ಟಿ-20 ಸರಣಿಯಲ್ಲಿ ಧವನ್​ ಸ್ಲೋ ಇನ್ನಿಂಗ್ಸ್; ಗಬ್ಬರ್​ ಸ್ಥಾನ ಕಿತ್ತುಕೊಳ್ತಾರಾ ಪಡಿಕ್ಕಲ್​..?

ಟಿ-20 ಸರಣಿಯಲ್ಲಿ ಧವನ್​ ಸ್ಲೋ ಇನ್ನಿಂಗ್ಸ್; ಗಬ್ಬರ್​ ಸ್ಥಾನ ಕಿತ್ತುಕೊಳ್ತಾರಾ ಪಡಿಕ್ಕಲ್​..?

ಶ್ರೀಲಂಕಾ ಪ್ರವಾಸ ನಾಯಕ ಶಿಖರ್​ ಧವನ್​ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿತ್ತು. ಅನಾನುಭವಿ ಯುವ ಆಟಗಾರರ ತಂಡವನ್ನ ಮುನ್ನಡೆಸುವ ಜವಾಬ್ದಾರಿಯೊಂದಿಗೆ, ತನ್ನನ್ನ ತಾನೂ ಪ್ರೂವ್​ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಧವನ್​ಗೆ ಎದುರಾಗಿತ್ತು. ಆದ್ರೆ, ಏಕದಿನ ಸರಣಿಯಲ್ಲಿ ನಾಯಕ ಹಾಗೂ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ ಗಬ್ಬರ್​, ಟಿ20 ಸರಣಿಯಲ್ಲಿ ಎಡವಿದ್ರು.

blank

ಲಂಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಧವನ್​ 40ರ ಗಡಿ ದಾಟಿದ್ರು ನಿಜ. ಆದರೆ ನಾಯಕರಾಗಿ ಅವರಾಡಿದ ನಿಧಾನಗತಿಯ ಇನ್ನಿಂಗ್ಸ್​ ತಂಡಕ್ಕೆ ಹೊರೆಯಾಯ್ತು. ಇದೇ ಒತ್ತಡದಲ್ಲಿ ಕಣಕ್ಕಿಳಿದ ಧವನ್​, 3ನೇ ಟಿ20ಯಲ್ಲಿ ಡಕೌಟ್​ ಆದರು. ಇದರೊಂದಿಗೆ ಟಿ20 ವಿಶ್ವಕಪ್​ ಆಡೋ ಧವನ್​ ಕನಸೂ ಕೂಡ ಬಹುತೇಕ ಕಮರಿದೆ.

ಧವನ್​ ಸ್ಥಾನದಲ್ಲಿ ದೇವದತ್​ ಪಡಿಕ್ಕಲ್​ಗೆ ಟಿಕೆಟ್​..?


ಧವನ್​ಗೆ ಗೇಟ್​ಪಾಸ್​ ನೀಡಲಾಗುತ್ತೆ ಅನ್ನೋದರ ಜೊತೆ ಜೊತೆಗೆ, ಆ ಸ್ಥಾನದಲ್ಲಿ ದೇವದತ್​ ಪಡಿಕ್ಕಲ್​ಗೆ ಟಿಕೆಟ್​ ಸಿಗುತ್ತಾ ಎಂಬ ಚರ್ಚೆಯೂ ಗರಿಗೆದರಿದೆ. ಕಳೆದ ಆವೃತ್ತಿಯ ಐಪಿಎಲ್​ ಆರಂಭದಿಂದಲೇ ಧವನ್​ ಸ್ಥಾನಕ್ಕೆ ದೇವದತ್​ ಪಡಿಕ್ಕಲ್​ ಬೆಸ್ಟ್​ ರಿಪ್ಲೇಸ್​ಮೆಂಟ್​ ಎಂಬ ಮಾತುಗಳು ಕೇಳಿ ಬಂದಿದ್ವು. ಇದೀಗ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಕೂಡ ಪಡಿಕ್ಕಲ್​ ಧವನ್​ಗೆ ಬೆಸ್ಟ್​ ರಿಪ್ಲೇಸ್​​ಮೆಂಟ್​​ ಪ್ಲೇಯರ್​ ಎಂಬ ಮಾತುಗಳನ್ನಾಡಿದ್ದಾರೆ.

blank

ಆದ್ರೆ ಪಡಿಕ್ಕಲ್​ ಕೂಡ ಲಂಕಾ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಈ ಇಬ್ಬರು ನೀಡೋ ಪ್ರದರ್ಶನ ಆಯ್ಕೆಗೆ ನಿರ್ಣಾಯಕವಾಗಲಿದೆ. ಒಂದು ವೇಳೆ ಐಪಿಎಲ್​ನಲ್ಲೂ ಧವನ್​ ವೈಫಲ್ಯ ಕಂಡರೆ, ಟಿ-20 ವಿಶ್ವಕಪ್​ ಮಾತ್ರವಲ್ಲ. ಇಡೀ ಕರಿಯರ್​​​ ಕಷ್ಟಕ್ಕೆ ಸಿಲುಕೋ ಸಾಧ್ಯತೆ ದಟ್ಟವಾಗಿದೆ.

Source: newsfirstlive.com Source link