ದಿನ ಭವಿಷ್ಯ 01-08-2021

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ, ಕೃಷ್ಣ ಪಕ್ಷ.
ತಿಥಿ:ಅಷ್ಟಮಿ, ನಕ್ಷತ್ರ:ಭರಣಿ, ವಾರ:ಭಾನುವಾರ

ರಾಹುಕಾಲ : 5.14 ರಿಂದ 6.49
ಗುಳಿಕಕಾಲ : 3.39 ರಿಂದ 5.14
ಯಮಗಂಡಕಾಲ : 12.09 ರಿಂದ 2.04

ಮೇಷ: ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿಗಳ ಮೇಲೆ ಕಣ್ಣೀರಲಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಅಕಾಲ ಭೋಜನ.

ವೃಷಭ: ಪರಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ, ಆಪ್ತರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ಅಡಚಣೆ, ನೆಮ್ಮದಿ ಇಲ್ಲದ ಜೀವನ, ಪಾಪ ಬುದ್ಧಿ.

ಮಿಥುನ: ಹಣಕಾಸಿನ ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ, ಸ್ತ್ರೀಯರು ತಾಳ್ಮೆಯಿಂದ ಇರಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಧಾರ್ಮಿಕ ಕ್ಷೇತ್ರದಲ್ಲಿ ಭಾಗಿ, ವಿಪರೀತ ವ್ಯಸನ.

ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯ ಕೆಲಸಗಳು ನೆರವೇರುವುದು, ಮನಸ್ಸಿಗೆ ಸಂತಸ, ವೃತ್ತಿರಂಗದಲ್ಲಿ ಸ್ಥಾನಮಾನ, ಇತರರ ಮಾತಿಗೆ ಮರುಳಾಗಬೇಡಿ.

ಸಿಂಹ: ವಿಧೇಯತೆ ಇರಲಿ, ಹಿರಿಯರ ಮಾತಿಗೆ ಗೌರವ ಕೊಡಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಅನಾರೋಗ್ಯ, ವಾಹನ ಖರೀದಿ.

ಕನ್ಯಾ: ಯತ್ನ ಕಾರ್ಯಗಳಲ್ಲಿ ಅಡೆತಡೆ, ಭೋಗವಸ್ತು ಪ್ರಾಪ್ತಿ, ಮಿತ್ರರಿಂದ ಸಹಾಯ, ಅನಗತ್ಯ ಖರ್ಚು, ಆರೋಗ್ಯದ ಬಗ್ಗೆ ಕಾಳಜಿ, ದುಷ್ಟ ಚಿಂತನೆ, ಸಂತಾನ ಪ್ರಾಪ್ತಿ, ಮನಶಾಂತಿ.

ತುಲಾ: ಮಾತಿನ ವೈಖರಿ, ಯತ್ನ ಕೆಲಸ ಸಾಧಿಸುವಿರಿ, ಕೋಪ ಜಾಸ್ತಿ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ವಂಚನೆಗಳ ಕಡೆ ಗಮನವಿರಲಿ.

ವೃಶ್ಚಿಕ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ದಾಂಪತ್ಯದಲ್ಲಿ ಪ್ರೀತಿ, ಉದ್ಯೋಗದಲ್ಲಿ ಬದಲಾವಣೆ, ಪರರಿಗೆ ಸಹಾನುಭೂತಿ ತೋರಿಸುವಿರಿ.

ಧನಸ್ಸು: ನಿಮ್ಮ ಒಳ್ಳೆಯ ಗುಣ ಆಕರ್ಷಿಸುತ್ತದೆ, ವಿಪರೀತ ಖರ್ಚು, ಸುಖ ಭೋಜನ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಮನಃಶಾಂತಿ.

ಮಕರ: ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಅನ್ಯ ಜನರಲ್ಲಿ ದ್ವೇಷ, ತೀರ್ಥಯಾತ್ರಾ ದರ್ಶನ, ಸ್ತ್ರೀಯರಿಗೆ ಲಾಭ,ಚಂಚಲ ಮನಸ್ಸು.

ಕುಂಭ: ಕುಟುಂಬ ಸೌಖ್ಯ, ವಾದ ವಿವಾದಗಳಿಂದ ದೂರವಿರಿ, ಅಲ್ಪ ಆದಾಯ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದೇವತಾ ಕಾರ್ಯಗಳಲ್ಲಿ ಭಾಗಿ.

ಮೀನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ದ್ರವ್ಯ ನಷ್ಟ, ಇತರರ ಮಾತಿಗೆ ಮರುಳಾಗಬೇಡಿ.

Source: publictv.in Source link