133 ವರ್ಷ ಹಳೆಯದಾದ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ

133 ವರ್ಷ ಹಳೆಯದಾದ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ

ಬಹಳ ಕಷ್ಟ.. ತೆರೆಯ ಮೇಲೂ, ತೆರೆ ಹಿಂದೆಯೂ ಹೀರೋ ಆಗಿ ಬಾಳೋದು ಬಹಳನೇ ಕಷ್ಟ.. ಅಕ್ಷರಶಃ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರೀಲ್ ಮತ್ತು ರಿಯಲ್ ಲೈಫ್​​ನಲ್ಲಿ ಹೀರೋ ಆಗೋ ಕೆಲಸವನ್ನ ಮಾಡ್ತಿದ್ದಾರೆ.. ಅಕ್ಷರ ಮತ್ತು ಅನ್ನ ಈ ಎರಡು ಮನುಷ್ಯ

ಜೀವನಕ್ಕೆ ಅತ್ಯಅವಶ್ಯಕ.. ಈ ಕೆಲಸದಲ್ಲಿ ಕಿಚ್ಚ ಸುದೀಪ್ ಆಂಡ್ ಟೀಮ್ ಮಹತ್ತರಾದ ಹೆಜ್ಜೆಯೊಂದನ್ನ ಇಟ್ಟಿದೆ..
ಇಡೀ ವಿಶ್ವ ಇವತ್ತಿಗೂ ಹಸಿದವರಿಗೆ ಅನ್ನ, ಬಡ ಮಕ್ಕಳಿಗೆ ಶಿಕ್ಷಣ, ವಸತಿಯನ್ನ ಒದಗಿಸಲು ಹೋರಾಟ ಮಾಡ್ತಾಲೇ ಇದೆ.. ಅದರಂತೆ ನಮ್ಮ ದೇಶದ ಸರ್ಕಾರಗಳು ಕೂಡ ಸಾಕಷ್ಟು ಕೆಲಸಗಳನ್ನ ಮಾಡ್ತಿವೆ.. ಆದ್ರೆ ಸರ್ಕಾರ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡ್ರೆ ಸಾಲದು..ಇದ್ದವರು ಇಲ್ಲದ್ದಿದ್ದವರಿಗೆ ನೀಡೋ ಕೆಲಸ ಆಗಬೇಕು.. ನಟ ಕಿಚ್ಚ ಸುದೀಪ್ ಮತ್ತು ಅವರ ಆತ್ಮೀಯ ತಂಡ ಮಹತ್ತರ ಕೆಲಸಗಳನ್ನ ಮಾಡುತ್ತಿದೆ.. ಈ ಬಗ್ಗೆ ನಾವೇ ನಿಮಗೆ ಹೇಳಿದ್ವಿ..ಈಗ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯವರು ಅನ್ನ ಮತ್ತು ಅಕ್ಷರವನ್ನ ಬಡ ಮಕ್ಕಳಿಗೆ ನೀಡಲು ಮಹತ್ತರ ಹೆಜ್ಜೆಯನ್ನ ಇಡುತ್ತಿದೆ..

blank

ಸರ್ಕಾರಿ ಶಾಲೆಗಳಲ್ಲಿ ಓದಿ ಇವತ್ತು ದೊಡ್ಡ ದೊಡ್ಡ ಹುದ್ದೆ ಅಧಿಕಾರದಲ್ಲಿರುವವರೇ ಸರ್ಕಾರಿ ಶಾಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವಾಗ ಸುದೀಪ್ ಸ್ನೇಹ ಬಳಗ ಸರ್ಕಾರಿ ಶಾಲೆಗಳನ್ನ ಉಳಿಸೋ ಕಾರ್ಯಕ್ಕೆ ನೆನೆಗುದಿಗೆ ಬಿದ್ದಿರೋ ಹಳೆಯ ಸರ್ಕಾರಿ ಶಾಲೆಗಳನ್ನ ದತ್ತು ಪಡೆಯೋ ಪ್ರಕ್ರಿಯೆಗೆ ಮುಂದಾಗಿದೆ.. ಶಿವಮೊಗ್ಗದ 133 ವರ್ಷದ ಹಳೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನ ದತ್ತು ಸ್ವೀಕಾರ ಮಾಡಿದೆ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ..

ಹಸಿದವರಿಗೆ ಅನ್ನ , ಬಡ ಮಕ್ಕಳಿಗೆ ಶಿಕ್ಷಣ ಇವೆರೆಡೆ ದೇಶದ ದೊಡ್ಡ ಅಭಿವೃದ್ಧಿ ಅಸ್ತ್ರ.. ಈ ಸರ್ಕಾರಿ ಶಾಲೆ ಇದೆಯಲ್ಲ, ಇದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಿಟಿಯ ಮಧ್ಯದಲ್ಲಿರೋ ಶಾಲೆ. ಶಿವಮೊಗ್ಗದ ಬಿ.ಎಚ್​​ ರಸ್ತೆಯಲ್ಲಿರೋ 133 ವರ್ಷದ ಹಳೆಯದಾದ ಸರ್ಕಾರಿ ಶಾಲೆ ಇದು. ಈ ಶಾಲೆಯ ಪುನರ್​ ಚೇತನಕ್ಕೆ ಕಿಚ್ಚ ಪಣ ತೊಟ್ಟಿದ್ದಾರೆ. 133 ವರ್ಷ ಹಳೆಯದಾದ ಈ ಶಾಲೆಯನ್ನ ದತ್ತು ಪಡೆದು, ಶಾಲೆಯ ಸರ್ವಾಂಗೀಣ ಅಭಿವೃದ್ದಿಯ ಜವಾಬ್ಧಾರಿಯನ್ನ ಹೊತ್ತಿದ್ದಾರೆ..

blank

ಸುದೀಪ್ ಇದುವರೆಗೂ ಸುಮಾರು 10 ಸರ್ಕಾರಿ ಶಾಲೆಗಳನ್ನ ದತ್ತು ಪಡೆದಿದ್ದಾರೆ. ವಿಶೇಷ ಅಂದ್ರೆ ತನ್ನ ಹುಟ್ಟೂರು ಶಿವಮೊಗ್ಗ ಒಂದರಲ್ಲೇ ನಶಿಸಿ ಹೋಗುತ್ತಿದ್ದ ಐದು ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಎಲ್ಲಾ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯದ ಜೊತೆಗೆ ಡಿಜಿಟಲೈಸ್ ಮಾಡುತ್ತಿದ್ದಾರೆ. ಹಳ್ಳಿ ಮಕ್ಕಳಿಗೆ ಬೇಕಾದ ಪಠ್ಯದ ಜೊತೆ ಲ್ಯಾಪ್​ಟಾಪ್​, ಕ್ರೀಡೆಗೆ ಬೇಕಾದ ವಸ್ತುಗಳು, ಶಾಲೆಗೆ ಸುಣ್ಣ ಬಣ್ಣ ಶಿತಿಲಗೊಂಡ ಕಟ್ಟಡಗಳ ನವೀಕರಣ ಹೀಗೆ ಶಾಲೆಗಳ ಸರ್ವಾಂಗೀಣ ಅಭಿವೃದ್ದಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸುದೀಪ್ ಬಳಗ ಕೆಲಸ ನಿಜಕ್ಕೂ ಶ್ಲಾಘನಿಯ..

Source: newsfirstlive.com Source link