ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್

ಬಿಗ್ ಬಾಸ್ ಮನೆಯಲ್ಲಿ ಬಬ್ಲಿ ಬಬ್ಲಿಯಾಗಿ ನಗುತ್ತ ಎಲ್ಲರ ಜೊತೆ ಬೆರೆಯುತ್ತಿದ್ದ ಶುಭಾ ಪೂಂಜಾ ಅವರು ಈ ವಾರ ಮನೆಯಿಂದ ಹೊರ ನಡೆದಿದ್ದಾರೆ.

ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಅವರು ಇದನ್ನು ಅನೌನ್ಸ್ ಮಾಡಿದ್ದು, ಶುಭಾ ಪೂಂಜಾ ಅವರು ಮನೆಯಿಂದ ಹೊರ ನಡೆದಿದ್ದಾರೆ. ಟಾಸ್ಕ್ ಗಳಲ್ಲಿ ಹೆಚ್ಚೇನು ಭಾಗವಹಿಸದಿದ್ದರೂ, ಮೆನಯವರೊಂದಿಗೆ ಬೆರೆತು ಚೆನ್ನಾಗಿ ಮಾತನಾಡಿಕೊಂಡಿದ್ದರು. ಇದೀಗ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಔಟ್ ಆಗಿದ್ದಾರೆ.

ಆಗಸ್ಟ್ 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಐವರು ಸ್ಪರ್ಧಿಗಳು ಮಾತ್ರ ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ. ಇದಕ್ಕೂ ಮುನ್ನ ಮೂವರು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಬೇಕು. ಹೀಗಾಗಿ ಈ ವಾರ ಶನಿವಾರವೇ ಎಲಿಮಿನೇಶನ್ ನಡೆದಿದೆ. ಮುಂದಿನ ವಾರ ಮಧ್ಯದಲ್ಲಿ ಸಹ ಮತ್ತೊಂದು ಎಲಿಮಿನೇಶ್ ನಡೆಯಲಿದೆ.

ಶುಭಾ ಅವರು ಮನೆಯಿಂದ ಹೊರ ಹೋಗುತ್ತಿರುವುದಕ್ಕೆ ಮನೆ ಮಂದಿಯಲ್ಲಿ ಭೇಸರ ಮೂಡಿದ್ದು, ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಟಾಸ್ಕ್ ನಲ್ಲಿ ಗೆದ್ದು ಈ ಸೀಸನ್‍ನಲ್ಲಿ ಮೊದಲ ಬಾರಿಗೆ ವಿನ್ ಆಗಿದ್ದರು, ಈ ಮೂಲಕ ಶುಭಾ ಖುಷಿಪಟ್ಟಿದ್ದರು. ಆದರೆ ತರಲೆ, ಕೀಟಲೆ ಮಾಡುತ್ತ, ಬಬ್ಲಿ ಬಬ್ಲಿಯಾಗಿ ಮಾತನಾಡುತ್ತ ರಂಜಿಸುತ್ತಿದ್ದರು.

blank

ಇದೀಗ ಮಂಜು ಪಾವಗಡ, ಕೆ.ಪಿ.ಅರವಿಂದ್ ಹಾಗೂ ವೈಷ್ಣವಿ ಸ್ಟ್ರಾಂಗ್ ಕಂಟಸ್ಟೆಂಟ್ ಆಗಿದ್ದಾರೆ. ಇವರು ಫಿನಾಲೆಯಲ್ಲಿ ಉಳಿದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಈ ವಾರ ಯಾರ್ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದೇ ಕುತೂಹಲವಾಗಿದೆ.

Source: publictv.in Source link