ರಕ್ಷಕರೇ ಭಕ್ಷಕರಾಗಿದ್ದಾರೆ: ಸಾಮಾನ್ಯರ ಮೇಲೆ ಪೊಲೀಸರ ದೌರ್ಜನ್ಯ

– ವರದಿಗಾರನ ಫೋನ್ ಕಿತ್ತುಕೊಂಡ ಪೇದೆ
– ಪೊಲೀಸ್ ಡ್ರೆಸ್ ಇಲ್ಲದೆ ವಾಹನಗಳನ್ನು ತಡೆದು ದೌರ್ಜನ್ಯ

ವಿಜಯಪುರ: ದೇವರ ದರ್ಶನಕ್ಕೆ ಹೊರಟಿದ್ದ ಕುಟುಂಬಸ್ಥರಿಗೆ ಪೊಲೀಸರು ಟಾರ್ಚರ್ ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಪರಶುರಾಮ ಮತ್ತು ಅವರ ಕುಟುಂಬಸ್ಥರು ದೇವರ ದರ್ಶನಕ್ಕೆ ಬಸವನಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದಿಂದ ವಿಜಯಪುರಕ್ಕೆ ತಮ್ಮ ಸ್ವಂತ ಲಾರಿ ತಗೆದುಕೊಂಡು ಹೊರಟಿದ್ದರು. ಆಗ ಕೂಡಗಿ ಗ್ರಾಮದ ಹತ್ತಿರ ಪೊಲೀಸರು ಅವರನ್ನು ತಡೆದಿದ್ದಾರೆ. ಲಾರಿಯಲ್ಲಿ ಏನು ಇಲ್ಲದಿದ್ದರೂ ಅವರನ್ನು ದಬಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಪರಶುರಾಮನ ಸಹೋದರ ಅವರ ದಬ್ಬಾಳಿಕೆಯನ್ನು ಫೋನ್‍ನಲ್ಲಿ ಸೆರೆ ಹಿಡಿಯಲೂ ಪ್ರಾರಂಭಿಸಿದ್ದಾರೆ.

ಪೊಲೀಸರು ಸಿಟ್ಟಾಗಿ ಫೋನ್ ಕಸಿದುಕೊಂಡು ಲಾರಿ ಸೀಜ್ ಮಾಡಲು ಮುಂದಾಗಿದ್ದಾರೆ. ಸಂತೋಷ್ ಎಂಬ ಪೇದೆ ಪರಶುರಾಮ ಅವರ ಕಾಲರ್ ಹಿಡಿದು ಥಳಿಸಿದ್ದಾರೆ. ಈ ವೇಳೆ ಪರಶುರಾಮ ಅವರು ಲಾರಿಗೆ ಸಿಕ್ಕಿ ಬಲಿಯಾಗುವುದು ಸ್ವಲ್ಪದರಲ್ಲೇ ತಪ್ಪಿತು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಪೊಲೀಸ್ ಅವರ ದೌರ್ಜನ್ಯವನ್ನು ಸೆರೆ ಹಿಡಿಯಲು ಮುಂದಾದ ನಮ್ಮ ವರದಿಗಾರನ ಮೊಬೈಲ್‍ನನ್ನು ಸಂತೋಷ್ ಅವರು ಕಿತ್ತುಕೊಂಡು ಅವರ ದೌರ್ಜನ್ಯವನ್ನು ನಿರೂಪಿಸಿದ್ದಾರೆ. ಪೊಲೀಸ್ ಡ್ರೆಸ್ ಇಲ್ಲದೆ ಅವರು ಪ್ಲಾಸ್ಟಿಕ್ ಪೈಪ್ ಹಿಡಿದು ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ.

Source: publictv.in Source link