ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

ಟೋಕಿಯೋ: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ಸ್ ನಲ್ಲಿ ಮುಗ್ಗರಿಸಿದ್ದು, ಈ ಮೂಲಕ ಬ್ಯಾಡ್ಮಿಂಟನ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈ ತಪ್ಪಿದಂತಾಗಿದೆ.

ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ ನಂ.1 ಆಟಗಾರ್ತಿ ಚೀನಾದ ತೈ ಜು ಯಿಂಗ್ ಆಕ್ರಮಣಕಾರಿ ಆಟವಾಡಿದರು. ಹೀಗಾಗಿ 21-18, 21-12 ನೇರ ಸೆಟ್‍ಗಳಲ್ಲಿ ಪಿ.ವಿ.ಸಿಂಧು ಸೋಲನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಪ್ರವೇಶಿಸಿದ್ದಾರೆ.

ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಹಿ ಬಿಂಗ್ ಜಿಯಾವೋ ಅವರೊಂದಿಗೆ ಸೆಣಸಲಿದ್ದಾರೆ.

blank

ಸಿಂಧು ವಿರುದ್ಧ ತೈ ಜು ಯಿಂಗ್ ಈ ಮೊದಲು 13-7 ರ ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್‍ಶಿಪ್ ಮೊದಲಾದ ಪಂದ್ಯಗಳಲ್ಲಿ ತೈ ಜು ಯಿಂಗ್ ಗೆ ಪಿ.ವಿ.ಸಿಂಧು ಸೋಲಿನ ರುಚಿ ತೋರಿಸಿದ್ದರು.

The post ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ appeared first on Public TV.

Source: publictv.in

Source link