ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ

– 20 ಅಡಿ ಆಳದಲ್ಲಿದ್ದ ಪೈಪ್

ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ್ದ ಪೈಪ್ ಲೈನ್‍ಗೆ ಕನ್ನ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಐವಾನ್ ಎಂಬಾತನ ಜಮೀನಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್‍ಲೈನ್ ಹಾದು ಹೋಗಿತ್ತು. ಈ ಪೈಪ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಾಗ ಕಂಪನಿಯವರು ಹುಡುಕಾಟ ನಡೆಸಿದಾಗ ಐವಾನ್ ಕೃತ್ಯ ಬೆಳಕಿಗೆ ಬಂದಿದೆ.

20 ಅಡಿ ಆಳದಲ್ಲಿ ಹಾದುಹೋಗಿದ್ದ ಪೆಟ್ರೋಲ್ ಪೈಪ್ ಲೈನ್ ಅಗೆದು ಇನ್ನೊಂದು ಪೈಪ್ ಅಳವಡಿಸಿ ಐವಾನ್ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದನು. ಮುಖ್ಯ ಪೈಪ್‍ಗೆ ಗೇಟ್ ವಾಲ್ ಸೇರಿಸಿ ಮತ್ತೊಂದು ಪೈಪ್ ಮೂಲಕ ಪೆಟ್ರೋಲ್ ಎತ್ತಿಕೊಳ್ಳುತ್ತಿದ್ದನು.

blank

ಪೆಟ್ರೋಲ್ ಸೋರಿಕೆ ಸಂಬಂಧ ಕಂಪನಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿತ್ತು. ಪೋಲೀಸರ ಸಮಕ್ಷಮ ಜೆಸಿಬಿ ಮೂಲಕ ಅಗೆದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಐವಾನ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ಕಟೀಲ್

Source: publictv.in Source link