ಕೆಜಿಎಫ್ ತಂಡಕ್ಕೆ ಕಾಡ್ತಿದೆ ಅಧೀರನ ಪಾತ್ರದ್ದೇ ಚಿಂತೆ..!

ಕೆಜಿಎಫ್ ತಂಡಕ್ಕೆ ಕಾಡ್ತಿದೆ ಅಧೀರನ ಪಾತ್ರದ್ದೇ ಚಿಂತೆ..!

ಪ್ರಶಾಂತ್​ ನೀಲ್​ ಚಿತ್ರರಂಗದ ಸಮುದ್ರದಲ್ಲಿ ಕೆಜಿಎಫ್ ಎಂಬ ಚಿನ್ನದ ಮೀನು ಹಿಡಿದ ನಾವಿಕ.. ಕೆಜಿಎಫ್1 ಚಿತ್ರದ ಮೂಲಕ ಸೌಥ್ ಸಿನಿ ದಿಗ್ಗಜರ ತಲೆಗೆ ಹುಳ ಬಿಟ್ಟ ಸೈನಿಕ.. ನಿರೀಕ್ಷೆಗೂ ಮೀರಿದ ಸಕ್ಸಸ್​ ಪಡೆದ ನೀಲ್​ಗೆ ಈಗ ಅಧೀರನ ಪಾತ್ರದ್ದೇ ಚಿಂತೆಯಾಗಿದ್ಯಂತೆ.. ಅಧೀರನ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.

ಕೆಜಿಎಫ್ ಚಿತ್ರ ಪವರ್​ ಪುಲ್ ಪಾತ್ರಗಳ ಮೂಲಕ ಸಖತ್ ಸೌಂಡ್ ಮಾಡಿರೋ ಚಿತ್ರ.. ರಾಖಿ, ಗರುಡ, ಅಧೀರ, ರಮೀಕಾ ಸೇನ್, ಪಾತ್ರಗಳ ಜನಕ ನೀಲ್​ ಸದ್ಯ ಚಾಪ್ಟರ್ ನಲ್ಲಿ ಅಬ್ಬರಿಸಲು ರೆಡಿಯಾಗಿರುವ ಅಧೀರನ ಕನವರಿಕೆಯಲ್ಲಿದ್ದಾರೆ.. ಚಾಪ್ಟರ್ 1 ನಲ್ಲಿ ಅಧೀರನ ಪಾತ್ರಧಾರಿಯನ್ನು ರಿವೀಲ್​ ಮಾಡದೆ ನೀಲ್ ಕುತೂಹಲ ಮೂಡಿಸಿದ್ರು, ಅಲ್ಲದೆ ಅಧೀರನ ಪಾತ್ರಕ್ಕೆ ಮುನ್ನಭಾಯ್​ನ ಕರ್ಕೊಂಡ್​ ಬಂದು ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದ್ದಾರೆ ನೀಲ್..

blank

ಅಧೀರನ ಪಾತ್ರವನ್ನು ಸೃಷ್ಟಿಸಿರೋ ನೀಲ್​ಗೆ ಈಗ ಅಧೀರನ ಪಾತ್ರವೇ ಮತ್ತಷ್ಟು ಚಾಲೆಂಜ್​ ಕೊಟ್ಟಿದೆ.. ಅದೇನಪ್ಪ ಅಂದ್ರೆ ನೀಲ್ ಅಧೀರನ ಪಾತ್ರದಲ್ಲಿ ಸಂಜು ಬಾಬನ ಭರ್ಜರಿಯಾಗಿ ತೋರ್ಸಿದ್ದಾರೆ.. ಇದಕ್ಕೆ ಟ್ರಯಲ್ ಎಂಬಂತೆ ಅಧೀರನ ಲುಕ್ ಹಾಗೂ ಪೋಸ್ಟರ್​ಗಳೇ ಸಾಕ್ಷಿ.. ಆದರೆ ಅಧೀರನ ಪಾತ್ರ ಸಂಪೂರ್ಣವಾಗಿ ಗೆಲ್ಲಬೇಕಾದ್ರೆ ಅಧೀರನ ಪಾತ್ರದ ಧ್ವನಿಯೂ ಪ್ರಮುಖ ಪಾತ್ರ ವಹಿಸುತ್ತೆ. ಇದರಿಂದ ನೀಲ್ ಅಧೀರನ ಪಾತ್ರಕ್ಕೆ ಯಾರಿಂದ ಡಬ್ಬಿಂಗ್ ಮಾಡಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.

ಈಗಾಗಲೇ ಅಧೀರನ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲು ಎಲ್ಲಾ ಭಾಷೆಗಳ ಕಂಠದಾನ ಕಲಾವಿದರ ಟ್ರಯಲ್ ಮಾಡಲು ನೀಲ್ ಸಿದ್ಧರಾಗಿದ್ದಾರೆ. ಮಾಹಿತಿಗಳ ಪ್ರಕಾರ ನಿನ್ನೆ ಅಧೀರನ ತೆಲುಗು ವರ್ಷನ್ ಡಬ್ಬಿಂಗ್ ಟ್ರಯಲ್ ಮಾಡೋಕೆ ಟಾಲಿವುಡ್​ ಕಂಠದಾನ ಕಲಾವಿದ ಪವನ್ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಒಂದು ವೇಳೆ ಪವನ್ ವಾಯ್ಸ್​ ಅಧೀರನ ಪಾತ್ರಕ್ಕೆ ಮ್ಯಾಚ್ ಆದ್ರೆ ತೆಲುಗು ವರ್ಸನ್ ಡಬ್ಬಿಂಗ್ ಮುಗಿಸಿ, ಸೋಮವಾರ ಮಲಯಾಳಂ ವರ್ಸನ್ ಡಬ್ಬಿಂಗ್ ಕೆಲಸಕ್ಕೆ ಕೈಹಾಕಲಿದ್ದಾರೆ. ಆದ್ರೆ ಕನ್ನಡದಲ್ಲಿ ಅಧೀರನ ಪಾತ್ರಕ್ಕೆ ಯಾರು ಮಾತಿನ ಮೂಲಕ ಜೀವ ತುಂಬಲಿದ್ದಾರೆ ಅನ್ನೊದನ್ನು ನೀಲ್ ಇದುವರಗೂ ಎಲ್ಲು ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ: ರಾಕಿ ಭಾಯ್​ KGF-2ಗೆ ಎಲ್ಲಿಲ್ಲದ ಡಿಮ್ಯಾಂಡ್; ಹೊಂಬಾಳೆ ಬೆನ್ನು ಬಿದ್ದ ಒಡಿಶಾ ಸಿನಿ ಇಂಡಸ್ಟ್ರಿ

The post ಕೆಜಿಎಫ್ ತಂಡಕ್ಕೆ ಕಾಡ್ತಿದೆ ಅಧೀರನ ಪಾತ್ರದ್ದೇ ಚಿಂತೆ..! appeared first on News First Kannada.

Source: newsfirstlive.com

Source link