ಮಂತ್ರಿ ಮಂಡಲ ಗಲಾಟೆ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಿ; ಹೆಚ್​​ಡಿಕೆ ಸಿಟ್ಟು

ಮಂತ್ರಿ ಮಂಡಲ ಗಲಾಟೆ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಿ; ಹೆಚ್​​ಡಿಕೆ ಸಿಟ್ಟು

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೊನಾ, ಇನ್ನೊಂದೆಡೆ ಪ್ರವಾಹದ ಹಾವಳಿ. ಹೀಗಿರುವಾಗ ಸರ್ಕಾರ ಮಂತ್ರಿ ಮಂಡಲದ ಗಲಾಟೆ ಪಕ್ಕಕ್ಕಿಟ್ಟು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಎಂದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್​ಡಿಕೆ, ಯಾವುದೇ ಕಾರಣಕ್ಕೂ ಈ ಸಮಸ್ಯೆಗಳನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು.

ಕೇವಲ ಮಂತ್ರಿ ಮಂಡಲದ ರಚನೆಯಲ್ಲಿ ಸರ್ಕಾರದ ಗಮ‌ನ ಹೋದರೆ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಕೂಡಲೇ ಸಿಎಂ ತಮ್ಮ ಅಧಿಕಾರದಿಂದ ಐಎಎಸ್ ಅಧಿಕಾರಿಗಳನ್ನ ನೇಮಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಹ ನಿರ್ವಹಣೆ ಕುರಿತು ಕಾರ್ಯ ನಿರ್ವಹಣೆ ಮಾಡುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಬೃಂದಾವನ ಪ್ರಾಪರ್ಟೀಸ್ ಕೇಸ್​: ವಂಚನೆಗೊಳಗಾದವರಿಂದ ಪೊಲೀಸ್​ ಠಾಣೆಯ ಎದುರು ಪ್ರತಿಭಟನೆ

ಈಗ ಉಸ್ತುವಾರಿ ಸಚಿವರುಗಳೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಗಳನ್ನ ಕಳುಹಿಸಬೇಕು. ಕೇರಳ, ತಮಿಳುನಾಡು, ಮಹಾರಾಷ್ಟ್ರದಿಂದ ಬರುವವರ ಕಂಟ್ರೋಲ್ ಮಾಡಲು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಬೇಕು. ಅಧಿಕಾರಿಗಳು ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಯಡಿಯೂರಪ್ಪ ಏನ್​ ಮಾಡಿದ್ರು..?

ಇನ್ನು, ಮೊದಲು ಬೆಲ್ಲದ್​ ಮುಖ್ಯಮಂತ್ರಿ ಆಗುತ್ತಾರೆ ಎಂದಿತ್ತು. ಬಿ.ಎಸ್​ ಯಡಿಯೂರಪ್ಪ ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅರವಿಂದ್ ಬೆಲ್ಲದ್ ಈ ಬಗ್ಗೆ ಹೇಳಬೇಕು. ಇಂದಿನ ಸಿಎಂ ಕೆಲಸ ಮಾಡುತ್ತಾರೆ ಎಂಬ ದೊಡ್ಡ ಮಟ್ಟದ ನಿರೀಕ್ಷೆಯಿಲ್ಲ. ಹೈಕಮಾಂಡ್​​​ ಸಿಎಂಗೆ ಕೆಲಸ ಮಾಡಲು ಅವಕಾಶ ನೀಡಲಿ ಎಂದರು.

The post ಮಂತ್ರಿ ಮಂಡಲ ಗಲಾಟೆ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಿ; ಹೆಚ್​​ಡಿಕೆ ಸಿಟ್ಟು appeared first on News First Kannada.

Source: newsfirstlive.com

Source link