ಲಕ್ಷಾಂತರ ಮೌಲ್ಯದ ಅಕ್ರಮ ರಕ್ತ ಚಂದನ ವಶ: ಇಬ್ಬರ ಬಂಧನ

ಲಕ್ಷಾಂತರ ಮೌಲ್ಯದ ಅಕ್ರಮ ರಕ್ತ ಚಂದನ ವಶ: ಇಬ್ಬರ ಬಂಧನ

ಚಿಕ್ಕಮಗಳೂರು: ಸುಮಾರು ದಿನಗಳಿಂದ ಶ್ರೀಗಂಧ ಮರ ಮತ್ತು ರಕ್ತ ಚಂದನ ಕಳವು ಮಾಡುತ್ತಿದ್ದ ಖತರ್ನಾಕ್​​ ಗ್ಯಾಂಗ್​​​ ಚಿಕ್ಕಮಗಳೂರು ಪೊಲೀಸರ ಬಲೆಗೆ ಬಿದ್ದಿದೆ. ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಕ್ಷಾಂತರ ಮೌಲ್ಯದ 161 ಕೆ.ಜಿ ತೂಕದ ರಕ್ತ ಚಂದನದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಕ್ತ ಚಂದನ ಕಳವು ಮಾಡಿದ್ದು ಆರು ಮಂದಿ ಎನ್ನಲಾಗಿದೆ. ಇವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಕಳ್ಳರಿಗಾಗಿ ಅರಣ್ಯ ಅರಣ್ಯಾಧಿಕಾರಿಗಳು ಶೋಧಕಾರ್ಯ ಮುಂದುವರಿಸಿದೆ.

blank

ಯಶವಂತ್, ಕೃಷ್ಣಮೂರ್ತಿ, ರವಿ, ಅಭಿ, ಗಣೇಶ್, ಶ್ರವಣ ಎಂಬ ಗ್ಯಾಂಗ್​​​​ ಈ ದಂಧೆ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. ಈಗ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Source: newsfirstlive.com Source link