ- ಲಂಕಾದಲ್ಲೇ ಉಳಿದ ಕೃನಾಲ್, ಕೆ.ಗೌತಮ್, ಚಹಲ್

ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ–20 ಪಂದ್ಯಗಳ ಸರಣಿಯ ಪ್ರವಾಸ ಮುಗಿಸಿದ ಟೀಮ್​ ಇಂಡಿಯಾ ಆಟಗಾರರು ಕೊಲಂಬೋದಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದ ಮೂಲಕ ಆಟಗಾರರು ತಾಯ್ನಾಡಿಗೆ ಮರಳಿದ್ದಾರೆ. ಆದರೆ, ಕೋವಿಡ್ -19ನಿಂದ ಚೇತರಿಸಿಕೊಳ್ಳುತ್ತಿರುವ ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ಯುಜುವೇಂದ್ರ ಚಹಲ್​ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್​ ಕೊಲಂಬೋದಲ್ಲಿಯೇ ಉಳಿದಿದ್ದಾರೆ. ಒಂದು ವಾರಗಳ ಬಳಿಕ ಟೆಸ್ಟ್​ ನಡೆಯಲಿದೆ. ಪರೀಕ್ಷಾ ವರದಿ ನೆಗೆಟಿವ್​ ಬಂದ ಬಳಿಕವಷ್ಟೇ ಅವರು ವಾಪಾಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಇಂಗ್ಲೆಂಡ್​​ ತೆರಳಬೇಕಿರುವ ಸೂರ್ಯ ಕುಮಾರ್​ ಯಾದವ್​ ಹಾಗೂ ಪೃಥ್ವಿ ಶಾ ಕೂಡ ಶ್ರೀಲಂಕಾದಿಂದಲೇ ನೇರವಾಗಿ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

 

The post ಬೆಂಗಳೂರಿಗೆ ಬಂದಿಳಿದ ಧವನ್ ಪಡೆ- ಲಂಕಾದಲ್ಲೇ ಉಳಿದ ಕೃನಾಲ್, ಕೆ.ಗೌತಮ್, ಚಹಲ್ appeared first on News First Kannada.

Source: newsfirstlive.com

Source link