ಭಾರತ-ಚೀನಾ ಶಾಂತಿ ಮಾತುಕತೆ ಸಕ್ಸಸ್; 9 ಗಂಟೆ ನಡೆದ ಚರ್ಚೆಯಲ್ಲಿ ಭಾರತದ ಆಗ್ರಹ ಏನು..?

ಭಾರತ-ಚೀನಾ ಶಾಂತಿ ಮಾತುಕತೆ ಸಕ್ಸಸ್; 9 ಗಂಟೆ ನಡೆದ ಚರ್ಚೆಯಲ್ಲಿ ಭಾರತದ ಆಗ್ರಹ ಏನು..?

ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಲಡಾಖ್ ಗಡಿ ಸಂಘರ್ಷ ಆರಂಭಗೊಂಡ ಬಳಿಕ ಉದ್ವಿಘ್ನ ಪರಿಸ್ಥಿತಿ ಶಮಗೊಳಿಸಲು ಉಭಯ ದೇಶಗಳು ಸತತ ಮಾತುಕತೆ ನಡೆಸುತ್ತಿದೆ. ಆದ್ರೆ ಕಳೆದ ನಾಲ್ಕು ತಿಂಗಳಳ ಕಾಲ ಇದಕ್ಕೆ ಬ್ರೇಕ್ ಬಿದ್ದಿತ್ತು. ಹೀಗಾಗಿ ನಿನ್ನೆ ನಡೆದ 12ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಅದರಂತೆ ಸಭೆಯಲ್ಲಿ ಗಡಿಪ್ರದೇಶಗಳಲ್ಲಿ ಸೇನಾ ಹಿಂಪಡೆತ, ಶಾಂತಿ ಸ್ಥಾಪನೆ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಚೀನಾ ಭಾಗದ ಚುಶುಲ್-ಮಾಲ್ದೋ ಗಡಿ ನಿಯಂತ್ರಣದ ಮಿಲಿಟರ್ ಹೆಡ್‌ಕ್ವಾರ್ಟರ್‌ನಲ್ಲಿ ಬೆಳಗ್ಗೆ 10:30ಕ್ಕೆ ಆರಂಭವಾದ ಸಭೆ ರಾತ್ರಿ 7.30ಕ್ಕೆ ಅಂತ್ಯಗೊಂಡಿದೆ. ಅಂದ್ರೆ ಬರೋಬ್ಬರಿ 9 ಗಂಟೆಗಳ ಕಾಲ ಮಾತುಕತೆ ನಡೆದಿದೆ. ಭಾರತದ ಪ್ರತಿನಿಧಿಯಾಗಿ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್-ಜನರಲ್ ಪಿಜಿಕೆ ಮೆನನ್ ಮತ್ತು ಚೀನಾ ಪ್ರತಿನಿಧಿಯಾಗಿ ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥ ಮೇಜರ್ ಜನರಲ್ ಲಿಯು ಲಿನ್ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಗೋಗ್ರಾ, ಹಾಟ್ ಸ್ಪ್ರಿಂಗ್‌, ಡೆಪ್‌ಸಾಂಗ್‌
12ನೇ ಸುತ್ತಿನ ಸಭೆಯಲ್ಲಿ ಭಾರತ ಲಡಾಖ್ ಗಡಿ ಸಂಘರ್ಷಕ್ಕೆ ಅಂತ್ಯಕಾಣಿಸಲು ಯತ್ನಿಸಿದೆ. ಅಲ್ಲದೆ ಲಡಾಖ್‌ನ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್​​​ನಲ್ಲಿ ಚೀನಾ ಸೇನೆಯ ಅತಿಕ್ರಮಣದ ನಡೆಯನ್ನು ಭಾರತ ವಿರೋಧಿಸಿದೆ. ಅಲ್ಲದೆ ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಾಯಿಸಿದೆ. ಜೊತೆಗೆ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್‌ಗಳಿಂದ ಸೇನಾ ಹಿಂಪಡೆತದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇನ್ನು ಡೆಪ್‌ಸಾಂಗ್‌ ಗಸ್ತು ಹಕ್ಕುಗಳನ್ನು ಮರುಸ್ಥಾಪಿಸಲು ಭಾರತ ಮಾತುಕತೆಯ ವೇಳೆ ಪ್ರಸ್ತಾಪಿಸಿದೆ.

ಎಲ್​​ಎಸಿ ಉದ್ದಕ್ಕೂ ಚೀನಾ ನಡೆಸುತ್ತಿರುವ ಕಾಮಗಾರಿಗಳಿಗೂ ಸಭೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆ ಆಗಬೇಕಾದರೆ ಚೀನಾ ಇಂತಹ ನಡೆಗಳಿಂದ ಹಿಂದೆ ಸರಿಯಬೇಕು ಅಂತ ಭಾರತ ತಾಕೀತು ಮಾಡಿದೆ. ಅಲ್ಲದೆ ಭಾರತಕ್ಕೆ ಶಾಂತಿ ಮುಖ್ಯವಾಗಿದ್ದು, ಗಡಿಯಲ್ಲಿ ಸೇನೆ ಹಿಂಪಡೆಯಲು ಭಾರತ ಸಿದ್ಧವೆ. ಆದರೆ ಅದೇ ಪ್ರಮಾಣದಲ್ಲಿ ಚೀನಾ ಕೂಡ ಹಿಂದೆ ಸರಿಯಬೇಕು ಅಂತ ಭಾರತ ಮಾತುಕತೆ ವೇಳೆ ಪ್ರಸ್ತಾಪಿಸಿದೆ.

ಒಟ್ನಲ್ಲಿ ಭಾರತ-ಚೀನಾ ನಡುವೆ ಬರೋಬ್ಬರಿ 9 ಗಂಟೆಗಳ ಕಾಲ ನಡೆದ 12ನೇ ಸುತ್ತಿನ ಕಮಾಂಡರ್ ಮಟ್ಟದ ಸಭೆಯಲ್ಲಿ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ ಯತ್ನಿಸಿದೆ. ಇದಕ್ಕೆ ಚೀನಾ ಕೂಡ ಸಹಮತವೇನೋ ವ್ಯಕ್ತಪಡಿಸಿದೆ.

Source: newsfirstlive.com Source link