ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧವಿದ್ದರೂ ಪ್ರವಾಸಿಗರ ದಂಡು.. ಸ್ಥಳೀಯರಿಗೆ ಟ್ರಾಫಿಕ್​ ಕಿರಿಕಿರಿ

ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧವಿದ್ದರೂ ಪ್ರವಾಸಿಗರ ದಂಡು.. ಸ್ಥಳೀಯರಿಗೆ ಟ್ರಾಫಿಕ್​ ಕಿರಿಕಿರಿ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧವಿದ್ದರೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಫುಲ್ ಟ್ರಾಫಿಕ್ ಜಾಮ್​ ಉಂಟಾಗಿದೆ.

ಲಾಕ್​ಡೌನ್​ ಸಡಿಲಿಕೆಯಾದ ಬಳಿಕ ಸಾಗರೋಪಾದಿಯಲ್ಲಿ ಜನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹರಿದು ಬರುತ್ತಿರುವುದರಿಂದ ಮತ್ತೆ ಕೊರೊನಾ ಅಟ್ಟಹಾಸದ ಆತಂತ ವ್ಯಕ್ತಪಡಿಸಿದ್ದ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ಸಂಪೂರ್ಣ ಪ್ರವೇಶ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

blank

ಆದರೆ ಜಿಲ್ಲಾಡಳಿತದ ಆದೇಶಕ್ಕೆ ಡೋಟ್​ ಕೇರ್​ ಎನ್ನುತ್ತಿರುವ ಪ್ರವಾಸಿಗರು ನಂದಿಗಿರಿಧಾಮಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಕಾರು ಹಾಗೂ ಬೈಕ್​ಗಳಲ್ಲಿ ಗಿರಿಧಾಮದತ್ತ ಆಗಮಿಸುತ್ತಿರುವ ಪ್ರವಾಸಿಗರಿಗೆ ನಂದಿಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆಯುತ್ತಿದ್ದಾರೆ. ಪರಿಣಾಮ ಸಂಪೂರ್ಣ ಟ್ರಾಫಿಕ್​ ಜಾಮ್​​ ಆಗಿದ್ದು ಇತರೆ ಪ್ರಯಾಣಿಕರು ಕಿರಿ ಕಿರಿ ಅನುಭವಿಸುಂತಾಗಿದೆ.

blank

ಇನ್ನು ಚೆಕ್ ಪೋಸ್ಟ್ ಬಳಿ ತಡೆಯುತ್ತಿರುವ ಹಿನ್ನೆಲೆ ನಿರಾಸೆಗೊಂಡ ಪ್ರವಾಸಿಗರು ಅಕ್ಕ ಪಕ್ಕದ ಬೆಟ್ಟ ಗುಡ್ಡ ಏರಿ ಪ್ರವಾಸದ ಅನುಭವವನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವೀಕೆಂಡ್​​ನಲ್ಲಿ ಮತ್ತೆ ನಂದಿ ಬೆಟ್ಟಕ್ಕೆ ‘ನೋ ಎಂಟ್ರಿ’ ಎಂದ ಜಿಲ್ಲಾಡಳಿತ

Source: newsfirstlive.com Source link