ದೇಶದಲ್ಲಿ ಮತ್ತೆ ಕೊರೊನಾ ಭೂತ; 24 ಗಂಟೆಯಲ್ಲಿ 41,831 ಮಂದಿಗೆ ಪಾಸಿಟಿವ್

ದೇಶದಲ್ಲಿ ಮತ್ತೆ ಕೊರೊನಾ ಭೂತ; 24 ಗಂಟೆಯಲ್ಲಿ 41,831 ಮಂದಿಗೆ ಪಾಸಿಟಿವ್

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 41,831 ಕೊರೊನಾ ಪ್ರಕರಣಗಳು ದಾಖಲಾಗಿವೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳದ ಪಾಲು ಅಧಿಕ
ಇನ್ನು 541 ಸೋಂಕಿತರು ಸಾವನ್ನಪ್ಪಿದ್ರೆ, 39,258 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನು ದೇಶದಲ್ಲಿ ರೆಕವರಿ ರೇಟ್ 97.36% ರಷ್ಟಿದೆ. 41,831 ಕೊರೊನಾ ಸೋಂಕುಗಳಲ್ಲಿ ಕೇರಳದ ಪಾಲು ದೊಡ್ಡದಿದೆ.

ಕಳೆದ 24 ಗಂಟೆಯಲ್ಲಿ ಕೇರಳ ಒಂದರಲ್ಲೇ 20624 ಮಂದಿಗೆ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 80 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಪಾಸಿಟಿವಿಟಿ ರೇಟ್ 12.31% ಇದೆ. ಇನ್ನು 16,865 ಮಂದಿ ಗುಣಮುಖರಾಗಿದ್ದು, 1,64,500 ಆ್ಯಕ್ಟೀವ್ ಕೇಸ್​ಗಳಿವೆ. ಇನ್ನು ಮಹಾರಾಷ್ಟ್ರದಲ್ಲಿ 225 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.

Source: newsfirstlive.com Source link