‘ಬೊಮ್ಮಾಯಿ ಅವ್ರು ಸಿಎಂ ಆಗಿದ್ದು ಖುಷಿ ವಿಚಾರ’ -ನೂತನ ಸಿಎಂಗೆ ಶುಭ ಕೋರಿದ ವಿನಯ್​ ಗೂರೂಜಿ

‘ಬೊಮ್ಮಾಯಿ ಅವ್ರು ಸಿಎಂ ಆಗಿದ್ದು ಖುಷಿ ವಿಚಾರ’ -ನೂತನ ಸಿಎಂಗೆ ಶುಭ ಕೋರಿದ ವಿನಯ್​ ಗೂರೂಜಿ

ಬೆಂಗಳೂರು : ಅವಧೂತ ವಿನಯ್ ಗುರೂಜಿ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ್​​ ಗುರೂಜಿ, ನೂತನ ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಲು ಬಂದಿದ್ದೇನೆ ಅಷ್ಟೇ. ಅವರು ಅಶ್ರಮದ ಭಕ್ತರಾಗಿದ್ದು, ಬೊಮ್ಮಾಯಿಯವರು ಸಿಎಂ ಆಗಿರುವುದಕ್ಕೆ ಖುಷಿಯಾಗಿದೆ. ಅವರು ಈ ಹಿಂದೆ ಗೃಹ ಸಚಿವರು ಆಗಿದ್ದರು. ಅಲ್ಲದೇ ತಂದೆಯಾವರು ಸಿಎಂ ಇದ್ದಿದ್ದರಿಂದ ಅವರಿಗೆ ಸಿಎಂ ಹುದ್ದೆ ನಿಭಾಯಿಸುವದು ಅಷ್ಟು ಕಷ್ಟವೇನು ಆಗೋದಿಲ್ಲ. ಅವರಿಗೆ ತಂದೆ ನೀಡಿದ ಟ್ರೈನಿಂಗ್​ ಸಾಕು ಎಂದಿದ್ದಾರೆ.

blank

ಇನ್ನೂ ನೂತನ ಸಿಎಂಗೆ ಏನಾದ್ರು ಸಲಹೆ ನೀಡಿದ್ದೀರಾ ಎಂಬ ಪ್ರಶ್ನೆಗೆ, ನನಗೆ ರಾಜಕೀಯ ದೂರ. ನಾನು ರಾಜಕೀಯ ನಾಯಕರಿಗೆ ಸಲಹೆ ಕೊಟ್ಟರೆ ತಮಾಷೆ ಆಗುತ್ತೆ ಎಂದಿದ್ದಾರೆ. ಇದೇ ವೇಳೆ ಕೊರೊನಾ ವಿಚಾರ ಕುರಿತು ಮಾತನಾಡಿದ ಗುರೂಜಿ, ಕೊರೊನಾ ಎಲ್ಲೂ ಹೋಗಿಲ್ಲ. ವ್ಯಾಕ್ಸಿನ್​ನಿಂದ ಮಾತ್ರ ಅದು ಹೋಗಲ್ಲ. ಅದಕ್ಕಾಗಿ ನಿತ್ಯ ಪ್ರಾಣಾಯಾಮ ಮಾಡಬೇಕು, ಕಷಾಯ ಕುಡಿಯಬೇಕು ಎಂದು ಸಲಹೆ ನೀಡಿದರು.

Source: newsfirstlive.com Source link