ಗೆದ್ದ ಬ್ರಿಟನ್​, ಸೋತ ಐರಿಷ್​; ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿದ ಭಾರತದ ಮಹಿಳಾ ಹಾಕಿ ಟೀಂ

ಗೆದ್ದ ಬ್ರಿಟನ್​, ಸೋತ ಐರಿಷ್​; ಕ್ವಾರ್ಟರ್​​ ಫೈನಲ್​​ ಪ್ರವೇಶಿಸಿದ ಭಾರತದ ಮಹಿಳಾ ಹಾಕಿ ಟೀಂ

ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್​​ಫೈನಲ್​​ಗೆ ಪ್ರವೇಶಿಸಿದ್ದು, ಇದೇ ಮೊದಲ ಬಾರಿ ಮಹಿಳಾ ತಂಡ ಕ್ವಾರ್ಟರ್​​​ ಫೈನಲ್​ ತಲುಪಿದೆ. ನಾಳೆ ಸಂಜೆ ಗ್ರೇಟ್​ ಬ್ರಿಟನ್​ ಎದುರು ಕ್ವಾರ್ಟರ್​​​ಫೈನಲ್​​​ನಲ್ಲಿ ಸೆಣಸಾಟ ನಡೆಸಲಿದೆ.

ಭಾರತದ ಹಾಕಿ ತಂಡ ಕ್ವಾರ್ಟರ್​ಫೈನಲ್​ಗೆ ತಲುಪಲು ಕಾರಣವಾಗಿದ್ದು, ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ಫಲಿತಾಂಶ. ಈ ಪಂದ್ಯದಲ್ಲಿ ಬ್ರಿಟನ್ ಪಂದ್ಯ ಗೆದ್ದ ಕಾರಣ, ಭಾರತದ ಮಹಿಳಾ ತಂಡ ಕ್ವಾರ್ಟರ್​​ ಫೈನಲ್​​ಗೆ ಎಂಟ್ರಿ ಕೊಡ್ತು. ಗ್ರೂಪ್​ ಎನಲ್ಲಿ ಭಾರತ ಐದು ಪಂದ್ಯಗಳನ್ನಾಡಿದ್ದು ಮೂರರಲ್ಲಿ ಸೋತು, ಎರಡಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಭಾರತ ಕ್ವಾರ್ಟರ್​ ಫೈನಲ್​​ಗೆ ಅರ್ಹತೆ ಪಡೆದುಕೊಳ್ಳಲು ಗ್ರೇಟ್​​ ಬ್ರಿಟನ್ ಎದುರು ಐರ್ಲೆಂಡ್​ ಸೋಲು ಅಥವಾ ಪಂದ್ಯ ಡ್ರಾ ಸಾಧಿಸಬೇಕಿತ್ತು. ಒಂದು ವೇಳೆ ಗೆದ್ದಿದ್ದರೆ ಐರ್ಲೆಂಡ್​ 3 ಅಂಕ ಪಡೆಯುತ್ತಿತ್ತು. ಆಗ ಒಟ್ಟು 6 ಅಂಕಗಳೊಂದಿಗೆ ಭಾರತ- ಐರ್ಲೆಂಡ್ ಸಮಬಲ ಸಾಧಿಸುತ್ತಿದ್ದವು. ಆದರೆ ಇಂಗ್ಲೆಂಡ್ 2-0 ಅಂತರದಲ್ಲಿ ಗೆದ್ದು ಭಾರತಕ್ಕೆ ಕ್ವಾರ್ಟರ್ ಫೈನಲ್ ತಲುಪಲು ಸಹಾಯ ಮಾಡಿತು.

Source: newsfirstlive.com Source link