ಭಾರತ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಇಂಗ್ಲೆಂಡ್​ ತಂಡಕ್ಕೆ ಬಿಗ್​ ಶಾಕ್ ಕೊಟ್ರು ಬೆನ್​ ಸ್ಟೋಕ್ಸ್

ಭಾರತ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಇಂಗ್ಲೆಂಡ್​ ತಂಡಕ್ಕೆ ಬಿಗ್​ ಶಾಕ್ ಕೊಟ್ರು ಬೆನ್​ ಸ್ಟೋಕ್ಸ್

ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಭರ್ಜರಿ ತಯಾರಿ ನಡೆಸಿದ್ದ ಆಂಗ್ಲ ಪಡೆ, ಸರಣಿ ಆರಂಭಕ್ಕೆ 4 ದಿನಗಳು ಬಾಕಿ ಇರುವಾಗ ಹಿನ್ನಡೆ ಅನುಭವಿಸಿದೆ. ಇದು ತಂಡದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಂಗ್ಲೆಂಡ್​ಆಗಿರೋ ಹಿನ್ನಡೆ ಏನು?

ಭಾರತದ ವಿರುದ್ಧ ಮಹತ್ವದ ಟೆಸ್ಟ್​ ಸರಣಿಗೆ ಇದಕ್ಕಾಗಿ ಬಲಿಷ್ಠ ತಂಡವನ್ನ ಪ್ರಕಟಿಸಿದ್ದ ಇಂಗ್ಲೆಂಡ್​​ ತಂಡ, ತವರಿನಂಗಳದಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿತ್ತು. ಆದ್ರೆ ಇನ್ನೂ 4 ದಿನದಲ್ಲಿ ಸರಣಿ ಆರಂಭವಾಗ್ತಾ ಇರೋ ಈ ಸಂದರ್ಭದಲ್ಲಿ ದಿಢೀರ್​ ಹಿನ್ನಡೆ ಅನುಭವಿಸಿದೆ. ತಂಡದ ಟ್ರಂಪ್​ ಕಾರ್ಡ್​​ ಪ್ಲೇಯರ್​​ ಆಲ್​ರೌಂಡರ್ ಬೆನ್ ​​ಸ್ಟೋಕ್ಸ್,​ ಅನಿರ್ದಿಷ್ಟ ಅವಧಿಗೆ ಕ್ರಿಕೆಟ್​ ನಿಂದ ವಿರಾಮ ಪಡೆಯೋದಾಗಿ ಘೋಷಿಸಿದ್ದಾರೆ. ಇದಕ್ಕೆ ಇಸಿಬಿ ಕೂಡ ಅನುಮತಿ ನೀಡಿದೆ.

14ನೇ ಆವೃತ್ತಿಯ ಐಪಿಎಲ್​ನಲ್ಲಿ ಇಂಜುರಿಗೆ ತುತ್ತಾಗಿದ್ದ ಸ್ಟೋಕ್ಸ್​​, ಇತ್ತಿಚೇಗಷ್ಟೇ ರಾಷ್ಟ್ರೀಯ ತಂಡಕ್ಕೆ ವಾಪಾಸ್ಸಾಗಿದ್ರು. ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನ ಮುನ್ನಡೆಸಿ ಗೆಲುವಿಗೆ ಕಾರಣರಾಗಿದ್ರು. ಹಾಗಿದ್ದೂ ಟಿ20 ಸರಣಿಯಿಂದ ವಿಶ್ರಾಂತಿ ಬಯಸಿ ದೂರ ಉಳಿಯೋ ನಿರ್ಧಾರ ಮಾಡಿದ್ರು. ಆ ಬಳಿಕ ಭಾರತದ ವಿರುದ್ಧದ ಟೆಸ್ಟ್​ ಸರಣಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸ್ಟೋಕ್ಸ್​​, ಇದೀಗ ಮಾನಸಿಕ ಆರೋಗ್ಯದ ದೃಷ್ಠಿಯಿಂದ ಅನಿರ್ದಿಷ್ಟ ಅವಧಿಗೆ ಕ್ರಿಕೆಟ್​ ನಿಂದ ಬ್ರೇಕ್​ ಬೇಕು ಎಂದಿದ್ದಾರೆ.

‘ಸ್ಟೋಕ್ಸ್‌, ನೋವು ಮತ್ತು ಯೋಗಕ್ಷೇಮದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಕುಟುಂಬದಿಂದ ದೂರ ಉಳಿದು, ಕಟ್ಟುಪಾಡುಗಳೊಂದಿಗೆ ಇರುವುದು ಸುಲಭವಲ್ಲ. ಸ್ಟೋಕ್ಸ್‌ಗೆ ಅಗತ್ಯವಿರುವಷ್ಟು ಸಮಯವನ್ನು ನೀಡಲಾಗುವುದು’
ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​

ಮಾನಸಿಕ ಆರೋಗ್ಯ ಮಾತ್ರವಲ್ಲ..! ಐಪಿಎಲ್​ನಲ್ಲಾದ ಇಂಜುರಿ ಇನ್ನೂ ಸಂಪೂರ್ಣವಾಗಿ ಗುಣವಾಗಿಲ್ಲ. ಈ ಎರಡು ಕಾರಣಗಳಿಂದ ಸ್ಟೋಕ್ಸ್​​ ವಿರಾಮ ಪಡೆದುಕೊಂಡಿದ್ದಾರೆ ಎಂದು ಇಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆದ್ರೆ ಇಂಜುರಿಗಿಂತ ಸ್ಟೋಕ್ಸ್​ ಮಾನಸಿಕ ಆರೋಗ್ಯದ ಕಾರಣವನ್ನ ನೀಡಿರೋದು ತೀವ್ರ ಚರ್ಚೆಯನ್ನ ಹುಟ್ಟುಹಾಕಿದೆ. ಆದ್ರೆ ಕ್ರೀಡಾ​ ವಲಯ ಮಾತ್ರ ಇದೊಂದು ಧೈರ್ಯಯುತ ನಿರ್ಧಾರ ಎಂದು ಸ್ಟೋಕ್ಸ್​​ ನಡೆಯನ್ನ ಶ್ಲಾಘಿಸಿದೆ.

‘ಇದೊಂದು ಧೈರ್ಯಯುತ ನಿರ್ಧಾರ’
‘ನನ್ನ ಆರೋಗ್ಯ ಉತ್ತಮವಾಗಿಲ್ಲ ಎಂದು ಸ್ವಯಂ ಅರಿವನ್ನ ಹೊಂದುವುದು, ಹೃದಯ ಹೇಳಿದ್ದನ್ನ ಮಾಡುವುದು ಅಷ್ಟು ಸಲಭವಲ್ಲ. ಇದು​ಸ್ಟೋಕ್ಸ್​ರ ಧೈರ್ಯವನ್ನ ಸೂಚಿಸುತ್ತೆ. ಹಾಗೇ ಕೌಶಲ್ಯ ಮತ್ತು ಪ್ರೇರಣೆ ನಿಮ್ಮನ್ನು ವ್ಯಾಖ್ಯಾನಿಸುತ್ತದೆ’
ಜೇಮ್ಸ್​​ ಪೆಮೆಂಟ್​​, MI ಸಹಾಯಕ ಕೋಚ್​​

ಈ ವರ್ಷಾರಂಭದಲ್ಲಿ ತಂದೆಯ ಅಗಲಿಕೆಯ ದುಖಃ ಅನುಭವಿಸಿದ್ದ ಸ್ಟೋಕ್ಸ್​, ಆ ಬಳಿಕ ಐಪಿಎಲ್​ನಲ್ಲಿ ಸೀರಿಯಸ್​ ಇಂಜುರಿಗೆ ತುತ್ತಾಗಿದ್ರು. ಇದರ ಜೊತೆ ಜೊತೆಗೆ ಬಬಲ್​ ವಾತಾವರಣದಲ್ಲಿ ಇರ ಬೇಕಾಗಿರೋದು ಕೂಡ ಸ್ಟೋಕ್ಸ್​​ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎನ್ನಲಾಗ್ತಿದೆ. ವೈದ್ಯಕೀಯ ತಜ್ಙರುಗಳೂ ಕೂಡ ಬಬಲ್​ ವ್ಯವಸ್ಥೆಯ ಬಗ್ಗೆ ಇದೇ ಅಭಿಪ್ರಾಯ ಹೊರಹಾಕ್ತಿದ್ದಾರೆ. ಆದ್ರೆ ಈ ಕೊರೊನಾ ಕಾಲಘಟ್ಟದಲ್ಲಿ ಸುರಕ್ಷಿತವಾಗಿ ಟೂರ್ನಿ ನಡೆಸಬೇಕಂದ್ರೆ, ಬಬಲ್ ಕೂಡ ಅನಿವಾರ್ಯವಾಗಿದೆ.

Source: newsfirstlive.com Source link