ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಆತಂಕ; ನಿನ್ನೆ ರಾತ್ರಿ ಮತ್ತೆ ಮೂರು ಡ್ರೋಣ್​ಗಳ ಹಾರಾಟ

ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಆತಂಕ; ನಿನ್ನೆ ರಾತ್ರಿ ಮತ್ತೆ ಮೂರು ಡ್ರೋಣ್​ಗಳ ಹಾರಾಟ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಿನ್ನೆ ರಾತ್ರಿ ಮತ್ತೆ ಡ್ರೋಣ್ ರೀತಿಯ ಏರಿಯಲ್ ವೆಹಿಕಲ್ಸ್​ ಹಾರಾಟ ನಡೆಸಿವೆ. ಜಮ್ಮುವಿನ ಡೊಮನಾ ಹಾಗೂ ಸಂಬಾ ಜಿಲ್ಲೆಯಲ್ಲಿ ಒಟ್ಟು ಮೂರು ಯುಎವಿ (Unmanned Aerial Vehicles) ಹಾರಾಟ ನಡೆಸಿವೆ ಅಂತಾ ವರದಿಯಾಗಿದೆ.

ಅನುಮಾನಾಸ್ಪದ ಏರಿಯಲ್ ವೆಹಿಕಲ್ ಕಂಡ ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮೂರು ನಿಮಿಷಗಳವರೆಗೆ ಹಾರಾಟ ನಡೆಸಿ ನಂತರ ಕಣ್ಮರೆಯಾಗಿವೆ ಅಂತಾ ಸ್ಥಳೀಯರು ತಿಳಿಸಿದ್ದಾರೆ. ಇನ್ನು ಸಂಶಯಾಸ್ಪದ ವಸ್ತು ಹಾರಾಡಿರೋದನ್ನ ಅಲ್ಲಿನ ಸ್ಥಳೀಯ ಯುವಕರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

ಮೊದಲ ಸಂಬಾ ಜಿಲ್ಲೆಯಲ್ಲಿ ಸುಮಾರು ರಾತ್ರಿ 8 ಗಂಟೆಗೆ ಕಾಣಿಸಿಕೊಂಡಿತ್ತು. ನಂತರ 9 ಗಂಟೆ ಸುಮಾರಿಗೆ ಅದೇ ಜಾಗದಲ್ಲಿ ಹಾರಾಟ ನಡೆಸಿದೆ. ಇನ್ನು ಮೂರನೇಯದು ಜಮ್ಮು ಜಿಲ್ಲೆಯ ದೊಮನಾದಲ್ಲಿ ರಾತ್ರಿ 9.50 ರ ಸುಮಾರಿಗೆ ಹಾರಾಟ ನಡೆಸಿದೆ.

ಕೂಡಲೇ ಸ್ಥಳೀಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜಮ್ಮುವಿನ ವಾಯುನೆಲೆ ಮೇಲೆ ಡ್ರೋಣ್ ಅಟ್ಯಾಕ್ ನಡೆದ ಬಳಿಕ, ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಡ್ರೋಣ್ ಆ್ಯಕ್ಟಿವಿಟಿಗಳು ಹೆಚ್ಚಾಗುತ್ತಿವೆ. ಐಇಡಿಯನ್ನ ಹೊತ್ತು ಸಾಗುತ್ತಿದ್ದ ಹಲವಾರು ಡ್ರೋಣ್​ಗಳನ್ನ ಈಗಾಗಲೇ ಹೊಡೆದುರುಳಿಸಲಾಗಿದೆ.

Source: newsfirstlive.com Source link