ಶಿಲ್ಪಾಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ‘ಪ್ಲಾನ್​ ಬಿ’ ರಹಸ್ಯ ಬಿಚ್ಚಿಟ್ಟ ವಾಟ್ಸ್​ಆ್ಯಪ್​ ಚಾಟ್​​..!

ಶಿಲ್ಪಾಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ‘ಪ್ಲಾನ್​ ಬಿ’ ರಹಸ್ಯ ಬಿಚ್ಚಿಟ್ಟ ವಾಟ್ಸ್​ಆ್ಯಪ್​ ಚಾಟ್​​..!

ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್​ ಕುಂದ್ರಾರ ಒಂದೊಂದೆ ರಹಸ್ಯಗಳು ಹೊರ ಬರ್ತಿವೆ. ಒಂದೊಂದೆ ಸ್ಫೋಟಕ ಮಾಹಿತಿಗಳು ಮುನ್ನಲೆಗೆ ಬಂದು ಕುಳಿತಿವೆ. ಈ ನಡುವೆ ನಟಿ ಗೆಹನಾ ವಸಿಷ್ಠ ಪೊಲೀಸರ ಮೇಲೆ ಲಂಚದ ಆರೋಪ ಮಾಡಿದ್ದಾರೆ. ಗೆಹನಾ ಪೊಲೀಸರ ಮೇಲೆ ತಿರುಗಿ ಬಿದ್ದಿದ್ದೇಕೆ? ಕುಂದ್ರಾ ವಾಟ್ಸಾಪ್ ಚಾಟ್​ನಿಂದ ಬಯಲಾದ ರಹಸ್ಯವೇನು? ಅನ್ನೋದರ ವಿವರ ಇಲ್ಲಿದೆ.

blank

ಕೆಲವೊಂದು ಸ್ಟೋರಿಗಳೇ ಹಾಗೆ, ಅವು ಅನ್​ಎಕ್ಸಪೆಕ್ಟೆಡ್​ ಆ್ಯಂಡ್ ಸಸ್ಪೆನ್ಸ್. ಯಾರಿಂದಲೋ ಶುರುವಾಗಿ ಇನ್ಯಾರದ್ದು ಕೊರಳಿಗೆ ಉರುಳಾಗಿ, ಕಡೆಗೆ ಮತ್ತೆ ಇನ್ಯಾರದ್ದೋ ಬುಡಕ್ಕೆ ಬಿಸಿ ಮುಟ್ಟಿಸಿ ಬಿಡುತ್ತೆ. ಅದ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾನ ಕೇಸ್ ಬೆಸ್ಟ್ ಎಕ್ಸಾಂಪಲ್. ವಸಿಷ್ಠ ಗೆಹನಾ ಬಂಧನದಿಂದ ಶುರುವಾದ ಅಶ್ಲೀಲ ವಿಡಿಯೋ ಚಿತ್ರೀಕರಣ ಆ್ಯಂಡ್ ಅಪ್ಲೋಡ್ ಕೇಸ್ ಇದೀಗ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಯ ಗಂಡನನ್ನು ಕಂಬಿ ಹಿಂದೆ ನಿಲ್ಲಿಸಿದೆ.

ಹೊಸ ಬಾಂಬ್ ಸಿಡಿಸಿದ ನಟಿ ಗೆಹನಾ ವಸಿಷ್ಠ
ಫೆಬ್ರವರಿಯಲ್ಲಿ ಬಂಧನವಾಗಿದ್ದ ನಟಿ ಗೆಹನಾ
ಪೊಲೀಸರ ಮೇಲೆ ಆರೋಪ ಮಾಡಿದ್ದ ನಟಿ
15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರಾ ಪೊಲೀಸರು?

ಗೆಹನಾ ವಸಿಷ್ಠ ಈಗಾಗಲೇ ಹಲವು ಸಿನಿಮಾಗಳು ಹಾಗೂ ವೆಬ್‌ ಸರಣಿಗಳಲ್ಲಿ ಅಭಿನಯಿಸಿರುವ ನಟಿ. ಈ ಗೆಹನಾ ವಸಿಷ್ಠ ಮೇಲೆ, ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಇದೇ ಆರೋಪದ ಮೇಲೆ ನಟಿ ಗೆಹನಾ ಸೇರಿದಂತೆ ಐವರನ್ನ ಮುಂಬೈ ಪೊಲೀಸರು ಫೆಬ್ರವರಿಯಲ್ಲಿ ಬಂಧಿಸಿದ್ದರು. ಬಂಧನದ ನಂತರ ಪೊಲೀಸರು ನನ್ನ ಬಳಿ 15 ಲಕ್ಷ ಲಂಚ ಕೇಳಿದ್ದಾರೆಂದು ಗೆಹನಾ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ರಾಜ್​ ಕುಂದ್ರಾ ಬಂಧನ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಶಿಲ್ಪಾಶೆಟ್ಟಿ ಹೇಳಿದ್ದೇನು..?

ಬಂಧನದ ವೇಳೆ ಪೊಲೀಸರು ನನ್ನಲ್ಲಿ 15 ಲಕ್ಷ ರುಪಾಯಿ ಲಂಚ ಕೇಳಿದ್ರು. 15 ಲಕ್ಷ ಕೊಟ್ಟರೆ ನಿಮ್ಮನ್ನು ಬಿಡುಗಡೆ ಮಾಡ್ತೇವೆಂದು ಹೇಳಿದ್ರು. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತೆ ನಾನ್ಯಾಕೆ ದುಡ್ಡು ಕೊಡಲಿ ಎಂದು ನಟಿ ಗೆಹನಾ ವಸಿಷ್ಠ ಹೇಳಿದ್ದಾರೆ.

ಗೆಹನಾ ವಸಿಷ್ಠ ಪೊಲೀಸರ ಮೇಲೆನೇ ಇದೀಗ ಆರೋಪ ಮಾಡ್ತಿದ್ದಾರೆ. ನಾನು ಬಂಧನವಾದ ಕೆಲವೇ ದಿನದಲ್ಲಿ ಪೊಲೀಸರು ನನ್ನ ಬಳಿ ಬಂದು 15ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. 15 ಲಕ್ಷ ಕೊಟ್ರೆ ನನ್ನನ್ನ ಬಿಡುಗಡೆ ಮಾಡ್ತೀವೆ ಅನ್ನೋ ಮೂಲಕ ಗೆಹನಾ ಪೊಲೀಸರ ವಿರುದ್ಧವೇ ಬಾಂಬ್ ಸಿಡಿಸಿದ್ದಾಳೆ.

ಗೆಹನಾ ಆರೋಪ ಸತ್ಯಕ್ಕೆ ದೂರವಾದದ್ದು ಎನ್ನಲಾಗಿದೆ. ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಪೊಲೀಸರ ಮೇಲೆ ಇಂತಹ ಆರೋಪ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ.

ರಾಜ್​ಕುಂದ್ರಾ ಪ್ರಕರಣದಲ್ಲೂ ಗೆಹನಾ ಹೆಸರು
ಎಫ್​ಐಆರ್​ನಲ್ಲಿ ನಟಿಯ ಹೆಸರು ಉಲ್ಲೇಖ
ಮತ್ತೊಮ್ಮೆ ಬಂಧನದ ಭೀತಿಯಲ್ಲಿ ನಟಿ

ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಮುಂಬೈ ಪೊಲೀಸರು ಹೊಸದಾಗಿ ದಾಖಲು ಮಾಡಿರುವ ಎಫ್.ಐ.ಆರ್​ನಲ್ಲಿ ನಟಿ ಗೆಹನಾ ವಸಿಷ್ಠ ಹೆಸರು ಕೂಡ ಉಲ್ಲೇಖ ಮಾಡಿದ್ದಾರೆ. ಹಾಟ್​ಶಾಟ್ಸ್ ಆ್ಯಪ್​​ಗಾಗಿ ಅಶ್ಲೀಲ ಚಿತ್ರಗಳನ್ನ ಶೂಟ್ ಮಾಡಲು ಒತ್ತಾಯಿಸಿದ್ದ ಆರೋಪದ ಮೇಲೆ ಗೆಹನಾ ವಿರುದ್ಧ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಇದ್ರಿಂದ ಮತ್ತೊಮ್ಮೆ ಬಂಧನದ ಭೀತಿಯಲ್ಲಿರುವ ನಟಿ, ಈ ರೀತಿಯಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಾಜ್​ ಕುಂದ್ರಾರ ಮತ್ತೊಂದು ರೋಚಕ ರಹಸ್ಯ ಹೊರ ಬಿದ್ದಿದೆ.

ಇದನ್ನೂ ಓದಿ : ಪಾರ್ನ್ ಫಿಲಂ ನಿರ್ಮಾಣ​: ಬಡತನ ಅಂದ್ರೆ ನಂಗೆ ಆಗಲ್ಲ ಎಂದಿದ್ದ ಶಿಲ್ಪಾಶೆಟ್ಟಿ ಪತಿ

ಮತ್ತೊಂದು ಆ್ಯಪ್ ಬಿಡುಗಡೆಯ ಸಿದ್ಧತೆಯಲ್ಲಿದ್ದ ಕುಂದ್ರಾ?
ವಾಟ್ಸಾಪ್ ಚಾಟ್​ನಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ?

ಉದ್ಯಮ ಜಗತ್ತಿನಲ್ಲಿ ಮುಟ್ಟಿದೆಲ್ಲವು ಚಿನ್ನ ಎಂಬತ್ತಿದ್ದ ರಾಜ್​ ಕುಂದ್ರಾಗೆ ಇದೀಗ ಮುಟ್ಟಿದೆಲ್ಲವು ಮುಳ್ಳು ಎಂಬಂತ್ತಾಗಿದೆ. ಯಾಕಂದ್ರೆ ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಈಗಾಗಲೇ ಜೈಲಲ್ಲಿ ಮುದ್ದೆ ಮುರಿಯುತ್ತಿರುವ ಕುಂದ್ರಾ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಕೇಳಿ ಬಂದಿರುವ ಆರೋಪ ಪ್ಲಾನ್ ಬಿ ಗೆ ಸಂಬಂಧಿಸಿದ್ದು.

blank

ಪ್ಲಾನ್ ಬಿ ಅಂದ್ರೆ ಬೇರೇನೂ ಅಲ್ಲ. ಈಗಾಗಲೇ ಒಂದು ಅಶ್ಲೀಲ ಆ್ಯಪ್ ಮೂಲಕ ಕೋಟಿ ಕೋಟಿ ಜೇಬಿಗಿಳಿಸಿರುವ ಆರೋಪ ಹೊತ್ತಿರುವ  ಕುಂದ್ರಾ ಮತ್ತೊಂದು ಆ್ಯಪ್ ನಿರ್ಮಿಸಿಲು ಹೊರಟ್ಟಿದ್ದರು ಎನ್ನಲಾಗಿದೆ. ಹೌದು. ರಾಜ್​ ಕುಂದ್ರಾ ಪ್ಲೇ ಸ್ಟೋರ್​ನಲ್ಲಿ ಮತ್ತೊಂದು ಅಶ್ಲೀಲ ಆ್ಯಪ್ ಕ್ರಿಯೇಟ್ ಮಾಡುವ ಸಿದ್ಧತೆಯಲ್ಲಿದ್ದರು. ಪ್ಲಾನ್ ಬಿ ಮಾಡುವ ಕುರಿತು ವಾಟ್ಸಾಪ್​ನಲ್ಲಿ ಕೂಡ ಚರ್ಚೆ ಮಾಡಿದ್ದರು. ಅದ್ಕೆಂದೆ ‘ಎಚ್.ಅಕೌಂಟ್​’ ಎನ್ನುವ ಪ್ರತ್ಯೇಕ ವಾಟ್ಸಾಪ್​ ಗ್ರೂಪ್ ಮಾಡಿದ್ದರು. ಇದೇ ಆ್ಯಪ್​ನಲ್ಲಿ ಕುಂದ್ರಾ ಪ್ರದೀಪ್ ಬಕ್ಷಿಯ ಜೊತೆ ಪ್ಲಾನ್ ಬಿ ಕುರಿತು ಚರ್ಚೆ ನಡೆಸಿದ್ದರು ಅನ್ನೋ ಆರೋಪ ಕೇಳಿಬಂದಿದೆ.

ಅಷ್ಟಕ್ಕೂ ಈ ಪ್ರದೀಪ್ ಬಕ್ಷಿ ಯಾರು ಅಂತಾ ನೋಡೋದಾದ್ರೆ ಪ್ರದೀಪ್ ಬಕ್ಷಿ ಹಾಗೂ ರಾಜ್ ಕುಂದ್ರಾ ಇಬ್ಬರು ವಾಟ್ಸಾಪ್​ನಲ್ಲಿ ಈ ಕುರಿತು ಚರ್ಚೆ ಮಾಡಿರುವ ಅಂಶಗಳು ಇದೀಗ ಬಯಲಾಗಿದೆ. ನೂತನ ಆ್ಯಪ್​ ಮೂಲಕ ಕೋಟಿ ಕೋಟಿ ಗಳಿಸುವ ಲೆಕ್ಕಾಚಾರದಲ್ಲಿದ್ದ ಕುಂದ್ರಾಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಕುಂದ್ರಾ ನೂತನ ಆ್ಯಪ್ ಕ್ರಿಯೆಟ್ ಮಾಡುವ ಮೊದ್ಲೇ, ಪೊಲೀಸರು ಕುಂದ್ರಾರನ್ನ ಕಂಬಿ ಹಿಂದೆ ಅಟ್ಟಿದ್ದಾರೆ. ಇದ್ರಿಂದ ಇವರ ಪ್ಲಾನ್ ಪ್ಲಾಫ್ ಆಗಿದೆ.

ಇದೇ ಗ್ರೂಪ್​ನಲ್ಲಿ ಇಬ್ಬರು ಸೇರಿ ತಮ್ಮ ಅಕ್ರಮ ಬಿಸಿನೆಸ್ ಕುರಿತು ಚರ್ಚೆ ನಡೆಸಿರುವ ಸಂಗತಿ ಕೂಡ ಬಯಲಾಗಿದೆ. ನಿನ್ನೆ ಎಷ್ಟು ವಿಡಿಯೋ ಅಪ್ಲೋಡ್ ಆಗಿದೆ. ಅದ್ರರಿಂದ ಎಷ್ಟು ದುಡ್ಡು ಬಂದಿದೆ. ಹೀಗೆ ಹಲವು ವಿಷ್ಯಗಳ ಬಗ್ಗೆ ಚಾಟ್​ ನಡೆಸಿರುವುದು ಗೊತ್ತಾಗಿದೆ.

ಹೌದು, ಅಶ್ಲೀಲ ವಿಡಿಯೋ ಚಿತ್ರೀಕರಣದಲ್ಲಿ ಆರಂಭದಲ್ಲಿ ಪೊಲೀಸರು ಬಂಧಿಸಿದ್ದೆ ಈ ನಟಿ ಗೆಹನಾ ವಸಿಷ್ಠರನ್ನ. ಗೆಹನಾ ವಸಿಷ್ಠ ಅರೆಸ್ಟ್​ ನಿಂದ ಶುರುವಾದ ಈ ಪ್ರಕರಣ ಇದೀಗ ಕುಂದ್ರಾರನ್ನು ಕಂಬಿ ಹಿಂದೆ ನಿಲ್ಲುವಂತೆ ಮಾಡಿದೆ. ಫೆಬ್ರವರಿಯಲ್ಲಿ ನಟಿ ಗೆಹನಾ ವಸಿಷ್ಠ ಅವರನ್ನು ಅಶ್ಲೀಲ ವಿಡಿಯೋ ಅಪ್ಲೋಡ್​ ಮಾಡಿರುವ ಕೇಸ್​ನಲ್ಲಿ ಅರೆಸ್ಟ್ ಆದ ನಟಿ ಗೆಹನಾ ವಸಿಷ್ಠ ನಾಲ್ಕು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ರು. ಈ ವೇಳೆ ಮುನ್ನೆಲೆಗೆ ಬಂದ ಹೆಸರು ಅದು ಪ್ರದೀಪ್ ಬಕ್ಷಿಯದ್ದು.

blank
ಈ ಪ್ರದೀಪ್ ಬಕ್ಷಿ ಬೇರೆ ಯಾರು ಅಲ್ಲ. ರಾಜ್ ಕುಂದ್ರಾ ಬಿಸಿನೆಸ್ ಪಾರ್ಟ​ನರ್ ಹಾಗು ಸಂಬಂಧಿನೆ ಈ ಪ್ರದೀಪ್ ಬಕ್ಷಿ. ರಾಜ್​ ಕುಂದ್ರಾ ಹಾಗೂ ಪ್ರದೀಪ್​ ಬಕ್ಷಿ ನಡುವೆ ನಡೆದ ಕೆಲವು ವಾಟ್ಸಾಪ್ ಚಾಟ್​ಗಳಿಂದ ಇವರು ಅಕ್ರಮ ಮಾರ್ಗವಾಗಿ ಭಾರಿ ಹಣ ಸಂಪಾದಿಸುತ್ತಿದ್ದಾರೆ ಅನ್ನೋ ಡೌಟ್ ಮೂಡಿತ್ತು. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿ ರಾಜ್​ ಕುಂದ್ರಾನ ಕರಾಳ ಮುಖದ ಒಂದೊಂದೇ ಸಾಕ್ಷಿಗಳು ಸಿಕ್ಕಿವೆ. ಇದೇ ಆಧಾರದಲ್ಲಿ ಕುಂದ್ರಾ ಕೈಗೆ ಕೋಳ ತೊಡಿಸಿದ ಪೊಲೀಸರು ಮರೆಯಲ್ಲಿದ್ದ ಒಂದೊಂದೇ ರಹಸ್ಯವನ್ನು ಕೆದಕಿ ಹಾಕಿದ್ದಾರೆ.

ರಾಜ್‌ ಕುಂದ್ರಾ ಅವರ ಪಿಎ ಉಮೇಶ್ ಕಾಮತ್ ಕೂಡ ಕೆಲ ಅಶ್ಲೀಲ ಸಿನಿಮಾ ತೆಗೆಯುವ ಕಂಪೆನಿಯಲ್ಲಿ ಕೆಲಸ ಮಾಡಿದ್ದರು ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ. ನಟಿ ಗೆಹನಾ ವಸಿಷ್ಠ ಹಾಗೂ ಉಮೇಶ್ ಕಾಮತ್ ಕೆಲ ಅಶ್ಲೀಲ ಸಿನಿಮಾ ತೆಗೆದಿದ್ದರು. ಇನ್ನು ಬೇರೆ ಬೇರೆ ರೀತಿಯಲ್ಲಿ ಅಶ್ಲೀಲ ಸಿನಿಮಾ ತೆಗೆಯಲು ಮುಂಗಡವಾಗಿ ಕೂಡ ಪ್ರದೀಪ್ ಹಾಗೂ ರಾಜ್‌ ಕುಂದ್ರಾ ಒಡೆತನದ ಕಂಪೆನಿ ಹಣ ನೀಡುತ್ತಿತ್ತಂತೆ.

ಅಶ್ಲೀಲ ಸಿನಿಮಾ ತೆಗೆದು ಇಮೇಲ್ ಐಡಿ ಮೂಲಕ ಗೆಹನಾ ವಸಿಷ್ಠ ಹಾಗೂ ಉಮೇಶ್ ಕಾಮತ್ ಕಂಪೆನಿಗೆ ಕಳಿಸಿದ ನಂತರದಲ್ಲಿ ಅವರ ಖಾತೆಗೆ ಪೂರ್ಣ ಪ್ರಮಾಣದ ಹಣ ಬರುತ್ತಿತ್ತು. ಇವೆಲ್ಲವುದ ಇದೀಗ ತನಿಖೆಯ ವೇಳೆ ಬಯಲಾಗಿದೆ. ಜೂನ್-19 ರಂದು ರಾಜ್​ ಕುಂದ್ರಾರನ್ನು ಮುಂಬೈ ಕ್ರೈಮ್​ ಬ್ರಾಂಚ್ ಪೊಲೀಸರು ನೀಲಿ ಚಿತ್ರದ ಆರೋಪ ಮೇಲೆ ಬಂಧಿಸಿದ ಮೇಲೆ ಒಂದೊಂದೆ ರಹಸ್ಯಗಳು ಮರೆಯಿಂದ ತೆರೆಗೆ ಅಪ್ಪಳಿಸಿ ಬರ್ತಿದೆ.

blank

ಅದ್ರರಲ್ಲೂ ಪ್ರಕರಣದಲ್ಲಿ ನಟಿಮಣಿಯರ ಹೆಸರು ಕೂಡ ನೇತು ಹಾಕಿಕೊಳ್ತಿರುವುದರಿಂದ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಕಳೆದ ವರ್ಷದ ಆಗಸ್ಟ್-ಡಿಸೆಂಬರ್ ನಡುವೆ ಉದ್ಯಮಿ ರಾಜ್ ಕುಂದ್ರಾ ಈ ಅಶ್ಲೀಲ ವಿಡಿಯೋಗಳ ಕೋಟಿ ರುಪಾಯಿ ಗಳಿಸಿದ್ದಾರೆನ್ನುವ ಆರೋಪ ಇದೆ.

ಪೊಲೀಸರು ಇದೀಗ ಈ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕುಂದ್ರಾ ಕಟ್ಟಿದ್ದ ಕರಾಳ ಸಾಮ್ರಾಜ್ಯದಲ್ಲಿರುವ ಒಂದೊಂದು ಇಟ್ಟಿಗೆಗಳು ಕೂಡ ಇದೀಗ ಒಂದೊಂದು ಕರಾಳ ರಹಸ್ಯವನ್ನು ಬಿಚ್ಚಿಡ್ತಿದೆ. ಮುಂದೆ ಈ ಪ್ರಕರಣ ಇನ್ಯಾರಿಗೆ ಬಿಸಿ ಮುಟ್ಟಿಸಿ ಬಿಡುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ. ರಾಜ್ ಕುಂದ್ರಾ ಪ್ರಕರಣ ದಿನಕ್ಕೊಂದರಂತೆ ಟ್ವಿಸ್ಟ್ ಆ್ಯಂಡ್ ಟರ್ನ್ ಪಡೆದುಕೊಳ್ತಿದ್ದು, ಪ್ರಕಣದಲ್ಲಿ ಹೊಸ ಹೊಸ ಹೆಸರುಗಳು ತಳಕು ಹಾಕಿಕೊಳ್ತಿವೆ. ಇದೀಗ ಕುಂದ್ರಾ ಚಾಟಿಂಗ್ ರಹಸ್ಯ ಕೂಡ ಬಯಲಾಗಿದ್ದರಿಂದ ತನಿಖೆಗೆ ಬಿಗ್ ಟ್ವಿಸ್ಟ್ ಸಿಕ್ಕಿದಂತ್ತಾಗಿದೆ. ರಾಜ್ ಕುಂದ್ರಾ ಪ್ರಕರಣ ಇನ್ಯಾರ್ಯಾರ ಬುಡಕ್ಕೆ ಬಿಸಿ ಮುಟ್ಟಿಸುತ್ತೋ ಅನ್ನೋ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Source: newsfirstlive.com Source link