ವರ್ಲ್ಡ್​ ನಂ.1 ಟೆನಿಸ್ ಆಟಗಾರ ಜೊಕೊವಿಕ್​ಗೆ ಶಾಕ್- ಪದಕವಿಲ್ಲದೆ ಒಲಿಂಪಿಕ್ಸ್​ನಿಂದ ಔಟ್

ವರ್ಲ್ಡ್​ ನಂ.1 ಟೆನಿಸ್ ಆಟಗಾರ ಜೊಕೊವಿಕ್​ಗೆ ಶಾಕ್- ಪದಕವಿಲ್ಲದೆ ಒಲಿಂಪಿಕ್ಸ್​ನಿಂದ ಔಟ್

ವಿಶ್ವದ ನಂಬರ್​​ ಒನ್​ ಟೆನ್ನಿಸ್​ ಆಟಗಾರ ಸರ್ಬಿಯಾದ ನೊವಾಕ್​ ಜೊಕೊವಿಚ್​​ ಪದಕವಿಲ್ಲದೇ ಒಲಿಂಪಿಕ್​​ ಅಭಿಯಾನ ಮುಗಿಸಿದ್ದಾರೆ. ಕಂಚಿನ ಪದಕಕ್ಕಾಗಿ ಇಂದು ನಡೆದ ಸೆಣೆಸಾಟದಲ್ಲಿ ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟಾ ವಿರುದ್ದ 6-4, 6-7 (6), 6-3ರ ಅಂತರದಲ್ಲಿ ಸೋಲು ಅನುಭವಿಸಿದರು. 2 ಗಂಟೆ 47 ನಿಮಿಷಗಳ ನಡೆದ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಪಾಬ್ಲೊ ಕರೆನೊ ಕಂಚಿನ ಪದಕಕ್ಕೆ ಮತ್ತಿಕ್ಕಿದ್ರು.

ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಎದುರು ಜೊಕೊವಿಚ್​ ಸೋಲುಂಡಿದ್ರು, ಸಧ್ಯ ಸಿಂಗಲ್ಸ್​ನಲ್ಲಿ ಪ್ರಶಸ್ತಿಯಿಲ್ಲದೇ ಅಭಿಯಾನ ಮುಗಿಸಿರುವ ಜೊಕೊವಿಚ್‌ಗೆ ಮಿಕ್ಸ್​​ ಡಬಲ್ಸ್​ನಲ್ಲಿ ಪದಕ ಗೆಲ್ಲುವ ಕೊನೆಯ ಅವಕಾಶವಿದೆ. ಇಂದೇ ಜೊಕೊವಿಚ್ ಹಾಗೂ ನೀನಾ ಸ್ಟೊಜಾನೊವಿಚ್‌ ಜೋಡಿ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

The post ವರ್ಲ್ಡ್​ ನಂ.1 ಟೆನಿಸ್ ಆಟಗಾರ ಜೊಕೊವಿಕ್​ಗೆ ಶಾಕ್- ಪದಕವಿಲ್ಲದೆ ಒಲಿಂಪಿಕ್ಸ್​ನಿಂದ ಔಟ್ appeared first on News First Kannada.

Source: newsfirstlive.com

Source link