ಅಚ್ಚರಿಯಾದ್ರೂ ಸತ್ಯ! ಹರಾಜಿಗಿದೆ 40 ವರ್ಷಗಳ ಹಳೆಯ ಕೇಕ್

ಅಚ್ಚರಿಯಾದ್ರೂ ಸತ್ಯ! ಹರಾಜಿಗಿದೆ 40 ವರ್ಷಗಳ ಹಳೆಯ ಕೇಕ್

ಸಾಮಾನ್ಯವಾಗಿ ಕೇಕ್​ನಂತಹ ಸಿಹಿತಿಂಡಿಗಳನ್ನ ದೀರ್ಘಕಾಲದವರೆಗೆ ಸಂಗ್ರಹ ಮಾಡೋಕೆ ಸಾಧ್ಯವಿಲ್ಲ, ಆದ್ರೆ ಇಲ್ಲೊಂದು ಕೇಕ್​ ಪೀಸ್​ ಬರೊಬ್ಬರಿ 40 ವರ್ಷಗಳ ನಂತರ ಹರಾಜಿನಲ್ಲಿ ಮಾರಾಟ ಆಗೋಕೆ ಸಿದ್ಧವಾಗಿದೆ.

ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಮದುವೆಯಲ್ಲಿ ಕತ್ತರಿಸಲಾಗಿದ್ದ ಕೇಕ್​ನ ತುಣುಕೊಂದು 40 ವರ್ಗಗಳ ನಂತರ ಹರಾಜಿಗೆ ಸಜ್ಜಾಗಿ ನಿಂತಿದೆ. 1981ರಲ್ಲಿ ಮದುವೆಯಲ್ಲಿ ಮೋಯಿರಾ ಸ್ಮಿತ್‌ ಎನ್ನುವವರಿಗೆ ಡಯಾನ ಕೇಕ್​ ಪೀಸ್​ ನೀಡಿದ್ರು.

blank

 

ಬಳಿಕ ಅವರು ಅದನ್ನ ಸಂಗ್ರಹಿಸಿ 2008 ರಲ್ಲಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ರು. ಸದ್ಯ ಈ ಕೇಕ್​ ತುಂಡನ್ನ ಈಗ ಮತ್ತೆ ಹರಾಜಿಗಿಡಲು ನಿರ್ಧರಿಸಲಾಗಿದ್ದು, ಆಗಸ್ಟ್​ 11 ರಂದು ಹರಾಜು ನಡೆಸಲು ಸಿದ್ಧತೆ ನಡೆಸಲಾಗಿದೆ. ಇನ್ನು 40 ವರ್ಷದ ಈ ಹಳೆಯ ಕೇಕ್​ ತುಂಡು ನೂರು ಡಾಲರ್​ಗೆ ಹರಾಜಾಗಲಿದೆ ಅಂತ ಅಂದಾಜಿಸಲಾಗಿದೆ.

Source: newsfirstlive.com Source link