‘ಉಪವಾಸನಾದ್ರೂ ಕೂರಲಿ.. ಊಟನಾದ್ರೂ ಮಾಡಲಿ..’ – ಅಣ್ಣಾಮಲೈಗೆ ಸಿಎಂ ಟಾಂಗ್

‘ಉಪವಾಸನಾದ್ರೂ ಕೂರಲಿ.. ಊಟನಾದ್ರೂ ಮಾಡಲಿ..’ – ಅಣ್ಣಾಮಲೈಗೆ ಸಿಎಂ ಟಾಂಗ್

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಪಾಲಿನ ಕುರಿತು ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಹಣಕಾಸು ಸಚಿವರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ತಡೆಯಲು ಅಣ್ಣಾಮಲೈ ಪಣ -ಆ.5ಕ್ಕೆ ಉಪವಾಸ ಸತ್ಯಾಗ್ರಹ

ಇನ್ನು ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಪವಾಸ ಕೂರುವುದಾಗಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ.. ಯಾರು ಬೇಕಾದ್ರೂ ಉಪವಾಸ ಕೂಡಲಿ.. ಯಾರು ಬೇಕಾದ್ರೂ ಊಟ ಮಾಡಲಿ ಅಣೆಕಟ್ಟು ಯೋಜನೆ ಮಾಡುವುದು ನಮ್ಮ ಹಕ್ಕು.. ನೀರಿನಲ್ಲಿ ನಮ್ಮ ಪಾಲಿದೆ. ಯೋಜನೆ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್​ ತಯಾರಾಗುವುದಿದೆ. ಅದು ತಯಾರಾಗ್ತಿದ್ದಂತೆ ಯೋಜನೆಯನ್ನ ಕೈಗೆತ್ತಿಕೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಜಟಾಪಟಿ; ತ.ನಾಡು ಸರ್ಕಾರಕ್ಕೆ ನಮ್ಮ ಬೆಂಬಲ ಎಂದ ಅಣ್ಣಾಮಲೈ

The post ‘ಉಪವಾಸನಾದ್ರೂ ಕೂರಲಿ.. ಊಟನಾದ್ರೂ ಮಾಡಲಿ..’ – ಅಣ್ಣಾಮಲೈಗೆ ಸಿಎಂ ಟಾಂಗ್ appeared first on News First Kannada.

Source: newsfirstlive.com

Source link