ಸಂಕ್ರಾಂತಿಗೆ ಮೂರು ಟಾಲಿವುಡ್​ ಬಿಗ್​ ಸ್ಟಾರ್​ ಸಿನಿಮಾಗಳು ರಿಲೀಸ್​.. ಯಾರದ್ದು ಮೇಲುಗೈ?

ಸಂಕ್ರಾಂತಿಗೆ ಮೂರು ಟಾಲಿವುಡ್​ ಬಿಗ್​ ಸ್ಟಾರ್​ ಸಿನಿಮಾಗಳು ರಿಲೀಸ್​.. ಯಾರದ್ದು ಮೇಲುಗೈ?

ಲಾಕ್​ ಡೌನ್​ ಕೊಂಚ ಸಡಿಲಿಕೆ ಆದ ನಂತ್ರ ಸಿನಿಮಾ ಉದ್ಯಮ ಧೂಳು ಕೊಡವಿಕೊಂಡು ಎದ್ದು ನಿಂತಿದೆ. ಅದರಲ್ಲೂ ಟಾಲಿವುಡ್​ನಲ್ಲಿ ಸ್ಟಾರ್​ ವಾರೇ ಶುರುವಾಗಿದೆ. ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು, ಯಂಗ್​ ರೆಬಲ್​ ಸ್ಟಾರ್ ಬಾಹುಬಲಿ ಪ್ರಭಾಸ್​​, ಹಾಗೂ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಈ ಸ್ಟಾರ್​ ವಾರ್​ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಾಹುಬಲಿ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​ ಸಿನಿಮಾ’ ಪ್ಯಾನ್​ ಇಂಡಿಯಾ ಲೆವೆಲ್​ಗೆ ಸದ್ದು ಮಾಡುತ್ತಿರುವ ರಾಧಾ ಕೃಷ್ಣ ಕುಮಾರ್​ ನಿರ್ದೇಶನದ ಸಿನಿಮಾ. ‘ರಾಧೆ ಶ್ಯಾಮ್’​ ಸಿನಿಮಾ ಯವಾಗ ಬಿಡುಗಡೆಯಾಗುತ್ತದೆ ಎಂದು ಪ್ರಭಾಸ್​ ಡೈ ಹಾರ್ಡ್​​ ಪ್ಯಾನ್ಸ್ ಕೇಳುತ್ತಲೇ ಇದ್ದರು. ಈ ಪ್ರಶ್ನೆಗೆ ಉತ್ತರ ಸಂಕ್ರಾಂತಿ ಹಬ್ಬ.ಈ ವಿಚಾರವನ್ನು ಕೇಳಿದ ಪ್ರಬಾಸ್​ ಡೈ ಹಾರ್ಡ್ ಫ್ಯಾನ್ಸ್​ ಫುಲ್​ ಖುಷಿಯಲ್ಲಿದ್ದಾರೆ

ಇನ್ನು, ಟಾಲಿವುಡ್​ ಮಿಲ್ಕ್​ ಬಾಯ್​ ಸೂಪರ್​ ಸ್ಟಾರ್​ ಮಹೇಶ್​ ಬಾಬುರ ಬಹಳ ನಿರೀಕ್ಷಿತ ಚಿತ್ರ, ಪರಶುರಾಮ್​ ನಿರ್ದೇಶನ ‘ಸರ್ಕಾರುವಾರಿ ಪಾಟ’ ಸಿನಿಮಾದ ಸಂಪೂರ್ಣ ಶೂಟಿಂಗ್​ ಮುಗಿಸಿಕೊಂಡು ಸಾಂಕ್ರಾಂತಿಗೆ ನಾವೂ ಮರುತ್ತೇವೆ ಅಂತ ಸಾರ್ಕಾರು ವಾರಿ ಪಾಟ ಟೀಂ ‘ರಾಧ ಶ್ಯಾಮ್’ಗೆ​ ಸವಾಲ್​ ಆಗಿ ನಿಂತಿದ್ದಾರೆ.

blank

ಎರಡೇ ಸಿನಿಮಾ ತಾನೆ ಹೇಗಾದ್ರು ಮ್ಯಾನೇಜ್​ ಮಾಡ್ಬೋದು ಅಂತಾ ಏನಾದ್ರು ಟಾಲಿವುಡ್​ ಸಿನಿ ಪಂಡಿತರು ಅಂದುಕೊಂಡ್ರೆ, ಅದೇ ಸಂಕ್ರಾಂತಿ ಹಬ್ಬಕ್ಕೆ ನಾವು ಬರ್ತಿದ್ದೀವಿ ಅಂತ , ಟಾಲಿವುಡ್​ನ ಫ್ಯಾನ್ಸ್​ ಕಾ ಬಾಪ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಕೂಡ ರೆಡಿಯಾಗಿದ್ದಾರೆ. ತ್ರಿವಿಕ್ರಮ್​ ಸಾರಥ್ಯದಲ್ಲಿ ಪವನ್​ ಕಲ್ಯಾಣ್​ ನಟನೆಯ ‘ಭೀಮುಲ ನಾಯಕ್’​ ಸಿನಿಮಾದ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಇಬ್ಬರು ಸ್ಟಾರ್​ಗಳಿಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ ಹಿಟ್​ ಜೋಡಿ ತ್ರಿವಿಕ್ರಮ್​ ಮತ್ತು ಪವನ್​ ಕಲ್ಯಾಣ್​.

blank

ಈ ಮೂರು ಟಾಲಿವುಡ್​ ಬಿಗ್​ ಸ್ಟಾರ್​ ಸಿನಿಮಾಗಳು ಮೊಂದಿನ ವರ್ಷ ಜನವರಿಯಲ್ಲಿ ಸಂಕ್ರಾಂತಿಗೆ ಬಂದಿದ್ದೇ ಆದರೆ ಟಾಲಿವುಡ್​ನಲ್ಲಿ ಸ್ಟಾರ್​ ವಾರ್​ ನಡೆಯೊದಂತು ಸತ್ಯಅಂದತಿದ್ದಾರೆ  ಅಭಿಮಾನಿ ದೇವ್ರುಗಳು.

Source: newsfirstlive.com Source link