ರೌಡಿಶೀಟರ್​ಗಳ ಮನೆಗಳ ಮೇಲೆ ಮತ್ತೆ ಪೊಲೀಸ್ ರೇಡ್.. 38 ಮಂದಿ ವಶಕ್ಕೆ

ರೌಡಿಶೀಟರ್​ಗಳ ಮನೆಗಳ ಮೇಲೆ ಮತ್ತೆ ಪೊಲೀಸ್ ರೇಡ್.. 38 ಮಂದಿ ವಶಕ್ಕೆ

ಬೆಂಗಳೂರು: ಪಶ್ಚಿಮ ವಿಭಾಗದ ರೌಡಿಶೀಟರ್ ಗಳಿಗೆ ಪೊಲೀಸ್ರು ಮತ್ತೊಂದು ಶಾಕ್ ನೀಡಿದ್ದಾರೆ. ರೌಡಿಶೀಟರ್ ಮನೆಗಳ ಮೇಲೆ ಇಂದು ಸಂಜೆ ಧಿಡೀರ್ ದಾಳಿ ನಡೆಸಿದ್ದಾರೆ.. ಬ್ಯಾಟರಾಯನ ಪುರ, ಚಾಮರಾಜ ನಗರ ಪೊಲೀಸ್ ಠಾಣೆಯ ಗಲ್ಲಿ ಗಲ್ಲಿಗೆ ನುಗ್ಗಿ ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಮತ್ತೆ ಬಾಲಬಿಚ್ಚಿದ್ರೆ ಕಂಬಿ ಹಿಂದೆ ಗ್ಯಾರಂಟಿ ಅಂತ ಎಚ್ಚರಿಕೆ ಕೊಟ್ಚಿದ್ದಾರೆ.

ರೌಡಿ ಶೀಟರ್ ಗಳ ನಿವಾಸದ ಮೇಲೆ ಸೆಕೆಂಡ್ ಇನ್ನಿಂಗ್ಸ್  ಸರ್ಚಿಂಗ್..!
ಪಶ್ಚಿಮ ವಿಭಾಗದ ಕೆಂಗೇರಿ ಸಬ್ ಡಿವಿಷನ್ ನಲ್ಲಿ ಮೆಗಾ ರೇಡ್..!

ಅನ್ ಲಾಕ್ ಅಗ್ತಿದ್ದಂತೆ ನಗರದಲ್ಲಿ ಕ್ರೈಂ ರೇಟ್ ಜಾಸ್ತಿಯಾಗಿದೆ‌.. ಸ್ವಲ್ಪ ದಿನಗಳ ಹಿಂದೆಯಷ್ಟೇ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ವಾರ್ನ್ ಮಾಡಲಾಗಿತ್ತು… ಅದ್ರೂ ಕೂಡ ಯಾಕೋ ಅಪರಾಧ ಪ್ರಕರಣಗಳು ಹತೋಟಿಗೆ ಬಂದಿಲ್ಲಾ.. ಹಾಗಾಗಿ ಪೊಲೀಸರು ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ… ಇಂದು ಸಂಜೆ  ಬ್ಯಾಟರಾಯನಪುರ ಮತ್ತು ಚಾಮರಾಜ ಪೇಟೆಯ ಗಲ್ಲಿ ಗಲ್ಲಿಗೆ ಎಂಟ್ರಿ ಕೊಟ್ಟ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ..

ಚಾಮರಾಜಪೇಟೆಯ ಅನಂತ್ ಪುರ್, ಟಿಪ್ಪು ನಗರ್, ಆಜಾತ್ ನಗರ , ವಾಲ್ಮಿಕಿ ನಗರದ ಮತ್ತು ಬ್ಯಾಟರಾಯನಪುರ ಠಾಣೆಯ ಕೆಬಿ ನಗರ, ಪಾದರಾಯನಪುರ, ಶ್ಯಾಮಣ್ಣಗಾರ್ಡನ್ , ಹೊಸಗುಡ್ಡದಹಳ್ಳಿಯ ರೌಡಿಶೀಟರ್ ಮನೆ ಮೇಲೆ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿಲಾಗಿದೆ… 200ಕ್ಕೂ ಹೆಚ್ಚು ಪೊಲೀಸರಿಂದ ಒಮ್ಮೆಲೆ 63 ರೌಡಿಶೀಟರ್ ಮತ್ತು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನೆಡೆದಿದೆ.

ದಾಳಿ ವೇಳೆ ಹಲವು ರೌಡಿಶೀಟರ್ ಮನೆಗಳಲ್ಲಿ ಮಾರಕಾಸ್ತ್ರಗಳು ಮತ್ತು ಗಾಂಜಾ ಪತ್ತೆಯಾಗಿದೆ.. ಇನ್ನೂ ಕೆಲವರು ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದಿದೆ.. ಮಾರಾಕಾಸ್ತ್ರ ಇಟ್ಟುಕೊಂಡಿದ್ದ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದ ಒಟ್ಟು 38 ಜನ ರೌಡಿಶೀಟರ್ ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ…

ಇನ್ನೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಒಂದೊಮ್ಮೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ್ರೆ ಬಾಲ ಕಟ್ ಮಾಡೋದಾಗಿ ಖಡಕ್ ವಾರ್ನಿಂಗ್ ಕೂಡ ನೀಡಲಾಗಿದೆ….ಪರಿಸ್ಥಿತಿ ದುರ್ಲಾಭ ಪಡೆಯದಂತೆ ಕಟ್ಟುನಿಟ್ಟಿ‌ನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಿಬ್ಬಂದಿಗಳಿಗೆ ಡಿಸಿಪಿ ಸೂಚನೆ ನೀಡಿದ್ದಾರೆ..

Source: newsfirstlive.com Source link