ಕೆಪಿಎಲ್‍ನಲ್ಲಿ ಆಡದಂತೆ ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ: ಹರ್ಷಲ್ ಗಿಬ್ಸ್ ಆರೋಪ

ಜೋಹಾನ್ಸ್ ಬರ್ಗ್: ಕಾಶ್ಮೀರ್ ಪ್ರೀಮಿಯರ್ ಲೀಗ್(ಕೆಪಿಎಲ್ 2021)ನಲ್ಲಿ ಆಡದೆ ಇರುವುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬೆದರಿಕೆ ಹಾಕುತ್ತಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟರ್ ಹರ್ಷಲ್ ಗಿಬ್ಸ್ ಗಂಭೀರ ಆರೋಪ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯಲಿರುವ ಕಾಶ್ಮೀರ್ ಪ್ರೀಮಿಯರ್ ಲೀಗ್‍ನಲ್ಲಿ ಭಾಗವಹಿಸಿದರೆ ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಲ್ಲಿ ಆಗಲಿ ಇತರ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಬಿಸಿಸಿಐ ನನಗೆ ಎಚ್ಚರಿಕೆ ನೀಡಿದೆ. ಇದು ಭಾರತದ ಅನಗತ್ಯವಾದ ನಡೆಯಾಗಿದ್ದು, ಈ ಮೂಲಕ ಪಾಕಿಸ್ತಾನ ವಿರುದ್ಧ ಪರೋಕ್ಷವಾಗಿ ಕಾದಾಡುತ್ತಿದೆ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲ ಕ್ರಿಕೆಟಿಗರು ಕಾಶ್ಮೀರ್ ಪ್ರೀಮಿಯರ್ ಲೀಗ್‍ನಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ಭಾರತ ಪ್ರವೇಶ ನಿರಾಕರಿಸುವುದು ಮುಂತಾದ ಬೆದರಿಕೆ ಒಡ್ಡುವುದು ಸರಿಯಲ್ಲ ಎಂದು ಬಿಸಿಸಿಐ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಸೆಮಿಫೈನಲ್‍ನಲ್ಲಿ ಎಡವಿದ ಪಿ.ವಿ.ಸಿಂಧು- ಬ್ಯಾಡ್ಮಿಂಟನ್‍ನಲ್ಲಿ ಚಿನ್ನದ ಕನಸು ಭಗ್ನ

ಬಿಸಿಸಿಐ ಮಾತ್ರ ಈ ಆರೋಪಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆಗಸ್ಟ್ 6 ರಿಂದ ಕೆಪಿಎಲ್ 2021 ಆರಂಭವಾಗಲಿದೆ. ಒಟ್ಟು ಆರು ತಂಡಗಳ ನಡುವಿನ ಟೂರ್ನಿ ಇದಾಗಿದ್ದು, ಇದರಲ್ಲಿ ಪಾಕಿಸ್ತಾನದ ಆಟಗಾರರಾದ ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್, ಕಮ್ರಾನ್ ಅಕ್ಮಲ್, ಮೊಹಮ್ಮದ್ ಹಫೀಜ್, ಇಮಾದ್ ವಸೀಮ್, ಶಾಬಾದ್ ಖಾನ್ ಆರು ತಂಡಗಳ ನಾಯಕತ್ವ ವಹಿಸಿದ್ದಾರೆ. ಈ ಟೂರ್ನಿಯಲ್ಲಿ ಹರ್ಷಲ್ ಗಿಬ್ಸ್, ಇಂಗ್ಲೆಂಡ್‍ನ ಮಾಂಟಿ ಪೇನೆಸರ್, ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಸೇರಿದಂತೆ ಹಲವು ವಿದೇಶಿ ಆಟಗಾರರು ಭಾಗವಹಿಸುತ್ತಿದ್ದಾರೆ.

Source: publictv.in Source link