ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದರಷ್ಟೇ ರಾಜ್ಯಕ್ಕೆ ಪ್ರವೇಶ- ಸಿಎಂ ಬೊಮ್ಮಾಯಿ

ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದರಷ್ಟೇ ರಾಜ್ಯಕ್ಕೆ ಪ್ರವೇಶ- ಸಿಎಂ ಬೊಮ್ಮಾಯಿ

ಬೆಂಗಳೂರು: ದೆಹಲಿಯಿಂದ ವಾಪಸ್ಸಾಗುತ್ತಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಚರ್ಚಿಸಿದರು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಬಸವರಾಜ ಬೊಮ್ಮಾಯಿ.. ಎರಡೂ ಡೋಸ್​​ಗಳನ್ನ ಪಡೆದವರಿಗೆ ಮಾತ್ರವೇ ರಾಜ್ಯದ ಗಡಿಯಲ್ಲಿ ಪ್ರವೇಶ ನೀಡಲಾಗುವುದು ಎಂದರು.

ಕಳೆದ ಬಾರಿ ಎರಡನೇ ಅಲೆ ಕೇರಳ ಮತ್ತು ಮಹಾರಾಷ್ಟ್ರದಿಂದಲೇ ಬಂದಿತ್ತು.. ಈ ಬಾರಿಯೂ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲೂ ಆತಂಕ ಹೆಚ್ಚಿದೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶಗಳು..

  • ಹಿರಿಯ ಅಧಿಕಾರಿಗಳು ಬಾರ್ಡರ್​ಗಳ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದಿದ್ದೇನೆ. ಟೆಸ್ಟಿಂಗ್​ಗೆ ಹೆಲ್ತ್ ಯೂನಿಟ್​ಗಳನ್ನು ಹೆಚ್ಚಿಸಿಕೊಳ್ಳಲು ಡಿಹೆಚ್​ಓಗಳಿಗೆ ಸೂಚನೆ ನೀಡಿದ್ದೇನೆ.
  • ಎಲ್ಲ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯ ಗುಣಮಟ್ಟ ಹೊಂದಬೇಕು. ಏನೆಲ್ಲಾ ಕೊರತೆ ಇದೆ ಅದು ಸರಿಯಾಗಬೇಕು.. ವ್ಯಾಕ್ಸಿನೇಷನ್ ಹಂಚಿಕೆ ಹೆಚ್ಚಾಗಬೇಕು. ಕೇಂದ್ರದ ಆರೋಗ್ಯ ಸಚಿವರ ಜೊತೆ ಮಾತನಾಡಿ ಬಂದಿದ್ದೇನೆ. 65 ಲಕ್ಷ ವ್ಯಾಕ್ಸಿನ್ ಡೋಸ್ ನೀಡುತ್ತಿದ್ದರು.. ಇದನ್ನ ಹೆಚ್ಚಿಸಲು ಮನವಿ ಮಾಡಿಕೊಂಡಿದ್ದೇನೆ.
  • ಕನಿಷ್ಟ 1.5 ಕೋಟಿಯಾದರೂ ಹೆಚ್ಚಿಸಬೇಕು ಎಂಬುದು ನಮ್ಮ ಲೆಕ್ಕಾಚಾರ. ಕನಿಷ್ಟ 1 ಕೋಟಿ ಡೋಸ್ ಕೊಡ್ತೀನಿ ಎಂದಿದ್ದಾರೆ. ನಾಳೆಯಿಂದ ಎರಡೂ ಡೋಸ್ ಪಡೆದ ಸರ್ಟಿಫಿಕೇಟ್ ಇದ್ದರಷ್ಟೇ ಎಂಟ್ರಿ. 72 ಗಂಟೆಯೊಳಗಿನ ಆರ್​ಟಿಪಿಸಿಆರ್ ಟೆಸ್ಟ್​ ರಿಪೋರ್ಟ್ ಇರಬೇಕು.
  • ಱಂಡಂ ಟೆಸ್ಟ್​ಗಳನ್ನು ಬಾರ್ಡರ್​​ಗಳಲ್ಲಿ ಹೆಚ್ಚಿಸಬೇಕು ಎಂದು ಹೇಳಿದ್ದೇನೆ. ಮಹಾರಾಷ್ಟ್ರ ಬಾರ್ಡರ್ ಜಿಲ್ಲೆಗಳಲ್ಲೂ ಇದು ಅನ್ವಯಿಸುತ್ತದೆ.
  • ಎರಡನೇ ತಾರೀಕಿನವರೆಗೂ ಹಿಂದಿನ ಆಜ್ಞೆ ಇತ್ತು.. 15 ದಿನ ಇದನ್ನ ಮುಂದುವರೆಸುತ್ತೇವೆ. ಕೊರೊನಾ ಸ್ಥಿತಿ ನೋಡಿಕೊಂಡು ಬದಲಾವಣೆ ಮಾಡುತ್ತೇವೆ.

Source: newsfirstlive.com Source link