ರಾಜೀನಾಮೆ ಘೋಷಣೆ ಬೆನ್ನಲ್ಲೇ ಯೂಟರ್ನ್ ಹೊಡೆದ ಬಬುಲ್ ಸುಪ್ರಿಯೋ.. ಪಕ್ಷ ಬದಲಿಸ್ತಾರಾ..?

ರಾಜೀನಾಮೆ ಘೋಷಣೆ ಬೆನ್ನಲ್ಲೇ ಯೂಟರ್ನ್ ಹೊಡೆದ ಬಬುಲ್ ಸುಪ್ರಿಯೋ.. ಪಕ್ಷ ಬದಲಿಸ್ತಾರಾ..?

ನವದೆಹಲಿ: ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಬಿಜೆಪಿ ನಾಯಕ ಬಬುಲ್ ಸುಪ್ರಿಯೋ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಈ ಕುರಿತು ಅಧಿಕೃತವಾಗಿ ತನ್ನ ಫೇಸ್​​ಬುಕ್​​ ಖಾತೆಯಲ್ಲಿ ಪೋಸ್ಟ್​​ ಹಾಕಿದ್ದ ಬಬುಲ್​​​, ಮುಂದೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ಹೊತ್ತಲ್ಲೇ ಬಬುಲ್​​ ಸುಪ್ರಿಯೋ ತನ್ನ ಫೇಸ್​​ಬುಕ್​​ ಪೋಸ್ಟ್​ ಎಡಿಟ್​​ ಮಾಡಿದ್ದಾರೆ.

ಹೌದು, ಬಬುಲ್​​ ಸುಪ್ರಿಯೋ ಯಾವುದೇ ಪಕ್ಷಕ್ಕೂ ಸೇರೋದಿಲ್ಲ ಎಂಬ ಭಾಗವನ್ನು ಮಾತ್ರ ಎಡಿಟ್​​ ಮಾಡಿರುವುದು ಈಗ ಭಾರೀ ಸದ್ದು ಮಾಡುತ್ತಿದೆ. ಈ ಮುನ್ನ ಒರಿಜಿನಲ್​​ ಪೋಸ್ಟ್​ನಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತಾಡಿದ ಮೇಲೆಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಒಂದು ತಂಡದ ಆಟಗಾರ, ಸದಾ ಒಂದೇ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇನೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುತ್ತಿರುವ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರೋದಿಲ್ಲ ಎಂದು ಬರೆದಿಕೊಂಡಿದ್ದರು.

ಇನ್ನು, ಟಿಎಂಟಿ, ಕಾಂಗ್ರೆಸ್​, ಸಿಪಿಎಂಯಾಗಲೀ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನನಗೆ ಖುದ್ದು ಕರೆ ಮಾಡಿ ಕರೆದರೂ ಯಾವ ಪಕ್ಷಕ್ಕೂ ಹೋಗೋದಿಲ್ಲ ಎಂದು ಧೃಡೀಕರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದ ಬಬುಲ್​ ಸುಪ್ರಿಯೋ ಈ ಭಾಗ ಸಂಪೂರ್ಣ ಡಿಲೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಂಪುಟದಿಂದ ಹೊರಬಿದ್ದ ಬೆನ್ನಲ್ಲೇ ರಾಜಕೀಯಕ್ಕೆ ಗುಡ್​ಬೈ ಹೇಳಿದ ಬಬುಲ್ ಸುಪ್ರಿಯೋ

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಪುನರ್​​ ರಚನೆ ವೇಳೆ ಬಬುಲ್​ ಸುಪ್ರಿಯೋಗೆ ಕೋಕ್​​ ನೀಡಲಾಗಿತ್ತು. ಇದರಿಂದ ಬೇಸರಗೊಂಡ ಬಬುಲ್​​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಜತೆಗೆ ಇವರ ರಾಜೀನಾಮೆ ನಿರ್ಧಾರಕ್ಕೆ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೂಡ ಕಾರಣ ಎಂದು ವರದಿಯಾಗಿತ್ತು.

Source: newsfirstlive.com Source link