ವಿಕ್ರಾಂತ್ ರೋಣದಲ್ಲಿ ‘ಗಡಂಗ್​ ರಕ್ಕಮ್ಮ’.. ಹೊಸ ಪೋಸ್ಟರ್ ಲಾಂಚ್ ಮಾಡಿದ ಜಾಕ್ವೆಲಿನ್

ವಿಕ್ರಾಂತ್ ರೋಣದಲ್ಲಿ ‘ಗಡಂಗ್​ ರಕ್ಕಮ್ಮ’.. ಹೊಸ ಪೋಸ್ಟರ್ ಲಾಂಚ್ ಮಾಡಿದ ಜಾಕ್ವೆಲಿನ್

ಐ ಎಮ್​​ ಡಿ ಬಿ ಪ್ರಕಟಿಸಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ವಿಕ್ರಾಂತ್ ರೋಣ ಸಿನಿಮಾ ಮತ್ತೆ ಮತ್ತೆ ಮತ್ತೇರಿಸೋ ಸಮಾಚಾರಗಳಿಂದ ಸದ್ದು ಗದ್ದಲ್ಲ ಮಾಡುತ್ತಿದೆ.. ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಕರೆಸಿಕೊಂಡು ಕುಣಿಸಿದ್ದ ವಿಕ್ರಾಂತ್ ರೋಣ ಪಡೆ ಮತ್ತೊಮ್ಮೆ ಜಾಕ್ಲಿ ಝಲಕ್​​ ಅನ್ನ ತೋರಿಸಿ ಕುತೂಹಲದ ಮತ್ತೇರಿಸಿದೆ..
ನಾವು ಹೇಳ್ದಂತೆ, ನೀವು ಕೇಳ್ದಂಗೆ ಶ್ರೀಲಂಕನ್ ಬೊಂಬೆ, ಬಾಲಿವುಡ್​​ನ ರೆಂಬೆ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಸಿನಿಮಾ ಸೆಟ್​​ನಲ್ಲಿ ಕಿಚ್ಚನ ಜೊತೆ ಕುಣಿದಿದ್ದು ಆಗಿದೆ.. ಆ ಮೇಕಿಂಗ್ ಝಲಕ್​ ಅನ್ನ ನಾವು ನೀವು ನೋಡಿದ್ದೂ ಆಗಿದೆ..

blank

ಈಗ ಹೊಸ ವಿಚಾರ ಏನಪ್ಪ ಅಂದ್ರೆ ಜಾಕ್ವಿಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ನರ್ತಿಸೋ ಜೊತೆಗೆ ನಟಿಸಿದ್ದಾರೆ ಅನ್ನೋ ಅಧಿಕೃತ ಇನ್ಫರ್ಮೇಷನ್ ಸಿಕ್ಕಿತ್ತು.. ಆದ್ರೆ ಯಾವ ಪಾತ್ರದಲ್ಲಿ ಜಾಕ್ವಿ ಝಗಮಗಿಸಿದ್ದಾರೆ ಜಾಕ್ವೆಲಿನ್​​ ಪಾತ್ರದ ಹೆಸರೇನು ಅನ್ನೋ ಕುತೂಹಲವಿತ್ತು.. ಈಗ ಆ ಕುತೂಹಲಕ್ಕೆ ತೆರೆ ಎಳೆದು ಹೊಸ ಕುತೂಹಲ ಕಿಚ್ಚನ್ನ ಹತ್ತಿಸಿದೆ ಅನೂಪ್ ಭಂಡಾರಿ ಆಂಡ್ ಟೀಮ್​​..

ಮತ್ತೇರಿಸೋ ಮೋಹನಾಂಗಿ ಮತ್ತು ಬರೋ ಬಾಟಲಿಯನ್ನ ಹಿಡಿದು ಗಡಂಗ್ ರಕ್ಕಮ್ಮಳಾಗಿ ವಿಕ್ರಾಂತ್ ರೋಣ ಸಿನಿಮಾ ಹೊಸ ಪೋಸ್ಟರ್​​ನಲ್ಲಿ ನಳನಳಿಸಿದ್ದಾರೆ.. ಜಾಕ್ ಮಂಜುನಾಥ್ ನಿರ್ಮಾಣದ ಈ ವಿಕ್ರಾಂತ್ ರೋಣ ಫಿಲ್ಮ್ ಟೀಮ್ ಜಾಕ್ವೆಲಿನ್ ​​ಗೆ ಇನ್ಮುಂದೆ ಹೊಸ ಹೆಸರಿನಿಂದ ನೀವೆಲ್ಲ ಕರೆಯುತ್ತೀರಿ ಅನ್ನೋ ಸುಳಿವು ಕೊಟ್ಟಿತ್ತು.. ಅದರಂತೆ ಜಾಕ್ವೆಲಿನ್ ಮತ್ತೇರಿಸೋ ಲುಕ್ಕು, ಪಾತ್ರದ ಹೆಸರಿನ ಕಿಕ್ಕನ್ನ ಪ್ರಕಟಿಸಿದೆ ಚಿತ್ರತಂಡ..

blank

ಮುಂಬೈ ನಗರದಲ್ಲಿ ಜಾಕ್ವಿಲಿನ್ ಫರ್ನಾಂಡಿಸ್ ಅವರ ಬಳಿಯೇ ಕ್ಲಾಪ್ ಕಟ್ ಮಾಡೋ ಮೂಲಕ ಹೊಸ ಪೋಸ್ಟರ್ ಅನ್ನ ರಿವೀಲ್ ಮಾಡಿದೆ ಚಿತ್ರತಂಡ.. ನಿರ್ಮಾಪಕ ಜಾಕ್ ಮಂಜುನಾಥ್, ಜಾಕ್ಲಿನ್ ಜೊತೆ ಸೇರೆ ನ್ಯೂಸ್ ಪೋಸ್ಟರ್ ಅನ್ನ ಅದ್ಧೂರಿಯಾಗಿ ಲಾಂಚ್ ಮಾಡಿದ್ದಾರೆ..

ಥ್ರಿಡಿ ತಂತ್ರಜ್ಞಾನದಲ್ಲಿ ಬಹುಭಾಷೆಗಳಲ್ಲಿ ಪ್ಯಾನ್ ವರ್ಲ್ಡ್ ಲೆವಲ್​​ನಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನ ತೆರೆಗೆ ತರಲು ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ.. ಅದಷ್ಟು ಬೇಗ ಸೂಕ್ತ ಸಮಯದಲ್ಲಿ ಚಿತ್ರಮಂದಿಗಳ ಬೆಳ್ಳೆತೆರೆಯ ಮೇಲೆ ವಿಕ್ರಾಂತ್ ರೋಣ ಚಿತ್ರ ಪ್ರಜ್ವಲಿಸಲಿದೆ..

Source: newsfirstlive.com Source link