ಇದೇನಾ ನಿಮ್ಮ ಡೆಲ್ಲಿ ‘ವರ್ಲ್ಡ್ ಕ್ಲಾಸ್ ಮಾಡೆಲ್?’ ಹೊಂಡ ತೋರಿಸಿ​ ಕೇಜ್ರಿವಾಲ್​​ಗೆ ಬಿಜೆಪಿ ಟಾಂಗ್

ಇದೇನಾ ನಿಮ್ಮ ಡೆಲ್ಲಿ ‘ವರ್ಲ್ಡ್ ಕ್ಲಾಸ್ ಮಾಡೆಲ್?’ ಹೊಂಡ ತೋರಿಸಿ​ ಕೇಜ್ರಿವಾಲ್​​ಗೆ ಬಿಜೆಪಿ ಟಾಂಗ್

ನವದೆಹಲಿ: ದೆಹಲಿಯ ಹಾಜ್ ಕಾಸ್​ ಬಳಿ ರಸ್ತೆಯೊಂದರ ನಟ್ಟನಡುವೆ ದೈತ್ಯಾಕಾರದ ಗುಂಡಿಯೊಂದು ಬಾಯ್ತೆರೆದ ಕಾರಣ ಸಿಎಂ ಅರವಿಂದ್​​ ಕೇಜ್ರಿವಾಲ್​​ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ದೆಹಲಿ ಸಂಸದ ಪರ್ವೇಶ್​​​ ಸಾಹಿಬ್​ ಸಿಂಗ್, ಕೇಜ್ರಿವಾಲ್​​ ಸರ್ಕಾರದ ವರ್ಲ್ಡ್ ಕ್ಲಾಸ್ ಮಾಡೆಲ್​​ಗೆ ಇದು ಜೀವಂತ ಉದಾಹರಣೆ ಎಂದು ಲೇವಡಿ ಮಾಡಿದ್ದಾರೆ.

ದೆಹಲಿ ಸರ್ಕಾರ ಸಾರ್ವಜನಿಕರಿಗೆ ಸಾವಿನ ಗುಂಡಿ ತೋಡಿದೆ. ಇದನ್ನೇ ಕೇಜ್ರಿವಾಲ್​​ ನಮ್ಮದು ವರ್ಲ್ಡ್ ಕ್ಲಾಸ್ ಮಾಡೆಲ್​ ಎಂದು ಹೇಳುತ್ತಿರೋದು. ಇವರ ವರ್ಲ್ಡ್ ಕ್ಲಾಸ್ ಮಾಡೆಲ್​​ ಡೆಲ್ಲಿ ಹೀಗಿದೆ ನೋಡಿ ಎಂದು ಬೃಹತ್​​​ ಗುಂಡಿ ತೆರೆದ ವಿಡಿಯೋ ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ ಬಿಜೆಪಿ ಸಂಸದ ಪರ್ವೇಶ್​​​ ಸಾಹಿಬ್​ ಸಿಂಗ್.

ಇಂದು ಬೆಳಗ್ಗೆ 09:30-10:00 ಗಂಟೆ ಸುಮಾರಿಗೆ ದೆಹಲಿಯ ಹಾಜ್ ಕಾಸ್​ ಬಳಿ ಸಾರ್ವಜನಿಕರು ಬೃಹತ್ ಗುಂಡಿಯೊಂದು ರಸ್ತೆ ಮಧ್ಯೆಯೇ ತೆರೆದುಕೊಂಡಿರೋದನ್ನ ಕಂಡು ಗಾಬರಿ ಬಿದ್ದಿದ್ದಾರೆ. ತಕ್ಷಣವೇ ಗುಂಡಿಯ ಸುತ್ತ ಬ್ಯಾರಿಕೇಡ್​​ಗಳನ್ನ ಜೋಡಿಸಲಾಗಿ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.

ದೆಲ್ಲಿ ಜಲ್ ಬೋರ್ಡ್​ಗೆ ಸಂಪರ್ಕಿಸುವ ಕಾಲುವೆಯೊಂದು ಈ ಮಾರ್ಗವಾಗಿ ಹಾದುಹೋಗಿರುವ ಪರಿಣಾಮ ರಸ್ತೆಯ ಮಧ್ಯೆ ಗುಂಡಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಗುಂಡಿ ನಿರ್ಮಾಣವಾಗಿರುವುದರ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ.. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

The post ಇದೇನಾ ನಿಮ್ಮ ಡೆಲ್ಲಿ ‘ವರ್ಲ್ಡ್ ಕ್ಲಾಸ್ ಮಾಡೆಲ್?’ ಹೊಂಡ ತೋರಿಸಿ​ ಕೇಜ್ರಿವಾಲ್​​ಗೆ ಬಿಜೆಪಿ ಟಾಂಗ್ appeared first on News First Kannada.

Source: newsfirstlive.com

Source link