ಸಿನಿಮಾ ಆಗಲಿದೆ ಬೆಳ್ಳಿಪದಕ ವಿಜೇತೆ ಮಿರಾಬಾಯಿ ಚಾನು ಬದಕಿನ ಕಥೆ

ಸಿನಿಮಾ ಆಗಲಿದೆ ಬೆಳ್ಳಿಪದಕ ವಿಜೇತೆ ಮಿರಾಬಾಯಿ ಚಾನು ಬದಕಿನ ಕಥೆ

ಇಂಫಾಲ್: ಟೋಕಿಯೋ ಒಲಿಂಪಿಕ್ಸ್​ನ ಮೊದಲ ದಿನವೇ ಬೆಳ್ಳಿ ಗೆದ್ದ ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಬದುಕಿನ ಕಥೆಯನ್ನ ಸಿನಿಮಾವಾಗಿಸಲು ಎಲ್ಲ ಪ್ರಯತ್ನಗಳೂ ನಡೆದಿವೆ. ಮಣಿಪುರದ ಪ್ರೊಡಕ್ಷನ್ ಕಂಪನಿಯೊಂದರ ಜೊತೆಗೆ ಈಗಾಗಲೇ ಮೀರಾಬಾಯಿ ಚಾನು ಈ ಸಿನಿಮಾಗೆ ಸಂಬಂಧಿಸಿದಂತೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರಂತೆ.

ಮೀರಾಬಾಯಿ ಚಾನು ಹಾಗೂ ಯಂದೆ ಕೀರ್ತಿ ಈ ಒಪ್ಪಂದಕ್ಕೆ ಸಹಿಹಾಕಿದ್ದು ತನ್ನ ಬದುಕಿನ ಕಥೆ ದೇಶದ ಯುವಕರಿಗೆ ಸ್ಫೂರ್ತಿಯಾಗಲಿರುವುದು ನನ್ನ ಅದೃಷ್ಟ ಎಂದಿದ್ದಾರಂತೆ. ಸ್ಯೂಟಿ ಫಿಲಂಸ್ ಹೆಸರಿನ ಪ್ರೊಡಕ್ಷನ್ ಕಂಪನಿ ಈ ಒಪ್ಪಂದವನ್ನ ಮಾಡಿಕೊಂಡಿದ್ದು ಈ ಸಿನಿಮಾದಲ್ಲಿ ಮೀರಾಬಾಯಿ ಚಾನು ಅವರ ಬಾಲ್ಯದಿಂದ ಹಿಡಿದು ಒಲಿಂಪಿಕ್ಸ್ ವರೆಗಿನ ಜರ್ನಿ ಇರಲಿದೆ ಎಂದು ಹೇಳಿದೆ.

ಒಸಿ ಮೀರಾ ಎಂಬುವವರು ಈ ಸಿನಿಮಾವನ್ನು ನಿರ್ದೇಶಿಸಲಿದ್ದು ಸಿನಿಮಾಕ್ಕೆ ಮನವೋಬಿ ಛಾಯಾಗ್ರಹಣ ಹಾಗೂ ಡೈಲಾಗ್ಸ್ ಬರೆಯಲಿದ್ದು ಆರ್​ಕೆ ನಳಿನಿ ನಿರ್ಮಾಪಕರಾಗಲಿದ್ದಾರಂತೆ. ಈ ಸಿನಿಮಾ ಇಂಗ್ಲೀಷ್ ಸೇರಿದಂತೆ ದೇಶದ ಹಲವು ಭಾಷೆಗಳ ಸಬ್​ಟೈಟಲ್​ ಹೊಂದಿರಲಿದೆ ಎನ್ನುವ ಮಾಹಿತಿ ಇದೆ.

Source: newsfirstlive.com Source link