ಟಾಪಾಗಿರೋ ಹುಡ್ಗಿಯ ಹಳ್ಳಿ ಪಾಡು.. ಸೆಗಣಿ ಬಾಚಿ, ಹಾಲು ಕರೆದು, ರೊಟ್ಟಿ ತಟ್ಟಿದ ಅದಿತಿ ಪ್ರಭುದೇವ

ಟಾಪಾಗಿರೋ ಹುಡ್ಗಿಯ ಹಳ್ಳಿ ಪಾಡು.. ಸೆಗಣಿ ಬಾಚಿ, ಹಾಲು ಕರೆದು, ರೊಟ್ಟಿ ತಟ್ಟಿದ ಅದಿತಿ ಪ್ರಭುದೇವ

ಶ್ಯಾನೆ ಟಾಪಾಗಿರೋ ಸ್ಯಾಂಡಲ್​​ವುಡ್​​​ ಫರ್ಫೆಕ್ಟ್ ಗರ್ಲ್ ಹಳ್ಳಿ ಸೇರಿದ್ದಾರೆ.. ಬೆಳಗ್ಗೆ ಬೇಗ ಎದ್ದು ಕೊಡ್ಲೇ ಮನೆ ಸಗಣಿ ಬಾಚಿ, ದನ ಕರುಗಳನ್ನ ತೊಳೆದು, ಹಾಲು ಕರೆದು, ಮನೆ ಕಸ ಗುಡಿಸಿ, ರೊಟ್ಟಿ ಮಾಡಿ ಪಕ್ಕಾ ಹಳ್ಳಿ ಹುಡ್ಗಿ ಆಗಿದ್ದಾರೆ.. ಅರೇ ಹೀಗೇಕೆ ಮಾಡಿದ್ರು ಅದಿತಿ ಪ್ರಭುದೇವ.. ಯಾವುದಾದ್ರು ಹೊಸ ಸಿನಿಮಾ ಮಾಡ್ತಿದ್ದಾರೆ ಹೆಂಗೆ..

ಎಷ್ಟೋ ಸಿನಿಮಾ ಪ್ರೇಕ್ಷಕರಿಗೆ ಸಿನಿಮಾದಲ್ಲಿ ನಟಿಸೋ ಹೀರೋ ಹೀರೋಯಿನ್​​ಗಳೆಂದ್ರೆ ಧರೆಗಿಳಿದ ತಾರೆಗಳಂತೆ ಕಾಣುತ್ತಾರೆ.. ಅವರ್ ಬಿಡಪ್ಪ ರಿಚ್ಚು, ಅವರಿಗೆಲ್ಲ ಇರೋದೆ ಹೆಚ್ಚು ಅಂತೆಲ್ಲ ಅನ್ಕೋಳ್ತಾರೆ.. ಆದ್ರೆ ಪ್ರಾಕ್ಟಿಕಲ್ಲೇ ಬೇರೆ, ಥೇರಿನೇ ಬೇರೆ ಅಂತಾರಲ್ಲ ಹಂಗೆ ನಟ-ನಟಿಯರ ಹಾಡು ಪಾಡು..

blank

ಸ್ಯಾಂಡಲ್​ವುಡ್​ನ ಫರ್ಫೆಕ್ಟ್ ಗರ್ಲ್ ಶ್ಯಾನ್ ಟಾಪಾ​ಗೌಳೆ ಖ್ಯಾತಿಯ ಅದಿತಿ ಪ್ರಭುದೇವ ಸ್ಕ್ರೀನ್​​ ಮೇಲೆ ಎಷ್ಟು ಸಂಭ್ರಮದಿಂದ ಕಾಣ್ತಾರೋ ಅಷ್ಟೇ ಸರಳವಾಗಿ ತನ್ನ ನಿಜ ಜೀವನದಲ್ಲಿ ಬದ್ಕೋ ಬ್ಯೂಟಿ.. ಶೂಟಿಂಗ್, ಗಿಟಿಂಗ್ ಇಲ್ದಾಗ ಮನೆ ಕೆಲಸ ಮಾಡ್ಕೊಂಡು ಸಾಮಾನ್ಯ ಹೆಣ್ಣು ಮಗಳಂತೆ ಇರ್ತಾರೆ.. ಅದಿತಿ ಪ್ರಭುದೇವ ಸಿಟಿ ಲೈಫ್​ಗೂ ಸೈ, ಹಳ್ಳಿ ಲೈಫ್​​ಗೂ ಜೈ ಅನ್ನೋ ಅಂದಾಗರ್ತಿ. ಸೋಶಿಯಲ್ ಸಮುದ್ರದಲ್ಲಿ ತನ್ನ ಅಭಿಮಾನಿಗಳಿಗಾಗಿ ಏನಾದ್ರೂ ಅಂದದ ಫೋಟೋಗಳನ್ನ, ಚೆಂದದ ವಿಡಿಯೋವನ್ನ ಬಿಟ್ಟು ಮೆಚ್ಚುಗೆಯ ಮಳೆಯನ್ನ ಪಡೆಯೋ ರಂಗ ನಾಯಕಿ ಈ ಬಾರಿ ಪಕ್ಕಾ ಹಳ್ಳಿ ಹುಡ್ಗಿಯಾಗಿದ್ದಾರೆ.

blank

ನೋಡಿ ನೋಡಿ.. ಬೆಳಗ್ಗೆದ್ದು ಕೊಟ್ಗೇ ಮನೆ ಗುಡಿಸಿ, ಸಗಣಿ ಬಾಚಿ, ದನಕರುಗಳಿಗೆ ಮೇವು ಹಾಕಿ, ಹಾಲು ಕರೆದು, ಹಾಲು ಕಾಯಿಸಿ ಹಾಲು ಕುಡಿದು, ಬೆಕ್ಕನ್ನ ಆಡಿಸಿ, ನಾಯಿಯನ್ನ ಮುದ್ದಾಡಿ, ಸೌದೆ ಒಲೆಯ ಮುಂದೆ ರೊಟ್ಟಿ ತಟ್ಟಿ, ರೊಟ್ಟಿ ಸುಟ್ಟಿ ಪಕ್ಕಾ ಹಳ್ಳಿ ಹೆಣ್ಣು ಮಕ್ಕಳು ಏನ್ ಮಾಡ್ತಾರೋ ಅದನ್ನೆಲ್ಲ ಮಾಡಿ ಮಿರ ಮಿರ ಮಿನುಗಿದ್ದಾರೆ ಅದಿತಿ ಪ್ರಭುದೇವ..

ತನ್ನ ಅಜ್ಜಿ ಊರಿಗೆ ಅದಿತಿ ಹೋದಾಗೆಲ್ಲ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಮಾಡೋ ಕೆಲಸಗಳನ್ನ ಮಾಡುತ್ತಾರಂತೆ.. ಅದಿತಿ ಪ್ರಭುದೇವ ಅವರ ಹಳ್ಳಿ ಹಾಡಿನ ವಿಡಿಯೋ ಈಗ ಸಖತ್ ವೈರಲ್ ಚಿಟ್ಟೆಯಾಗಿ ಅಭಿಮಾನಿಗಳ ಅಂಗಳದಲ್ಲಿ ಓಡಾಡುತ್ತಾ ಹಾಡುತ್ತಿದೆ..

Source: newsfirstlive.com Source link