ಮುಖ್ಯರಸ್ತೆ ಬಂದ್​ ಮಾಡಿ ಪ್ರವಾಹ ಸಂತ್ರಸ್ತರ ಪ್ರತಿಭಟನೆ; ಪುನರ್​​​ ವಸತಿ ಕೇಂದ್ರಕ್ಕಾಗಿ ಆಗ್ರಹ

ಮುಖ್ಯರಸ್ತೆ ಬಂದ್​ ಮಾಡಿ ಪ್ರವಾಹ ಸಂತ್ರಸ್ತರ ಪ್ರತಿಭಟನೆ; ಪುನರ್​​​ ವಸತಿ ಕೇಂದ್ರಕ್ಕಾಗಿ ಆಗ್ರಹ

ಬಾಗಲಕೋಟೆ: ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮಸ್ಥರು ಜಮಖಂಡಿ ಕಾಗವಾಡ ರಾಜ್ಯ ಹೆದ್ದಾರಿಯಲ್ಲಿ ಧರಣಿ ಮಾಡಿದರು. ಭಾರೀ ಮಳೆಯಿಂದ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ಥರು ದಿಢೀರ್​​​ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ತೇರದಾಳ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ತಮದಡ್ಡಿ ಗ್ರಾಮಸ್ಥರು ಪುನರ್ ವಸತಿ ಕೇಂದ್ರಕ್ಕಾಗಿ ಆಗ್ರಹಿಸಿದರು. 2005ರಿಂದಲೂ ಇಲ್ಲಿಯವರೆಗೂ ಪ್ರತಿ ವರ್ಷ ಆಗಾಗ ತಮದಡ್ಡಿ ಗ್ರಾಮ ಪ್ರವಾಹಕ್ಕೆ ತುತ್ತಾಗುತ್ತಲೇ ಇದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಪುನರ್ ವಸತಿ ಕೇಂದ್ರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ.

ಇನ್ನು, ಸರ್ಕಾರ ಹಳಿಂಗಳಿ ಗುಡ್ಡದಲ್ಲಿ 89 ಎಕರೆ ಪುನರ್ ವಸತಿ ಕೇಂದ್ರಕ್ಕೆ ಜಾಗ ಗುರುತಿಸಿದೆ. ಆದರೆ, ಈವರೆಗೂ ನಮಗೆ ಹಕ್ಕುಪತ್ರ ನೀಡಿಲ್ಲ. ಈಗ ಮತ್ತೆ ಗ್ರಾಮ ಪ್ರವಾಹಕ್ಕೆ ತುತ್ತಾಗಿದೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Source: newsfirstlive.com Source link