ಹೆಸರು, ಶೇಂಗಾ ಬೆಳೆಗೆ ಹಳದಿ ರೋಗ.. ಕಂಗಾಲಾದ ಕೊಪ್ಪಳ ರೈತರು

ಹೆಸರು, ಶೇಂಗಾ ಬೆಳೆಗೆ ಹಳದಿ ರೋಗ.. ಕಂಗಾಲಾದ ಕೊಪ್ಪಳ ರೈತರು

ಕೊಪ್ಪಳ: ರಾಜ್ಯಾದ್ಯಂತ ಮಳೆ ಆರಂಭವಾಗಿ ಕೆಲವು ಭಾಗಗಳಲ್ಲಿ ಅಬ್ಬರಿಸಿ ಬೊಬ್ಬಿರಿದು ಜನರನ್ನ ಹೈರಾಣಾಗಿಸಿದ್ದರೆ, ಕೊಪ್ಪಳದಲ್ಲಿ ಮಾತ್ರ ಮಳೆಯಾಗಿಲ್ಲ ಎಂದು ರೈತಾಪಿ ವರ್ಗ ಗೋಳಾಡ್ತಿದೆ.

ಮಳೆಯಾಶ್ರಿತ ಭೂಮಿಯ ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ. ಇನ್ನೊಂದೆಡೆ ರೈತರು ಬೆಳೆದ ಬೆಳೆಗಳಿಗೆ ಹಳದಿ ರೋಗ ಕಾಯಿಲೆ ಬರುತ್ತಿದ್ದು ಕೈಗೆ ಬಂದ ಬೆಳೆ ಬಾಯಿಗೆ ಬರದಂಗಾಗತ್ತಾ ಎಂಬ ಆತಂಕದಲ್ಲಿದ್ದಾರೆ.

ಹೌದು! ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದು, ಆರಂಭದಲ್ಲಿ ಜಟಿ ಜಿಟಿ ಮಳೆಯಿಂದ ಬಿತ್ತನೆ ಮಾಡಿದ ಹೆಸರು ಮತ್ತು ಶೇಂಗಾ ಬೆಳೆಗಳಿಗೆ ಹಳದಿ ಬಣ್ಣದ ರೋಗ ಕಾಣಿಸಿಕೊಂಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರು ಸಾಲ ಸೂಲ ಮಾಡಿ ಹೆಸರು ಶೇಂಗಾ ಬಿತ್ತನೆಗೆ ಒಂದು ಎಕರೆಗೆ 25ರಿಂದ 50 ಸಾವಿರ ರುಪಾಯಿ ವೆಚ್ಚ ಮಾಡಿದ್ದು ಈಗ ಹಳದಿ ರೋಗ ರೈತರನ್ನು ಚಿಂತೆಗೀಡು ಮಾಡಿದೆ.

blank

ಕೀಟನಾಶ ಔಷಧಿಗಳನ್ನು ಸಿಂಪಡಿಸಿದ್ರು, ರೋಗ ಮಾತ್ರ ನಿಲ್ಲುತ್ತಿಲ್ಲ ಎನ್ನುತ್ತಿರುವ ರೈತರು, ಇದರಿಂದ ಕಟಾವುಗೆ ಬಂದ ಬೆಳೆ ಸಂಪೂರ್ಣ ನಾಶವಾಗಿದೆ. ಈ ಭಾಗದಲ್ಲಿ ಪ್ರಕೃತಿ ವಿಕೋಪ ಹಾಗೂ ಬರಗಾಲದಿಂದ ಸತತ ಮೂರು ವರ್ಷಗಳಿಂದ ಬೆಳೆ ನಾಶವಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿ ಪರಿಹಾರ ನೀಡಬೇಕು ಅಂತಾ ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಹೆಸರು ಶೇಂಗಾ ಸೇರಿದಂತೆ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಎಷ್ಟೊಂದು ಸಲ ಕೀಟ ನಾಶಕ ಸಿಂಪಡಣೆ ಮಾಡಿದರೂ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ತಮ್ಮ ಅಲಳು ತೋಡಿಕೊಳ್ಳುತ್ತಿರುವ ರೈತರು ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ.

The post ಹೆಸರು, ಶೇಂಗಾ ಬೆಳೆಗೆ ಹಳದಿ ರೋಗ.. ಕಂಗಾಲಾದ ಕೊಪ್ಪಳ ರೈತರು appeared first on News First Kannada.

Source: newsfirstlive.com

Source link