9 ಬೆಕ್ಕುಗಳನ್ನು ಇರಿದು ಕೊಂದ ಪಾಪಿಗೆ 5 ವರ್ಷ ಜೈಲು ಶಿಕ್ಷೆ

9 ಬೆಕ್ಕುಗಳನ್ನು ಇರಿದು ಕೊಂದ ಪಾಪಿಗೆ 5 ವರ್ಷ ಜೈಲು ಶಿಕ್ಷೆ

ನವದೆಹಲಿ: ಒಂಬತ್ತು ಬೆಕ್ಕುಗಳಿಗೆ ಚಾಕುವಿನಿಂದ ಇರಿದು ಕೊಂದ ಮಾಜಿ ಸೆಕ್ಯೂರಿಟಿ ಗಾರ್ಡ್​ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಯುಕೆ ಕೋರ್ಟ್​​ ಆದೇಶಿಸಿದೆ. ಸ್ಟೀವ್​​ ಬೌಕ್ವೇಟ್​​ (54) ಎಂಬಾತ ಒಂದು ವರ್ಷದಲ್ಲಿ 9 ಬೆಕ್ಕುಗಳನ್ನು ಚಾಕುವಿನಿಂದ ಇರಿದು ಕೊಂದಿರುವುದಲ್ಲದೇ ಇನ್ನು ಏಳು ಬೆಕ್ಕುಗಳನ್ನು ಹಿಂಸಿಸಿದ್ದ ಎಂದು ತಿಳಿದು ಬಂದೆ.

ಯುಕೆ ಕೋರ್ಟ್​ ಆರೋಪಿ ಸ್ಟೀವ್​​ ಬೌಕ್ವೇಟ್​​ಗೆ 5 ವರ್ಷ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಈತನ ಕ್ರೌರ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇರೆಗೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿ ಈತನನ್ನು ಜೈಲಿಗೆ ಕಳಿಸಲಾಗಿದೆ.

ಭಾರತದಲ್ಲೂ ಪ್ರಾಣಿ ಹಿಂಸೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ 5 ವರ್ಷದಲ್ಲಿ ಪ್ರಾಣಿ ಹಿಂಸೆ ನಡೆದ ಅತೀ ಹೆಚ್ಚು ಪ್ರಕರಣಗಳು ಯುಕೆ, ಯುಎಸ್​​ ಮತ್ತು ರಷ್ಯಾದಲ್ಲಿ ದಾಖಲಾಗಿವೆ.

Source: newsfirstlive.com Source link