ನಿನ್ನ ಮೂಳೆ ಮುರಿಯುತ್ತೇನೆ: ಟಿಎಂಸಿ ಶಾಸಕನಿಗೆ ಬೆದರಿಕೆ ಹಾಕಿದ ಮಮತಾ ಬ್ಯಾನರ್ಜಿ ಆಪ್ತ

ನಿನ್ನ ಮೂಳೆ ಮುರಿಯುತ್ತೇನೆ: ಟಿಎಂಸಿ ಶಾಸಕನಿಗೆ ಬೆದರಿಕೆ ಹಾಕಿದ ಮಮತಾ ಬ್ಯಾನರ್ಜಿ ಆಪ್ತ

ನಿನ್ನ ಮೂಳೆ ಮರಿಯುತ್ತೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಶಾಸಕನೋರ್ವ ತನ್ನದೇ ಪಕ್ಷದ ಶಾಸಕರಿಗೆ ಧಮ್ಕಿ ಹಾಕಿರುವುದು ಭಾರೀ ಚರ್ಚೆಗೀಡಾಗಿದೆ.

ಭಾರತ್​​ಪುರದ ಟಿಎಂಸಿ ಶಾಸಕ ಹಿಮಾಯೂನ್​​​ ಕಬೀರ್​​​, ರೇಜಿನಗರ್ ಶಾಸಕ ರಾಬಿಯುಲ್ ಅಲಾಂ ಚೌಧರಿ ಎಂಬ ಶಾಸಕರಿಗೆ ಪಕ್ಷದ ಬಹಿರಂಗ ಸಭೆಯಲ್ಲಿ ಧಮ್ಕಿ ಹಾಕಿದ್ದಾರೆ.

blank

ರೇಜಿನಗರ್ ಶಾಸಕ ರಾಬಿಯುಲ್ ಅಲಾಂ ಚೌಧರಿ ನಿನ್ನದು ಜಾಸ್ತಿ ಆಗಿದೆ. ನನ್ನ ಮಾತು ಮೀರಿದರೆ ನಿನ್ನ ಮೂಳೆ ಮುರಿಯುತ್ತೇನೆ ಎಂದು ಹಿಮಾಯೂನ್​​​ ಕಬೀರ್ ಬೆದರಿಕೆ ಹಾಕಿದ್ದಾರೆ.

ಇನ್ನು, ಹಿಮಾಯೂನ್​​​ ಕಬೀರ್ ಬೆದರಿಕೆ ಹಾಕಿದ್ದ ವಿಡಿಯೋ ಈಗ ಭಾರೀ ವೈರಲ್​​ ಆಗಿದೆ. ಪಕ್ಷದ ನಾಯಕರು ಹಿಮಾಯೂನ್​​​ ಕಬೀರ್ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿಗೆ ದೂರು ನೀಡಿದ್ದಾರಂತೆ. ಕಬೀರ್​ ಮಮತಾ ಬ್ಯಾನರ್ಜಿಗೆ ತುಂಬಾ ಆಪ್ತರು ಎನ್ನಲಾಗಿದೆ. ಈ ಸಂಬಂಧ ಕಬೀರ್​​ಗೆ ಶೋಕಾಸ್​ ನೋಟಿಸ್​ ನೀಡಲಾಗಿದೆ.

Source: newsfirstlive.com Source link