ಕೇರಳದ ಬಳಿಕ ಮಹಾರಾಷ್ಟ್ರಕ್ಕೂ ಲಗ್ಗೆಯಿಟ್ಟ ಝೀಕಾ ವೈರಸ್​​

ಕೇರಳದ ಬಳಿಕ ಮಹಾರಾಷ್ಟ್ರಕ್ಕೂ ಲಗ್ಗೆಯಿಟ್ಟ ಝೀಕಾ ವೈರಸ್​​

ಮುಂಬೈ: ಕೇರಳದಲ್ಲಿ ಅಟ್ಟಹಾಸ ಮೆರೆದಿದ್ದ ಝೀಕಾ ವೈರಸ್​​ ಈಗ ಮಹಾರಾಷ್ಟ್ರಕ್ಕೂ ಕಾಲಿಟ್ಟಿದೆ. ಪುಣೆ ಜಿಲ್ಲೆಯು ಪುರಂದರ್​ ತಾಲೂಕಿನ ಬೆಲ್ಸರ್​ ಗ್ರಾಮದ 50 ವರ್ಷದ ಮಹಿಳೆಯಲ್ಲಿ ಈ ಝೀಕಾ ವೈರಸ್​ ಪತ್ತೆಯಾಗಿದೆ.

ಕಳೆದ ಒಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಸ್ಯಾಂಪಲ್​​ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಝೀಕಾ ವೈರಸ್​ ಇರುವುದು ಪತ್ತೆಯಾಗಿದೆ. ಇನ್ನು ಸೋಂಕಿತ ಮಹಿಳೆಯ ಕುಟುಂಬ ಸದಸ್ಯರಿಗೆ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಕೇರಳದಲ್ಲಿ ಮತ್ತೆ 2 ಝೀಕಾ ವೈರಸ್​ ಪತ್ತೆ
ಕೇರಳ ರಾಜ್ಯದಲ್ಲಿ ಇನ್ನೂ ಇಬ್ಬರು ಮಂದಿಯಲ್ಲಿ ಝೀಕಾ ವೈರಸ್​ ದೃಢಪಟ್ಟಿದೆ ಅಂತಾ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ. ಸದ್ಯ ಕೇರಳ ರಾಜ್ಯದಲ್ಲಿ ಕೊರೊನಾ ಕೇಸ್​​ಗಳ ಗಣನೀಯವಾಗಿ ಏರಿಕೆ ಕಂಡಿದ್ದು, ಇದರ ನಡುವೆಯೇ ಝೀಕಾ ವೈರಸ್​​ನ ಹಾವಳಿಯು ಕೇರಳ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇನ್ನು ಕೇರಳದಲ್ಲಿ ಝೀಕಾ ವೈರಸ್​ ಸೋಂಕು ಪತ್ತೆಯಾದವರ ಸಂಖ್ಯೆ 63 ಅಂತಾ ಹೇಳಲಾಗಿದ್ದು, ಪ್ರಸ್ತುತ 3 ಸಕ್ರಿಯ ಪ್ರಕರಣಗಳಿವೆ.

Source: newsfirstlive.com Source link