ಕೇಂದ್ರ ಸಂಪುಟದಿಂದ ಹೊರಬಿದ್ದ ಬೆನ್ನಲ್ಲೇ ರಾಜಕೀಯಕ್ಕೆ ಗುಡ್​ಬೈ ಹೇಳಿದ ಬಬುಲ್ ಸುಪ್ರಿಯೋ

ಕೇಂದ್ರ ಸಂಪುಟದಿಂದ ಹೊರಬಿದ್ದ ಬೆನ್ನಲ್ಲೇ ರಾಜಕೀಯಕ್ಕೆ ಗುಡ್​ಬೈ ಹೇಳಿದ ಬಬುಲ್ ಸುಪ್ರಿಯೋ

ನವದೆಹಲಿ: ಬಿಜೆಪಿ ಸಂಸದ, ಮಾಜಿ ಸಚಿವ ಬಬುಲ್ ಸುಪ್ರಿಯೋ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯೇ ಬಬುಲ್ ಸುಪ್ರಿಯೋ ರಾಜಕೀಯ ತೊರೆಯಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದವು. ಇದೀಗ ರಾಜೀನಾಮೆ ಘೋಷಿಸುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ.

ವಿದಾಯ.. ನಾನು ಬೇರೆ ಯಾವುದೇ ಪಕ್ಷಕ್ಕೂ ಸೇರಿಕೊಳ್ತಿಲ್ಲ.. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವುದಕ್ಕೂ ಸೇರುತ್ತಿಲ್ಲ. ನನಗೆ ಯಾರೂ ಕೂಡ ಬನ್ನಿ ಎಂದು ಕರೆದೂ ಇಲ್ಲ. ನಾನು ಒನ್ ಟೀಮ್ ಪ್ಲೇಯರ್.. ನಾನು ಸಪೋರ್ಟ್ ಮಾಡಿದ್ದು ಒಂದೇ ಟೀಮ್.. ಇದ್ದದ್ದು ಒಂದೇ ಪಾರ್ಟಿಯಲ್ಲಿ.. ಅಷ್ಟೇ. ತುಂಬಾ ಕಾಲವನ್ನ ಇಲ್ಲಿ ಕಳೆದಿದ್ದೇನೆ. ಒಂದೇ ತಿಂಗಳಲ್ಲಿ ಸರ್ಕಾರಿ ನಿವಾಸವನ್ನ ಖಾಲಿ ಮಾಡ್ತೇನೆ.. ನನ್ನ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಬುಲ್ ಸುಪ್ರಿಯೋ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಂಪುಟ ಪುನಾರಚನೆ: ಪ್ರಕಾಶ್ ಜಾವಡೇಕರ್, ರವಿಶಂಕರ್ ಪ್ರಸಾದ್ ರಾಜೀನಾಮೆ

ನಾಳೆ ಸ್ಪೀಕರ್ ಕಾಲಾವಧಿ ಕೇಳಿದ್ದು ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡು ಬಾರಿ ಪಾರ್ಲಿಮೆಂಟ್ ಸದಸ್ಯರಾಗಿದ್ದ ಬಬುಲ್ ಸುಪ್ರಿಯೋ ಅವರನ್ನ ಕಳೆದ ಜುಲೈ 7 ರಂದು ನಡೆದ ಸಂಪುಟ ಪುನಾರಚನೆ ವೇಳೆ ಕೈಬಿಡಲಾಗಿತ್ತು.

Source: newsfirstlive.com &nbspSource link