ಪಾರ್ಟಿ, ಸಿನಿಮಾ, ಕ್ರಿಕೆಟ್ ಅಂತಾ ಓಡಾಡ್ತಿದ್ದವನನ್ನ ಜೊತೆಯಲ್ಲಿದ್ದವರೇ ಕೊಂದಿದ್ದೇಕೆ..?

ಪಾರ್ಟಿ, ಸಿನಿಮಾ, ಕ್ರಿಕೆಟ್ ಅಂತಾ ಓಡಾಡ್ತಿದ್ದವನನ್ನ ಜೊತೆಯಲ್ಲಿದ್ದವರೇ ಕೊಂದಿದ್ದೇಕೆ..?

ಬೆಂಗಳೂರು: ಇತ್ತೀಚೆಗೆ ಬರ್ಬರವಾಗಿ ಕೊಲೆಯಾಗಿದ್ದ ರೌಡಿಶೀಟರ್​ ಹರೀಶ್​ ಕೊಲೆಯು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.

ಇದೇ ತಿಂಗಳ 28ರಂದು ಬಾಣಸವಾಡಿ ಪೊಲೀಸ್ ಠಾಣೆ ಹತ್ತಿರ ಹಾಡು ಹಗಲೇ ರೌಡಿಶೀಟರ್​ ಹರೀಶ್​ನನ್ನು ಬರ್ಬರವಾಗಿ ಕೊಲೆ‌ ಮಾಡಲಾಗಿತ್ತು. ಈ ಸಂಬಂಧ ಬಾಣಸವಾಡಿ ಪೊಲೀಸರು ಆತನ ಸ್ನೇಹಿತರಾದ ರಕ್ಷಿತ್, ಇಂದ್ರಜಿತ್, ನೆಲ್ಸನ್, ಸುಭಾಷ್, ಅಭಿಲಾಶ್ ಎಂಬುವರನ್ನ ಬಂಧಿಸಿ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್​​ ಹರೀಶ್​​ ಮೇಲೆ ಪೊಲೀಸ್​​ ಫೈರಿಂಗ್​​

ವಿಚಾರಣೆ ವೇಳೆ ಆರೋಪಿಗಳು ಹಳೆ ದ್ವೇಷದ ವೈಷಮ್ಯದ ಮೇಲೆ ಕೊಲೆ ಎಸಗಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಕೊಲೆಯಾದ ರೌಡಿಶೀಟರ್​ ಹರೀಶ್,​ ಆರೋಪಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದ ಎನ್ನಲಾಗಿದ್ದು, ಅವರ ಜೊತೆ ಸೇರಿ ಪಾರ್ಟಿ, ಕ್ರಿಕೆಟ್​, ಸಿನಿಮಾ ಅಂತೆಲ್ಲಾ ಓಡಾಡ್ತಿದ್ದನಂತೆ.

ಹೀಗಿರುವಾಗ ಆರೋಪಿ ರಕ್ಷಿತ್​ ಮೇಲೆ ಯಾವುದೋ ಕಾರಣಕ್ಕಾಗಿ ಕಿರಿಕ್​ ಮಾಡಿಕೊಂಡ ಹರೀಶ್​ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಮತ್ತು ಆಗಾಗ ರಕ್ಷಿತ್​ಗೆ ಬೆದರಿಕೆಯನ್ನು ಹಾಕ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿ ರಕ್ಷಿತ್​ ಹರೀಶ್​ನನ್ನು ಮುಗಿಸಲು ಪ್ಲಾನ್​ ಮಾಡಿಕೊಂಡಿದ್ದನಂತೆ, ಅದೇ ರೀತಿ ಇನ್ನುಳಿದ ತನ್ನ ಸ್ನೇಹಿತರ ಜೊತೆ ಸೇರಿ ಹರೀಶ್​ ನನ್ನು ಹಾಡು ಹಗಲೇ ಕೊಚ್ಚಿ ಕೊಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

The post ಪಾರ್ಟಿ, ಸಿನಿಮಾ, ಕ್ರಿಕೆಟ್ ಅಂತಾ ಓಡಾಡ್ತಿದ್ದವನನ್ನ ಜೊತೆಯಲ್ಲಿದ್ದವರೇ ಕೊಂದಿದ್ದೇಕೆ..? appeared first on News First Kannada.

Source: newsfirstlive.com

Source link