ವೈರಲ್ ಆದ ಮಹೇಶ್ ಕುಮಟಳ್ಳಿ ವಿಡಿಯೋ; ಜನರ ಕ್ಷಮೆ ಕೇಳಿದ ಅಥಣಿ ಶಾಸಕ

ವೈರಲ್ ಆದ ಮಹೇಶ್ ಕುಮಟಳ್ಳಿ ವಿಡಿಯೋ; ಜನರ ಕ್ಷಮೆ ಕೇಳಿದ ಅಥಣಿ ಶಾಸಕ

ಬೆಳಗಾವಿ: ಪ್ರವಾಹ ಸಂತ್ರಸ್ಥರ ಪೋನ್ ಕರೆಗಳ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿ ನಿರ್ಲಕ್ಷ್ಯದ ಮಾತುಗಳನ್ನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಚಾರವಾಗಿ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ ಮಹೇಶ್ ಕುಮಟಳ್ಳಿ.. ವೈರಲ್ ಆಗಿರೋ ವಿಡಿಯೋ ಇವಾಗಿನದ್ದಲ್ಲ.. ಕೊರೊನಾ ಸೋಂಕು ಹೆಚ್ಚಾಗಿದ್ದ ಸಮಯದ್ದು ಎಂದಿದ್ದಾರೆ.

ಅಥಣಿ ಮತಕ್ಷೇತ್ರದಲ್ಲಿ ನನ್ನನ್ನ ಎರಡು ಬಾರಿ ಗೆಲ್ಲಿಸಿದ್ದಾರೆ.. ರೂಟ್ ಲೆವೆಲ್​ನಲ್ಲಿ ಎಲ್ಲರ ಜೊತೆಗೂ ಸಂಪರ್ಕದಲ್ಲಿದ್ದೇನೆ.. ಇವಾಗ ಯಾಕೆ ಆ ವಿಡಿಯೋ ವೈರಲ್ ಆಯ್ತೋ ಗೊತ್ತಿಲ್ಲ ಎಂದಿದ್ದಾರೆ. ಇನ್ನು ವಿಡಿಯೋ ಯಾವಾಗಿನದ್ದೇ ಆಗಿರಲಿ.. ಇದರಿಂದ ಜನರ ಮನಸ್ಸಿಗೆ ನೋವಾಗಿದ್ದರೆ ನಾನು ನಿಮ್ಮ ಮೂಲಕ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

The post ವೈರಲ್ ಆದ ಮಹೇಶ್ ಕುಮಟಳ್ಳಿ ವಿಡಿಯೋ; ಜನರ ಕ್ಷಮೆ ಕೇಳಿದ ಅಥಣಿ ಶಾಸಕ appeared first on News First Kannada.

Source: newsfirstlive.com

Source link