ವ್ಯಕ್ತಿ ಮೇಲೆ ದೌರ್ಜನ್ಯ ಮಾಡಿದ ಟ್ರಾಫಿಕ್​​​ ಪೊಲೀಸ್​​​ನಿಂದ ಕ್ಷಮೆ ಕೇಳಿಸಿದ ತುಮಕೂರು ಎಸ್​​ಪಿ

ವ್ಯಕ್ತಿ ಮೇಲೆ ದೌರ್ಜನ್ಯ ಮಾಡಿದ ಟ್ರಾಫಿಕ್​​​ ಪೊಲೀಸ್​​​ನಿಂದ ಕ್ಷಮೆ ಕೇಳಿಸಿದ ತುಮಕೂರು ಎಸ್​​ಪಿ

ತುಮಕೂರು: ತುಮಕೂರು ನಗರದ ಚರ್ಚ್ ಸರ್ಕಲ್ ಬಳಿ ವಾಹನ ಸಾವರರೊಬ್ಬರ ಮೇಲೆ ಟ್ರಾಫಿಕ್​​ ಪೊಲೀಸ್​​ ದೌರ್ಜನ್ಯ ಎಸಗಿದ್ದರು. ಸವಾರನ ಬೈಕ್​​​​ ನೆಲಕ್ಕೆ ತಳ್ಳಿ ಬಾಯಿಗೆ ಬಂದಹಾಗೆ ಬೈದು ಟ್ರಾಫಿಕ್​​ ಪೊಲೀಸ್​​ ದರ್ಪ ತೋರಿದ್ದರು ಎಂಬ ಆರೋಪ ಕೇಳಿಬಂದಿತ್ತು.

blank

ಹೀಗೆ ಸಾರ್ವಜನಿಕರ ಮೇಲೆ ಎಎಸ್​​ಐ ರಮೇಶ್​ ಎಂಬಾತ ದರ್ಪ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ಟ್ರಾಫಿಕ್​​​​ ಪೊಲೀಸ್​​ ರಮೇಶ್​​ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆಯೇ ತುಮಕೂರು ಎಸ್​​ಪಿ ರಾಹುಲ್​​ ಕುಮಾರ್​​​ ಶಹಾಪುರ್​​ ವಾಡ್​​ ಅವರು, ಎಎಸ್​ಐ ರಮೇಶ್​​​ರಿಂದ ದೌರ್ಜನ್ಯಕ್ಕೀಡಾದ ವ್ಯಕ್ತಿಗೆ ಕ್ಷಮೆ ಕೇಳಿಸಿದ್ದಾರೆ. ತಮ್ಮ ಚೇಂಬರ್​​ನಲ್ಲೇ ರಮೇಶ್​​ ಅವರಿಂದ ಕ್ಷಮೆ ಕೇಳಿಸಿದ ರಾಹುಲ್​ ಅವರು, ಇಬ್ಬರು ಪರಸ್ಪರ ಹೂಗುಚ್ಛ ನೀಡಿ ಅಪ್ಪಿಕೊಂಡಿದ್ದಾರೆ. ಎಸ್​​ಪಿ ರಾಹುಲ್​ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Source: newsfirstlive.com Source link