ರಾಜ್ಯ ಸರ್ಕಾರದಿಂದ ಮತ್ತೊಂದು ಗೈಡ್​ಲೈನ್ಸ್; ಹೊಸ ಮಾರ್ಗಸೂಚಿಯಲ್ಲಿ ಏನಿದೆ..?

ರಾಜ್ಯ ಸರ್ಕಾರದಿಂದ ಮತ್ತೊಂದು ಗೈಡ್​ಲೈನ್ಸ್; ಹೊಸ ಮಾರ್ಗಸೂಚಿಯಲ್ಲಿ ಏನಿದೆ..?

ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯೊಂದನ್ನ ಜಾರಿಗೆ ತಂದಿದೆ. ಈ ಗೈಡ್​​ಲೈನ್ಸ್​ನಲ್ಲಿ ಸದ್ಯ ಜಾರಿಯಲ್ಲಿರುವ ನಿಯಮಗಳನ್ನ ಮುಂದುವರೆಸಿ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಜಾರಿಗೊಳಿಸಲಾದ ಮಾರ್ಗಸೂಚಿ ಜುಲೈ 31 ರವರೆಗೆ ಅನ್ವಯವಾಗುತ್ತಿತ್ತು. ಇದೀಗ ಅದೇ ನಿರ್ಬಂಧಗಳನ್ನ ಆಗಸ್ಟ್ 16 ರವರೆಗೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ.

ಈ ಹಿಂದಿನ ಮಾರ್ಗಸೂಚಿಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಹಾಗೂ ಚಿತ್ರಮಂದಿಗಳಿಗೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿತ್ತು. ಉಳಿದಂತೆ ಪಬ್, ಸ್ವಿಮ್ಮಿಂಗ್ ಪೂಲ್ ಹಾಗೂ ಒಳಾಂಗಣ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿತ್ತು.

ಈ ಹಿಂದಿನ ಮಾರ್ಗಸೂಚಿ ವಿವರಕ್ಕಾಗಿ ಈ ಲಿಂಕ್ ಒತ್ತಿಅನ್​​ಲಾಕ್​​ನಲ್ಲಿ ಇನ್ನಷ್ಟು ರಿಲೀಫ್​​; ನಾಳೆಯಿಂದ ಚಿತ್ರಮಂದಿರ​​.. ಜು.26ರಿಂದ ಕಾಲೇಜ್​ ಓಪನ್​

Source: newsfirstlive.com Source link