ಪದಕ ಗೆಲ್ಲದ್ದಕ್ಕೆ ದೇಶದ ಕ್ಷಮೆ ಕೇಳಿ ಭಾವುಕರಾದ ಬಾಕ್ಸರ್ ಮೇರಿ ಕೊಮ್

ಪದಕ ಗೆಲ್ಲದ್ದಕ್ಕೆ ದೇಶದ ಕ್ಷಮೆ ಕೇಳಿ ಭಾವುಕರಾದ ಬಾಕ್ಸರ್ ಮೇರಿ ಕೊಮ್

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟು ಮೇರಿ ಕೊಮ್ ಇಂದು ನವದೆಹಲಿಗೆ ವಾಪಸ್ಸಾಗಿದ್ದಾರೆ. ಈ ವೇಳೆ ಒಲಂಪಿಕ್ಸ್​​ನಲ್ಲಿ ಪದಕ ಗೆಲ್ಲಲಾಗಿದ್ದಕ್ಕೆ ಮೆರಿ ಕೊಮ್ ದೇಶದ ಕ್ಷಮೆ ಯಾಚಿಸಿದ್ದಾರೆ.

ಬರಿಗೈನಲ್ಲಿ ವಾಪಸ್ಸಾಗಿದ್ದಕ್ಕೆ ನನಗೆ ಬೇಸರವಿದೆ. ನಾನು ಮೆಡಲ್ ಜೊತೆಗೆ ವಾಪಸ್ಸಾಗಬೇಕು ಎಂದುಕೊಂಡಿದ್ದೆ. ಬಾಕ್ಸಿಂಗ್​ನ ವೇಳೆ ಅವರು ತೆಗೆದುಕೊಂಡ ನಿರ್ಧಾರ ತಿರುಚಿದ್ದು ಮತ್ತು ಮೋಸದ್ದು. ನಾನು ಮೊದಲ ರೌಂಡ್​ನಲ್ಲಿ ಗೆದ್ದಿದ್ದೆ.. ಹಾಗಿದ್ದಲ್ಲಿ ಹೇಗೆ ಸೋಲೋಕೆ ಸಾಧ್ಯ..? ನಾನು ದೇಶದ ಜನರಲ್ಲಿ ಕ್ಷಮೆ ಕೋರುತ್ತೇನೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​ನಿಂದ ಮೇರಿ ಕೋಮ್ ಔಟ್- ಸೋತು ಕಣ್ಣೀರಿಟ್ಟ ಮಾಜಿ ಚಾಂಪಿಯನ್

ಪಂದ್ಯಕ್ಕೂ ಮೊದಲು ಅಲ್ಲಿನ ಅಧಿಕಾರಿಗಳು ಬಂದು ನನಗೆ ನಿಮ್ಮ ಜೆರ್ಸಿಯನ್ನ ನೀವು ಧರಿಸುವಂತಿಲ್ಲ ಎಂದರು.. ಮೊದಲ ಮ್ಯಾಚ್​ನಲ್ಲಿ ನಾನು ಅದೇ ಜೆರ್ಸಿ ಧರಿಸಿದ್ದೆ.. ಆಗ ಯಾರೂ ನನ್ನನ್ನ ಕೇಳಲಿಲ್ಲ. ಅವರು ಮೊದಲೇ ನಮಗೆ ಹೇಳಬೇಕಿತ್ತು.. ನಮ್ಮ ಪ್ಲೇಯಿಂಗ್ ಕಿಟ್ ಪರಿಶೀಲಿಸಬೇಕಿತ್ತು. ಅದು ಒಂದು ರೀತಿಯ ಮಾನಸಿಕ ಹಿಂಸೆ.. ಅವರು ನಮಗೆ ಮಾತ್ರ ಯಾಕೆ ಹೀಗೆ ಹೇಳ್ತಾರೆ..? ಬೇರೆ ದೇಶಗಳಿಗೆ ಯಾಕೆ ಹೇಳಲ್ಲ..? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮತ್ತೊಂದು ಮೆಡಲ್​​ ಕನ್ಫರ್ಮ್​​- ಚೀನಿ ಸ್ಪರ್ಧಿಯನ್ನ ಬಗ್ಗುಬಡಿದ ಭಾರತದ ವನಿತೆ

ಇನ್ನು ಮುಂದೆಯೂ ಸಹ ಬಾಕ್ಸಿಂಗ್​ನಲ್ಲಿ ಪಾಲ್ಗೊಳ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ.. ಹೌದು ಹೌದು ಖಂಡಿತ ಆಡ್ತೇನೆ.. ನನಗೆ ಇನ್ನೂ ವಯಸ್ಸಿದೆ.. ನನಗೆ 40 ವರ್ಷ ಆಗುವವರೆಗೂ ನಾನು ಆಡ್ತೇನೆ ಎಂದು ಹೇಳಿದ್ದಾರೆ.

Source: newsfirstlive.com

Source link