ರಾಜ್ಯ ಉಸ್ತುವಾರಿಯ ಎದುರೇ ಕೈ ಸ್ಥಳೀಯ ಮುಖಂಡರ ಕಿತ್ತಾಟ

ರಾಜ್ಯ ಉಸ್ತುವಾರಿಯ ಎದುರೇ ಕೈ ಸ್ಥಳೀಯ ಮುಖಂಡರ ಕಿತ್ತಾಟ

ಬೆಳಗಾವಿ: ನಗರದಲ್ಲಿ ನಡೆದ ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಮುಂದೆಯೇ ಇಬ್ಬರು ಕಾಂಗ್ರೆಸ್​ ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದ್ದು ವಿಡಿಯೋ ವೈರಲ್​ ಆಗಿದೆ.

ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಮತ್ತು ಡಿ.ಕೆ. ಶಿವಕುಮಾರ್​ ಸಮ್ಮುಖದಲ್ಲೇ ವಾಗ್ವಾದ ನಡೆದಿದ್ದು ತೀವ್ರ ಮುಜುಗರ ಉಂಟು ಮಾಡಿದೆ. ನಿನ್ನೆ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಲು ಸ್ಥಳೀಯ ಮುಖಂಡ ಗಿರೀಶ ಗದಿಗೆಪ್ಪಗೌಡ ಆಗಮಿಸಿದ ವೇಳೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂಬಂಧಿ ಮತ್ತು ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿರುವ ರಜತ ಉಳ್ಳಾಗಡ್ಡಿಮಠ ಅವರು ಗಿರೀಶ್​ಗೆ ನಿನ್ನನ್ನು ಯಾರು ಒಳಗಡೆ ಬಿಟ್ಟೋರು ಎಂದು ಪ್ರಶ್ನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ವೇಳೆ ಈ ಇಬ್ಬರು ನಾಯಕರ ನಡುವಿನ ವಾಗ್ವಾದ ತಾರಕಕ್ಕೇರಿದ್ದು, ನಾವು ಪಕ್ಷದ ಕಾರ್ಯಕರ್ತರಾಗಿದ್ದರು ರಜತ್​ ಉಳ್ಳಾಗಡ್ಡಿಮಠ ನಮ್ಮನ್ನೂ ಒಳಗಡೆ ಬಿಡುತ್ತಿಲ್ಲ, ಇವರ್ಯಾರು ನಮ್ಮನ್ನು ಕೇಳೋದಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತನಾಡುವ ಭರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ ಕಿಸೆಯಲ್ಲಿದ್ದಾರೆ ಎಂದು ರಜತ್​ ಉಳ್ಳಾಗಡ್ಡಿಮಠ ಹೇಳುತ್ತಾರೆ ಎಂದು ಗಿರೀಶ್​ ಆರೋಪಿಸಿದ್ದು ವೇದಿಕೆಯಲ್ಲಿದ್ದ ನಾಯಕರಿಗೆ ತುಸು ಇರಿಸು ಮುರಿಸು ಉಂಟಾದ ಪ್ರಸಂಗ ನಡೆದಿದ್ದು ಕೈ ಮುಖಂಡರ ಈ ಜಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

The post ರಾಜ್ಯ ಉಸ್ತುವಾರಿಯ ಎದುರೇ ಕೈ ಸ್ಥಳೀಯ ಮುಖಂಡರ ಕಿತ್ತಾಟ appeared first on News First Kannada.

Source: newsfirstlive.com

Source link