ಬ್ಯಾಡ್ಮಿಂಟನ್- ಸೆಮಿಫೈನಲ್​ನಲ್ಲಿ ಪಿ.ವಿ.ಸಿಂಧುಗೆ ಸೋಲು

ಬ್ಯಾಡ್ಮಿಂಟನ್- ಸೆಮಿಫೈನಲ್​ನಲ್ಲಿ ಪಿ.ವಿ.ಸಿಂಧುಗೆ ಸೋಲು

ಟೋಕಿಯೋ ಒಲಿಂಪಿಕ್ಸ್​​ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್​ ಸೆಮಿಫೈನಲ್​ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು ಎಡವಿದ್ದಾರೆ. ಸೆಮಿಫೈನಲ್​ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಥಾಯ್ಲಾಂಡ್​​ನ ತೈ ಜು ಯಿಂಗ್ ವಿರುದ್ಧ ಸಿಂಧು ಸೋಲುಂಡಿದ್ದಾರೆ. ಮೊದಲ ಸೆಟ್​​ನಲ್ಲಿ 18-21ರ ಅಂತರದಲ್ಲಿ ಸೋಲುಂಡ ಸಿಂಧು, 2ನೇ ಸೆಟ್​​​ನಲ್ಲಿ 12-21ರ ಅಂತರದಲ್ಲಿ ಸೋಲುಂಡರು. ನಿನ್ನೆ ಜಪಾನ್​ನ ಯಮಗೂಚಿ ಅಕಾನೆ ವಿರುದ್ಧ ಕ್ವಾರ್ಟರ್​ ಫೈನಲ್​ನಲ್ಲಿ 2ನೇರ ಸೆಟ್​ಗಳ ಅಧಿಕಾರಯುತ ಜಯ ಸಾಧಿಸಿ ಸಿಂಧು, ಸೆಮಿಫೈನಲ್​ ಪ್ರವೇಶಿಸಿದ್ರು. ನಾಳೆ ಹೀ ಬಿಂಗ್​ ಚಿಯಾವ್​ ವಿರುದ್ಧ ಕಂಚಿನ ಪದಕಕ್ಕಾಗಿ ಸಿಂಧು ಹೋರಾಟ ನಡೆಸಲಿದ್ದಾರೆ.

The post ಬ್ಯಾಡ್ಮಿಂಟನ್- ಸೆಮಿಫೈನಲ್​ನಲ್ಲಿ ಪಿ.ವಿ.ಸಿಂಧುಗೆ ಸೋಲು appeared first on News First Kannada.

Source: newsfirstlive.com

Source link