ಉಡುಪಿಯಲ್ಲಿ ಬೆಚ್ಚಿಬೀಳಿಸಿದ್ದ ಯುವ ಉದ್ಯಮಿ ಹತ್ಯೆ ಪ್ರಕರಣ- ಗೋವಾದಲ್ಲಿ ಆರೋಪಿ ಅರೆಸ್ಟ್​

ಉಡುಪಿಯಲ್ಲಿ ಬೆಚ್ಚಿಬೀಳಿಸಿದ್ದ ಯುವ ಉದ್ಯಮಿ ಹತ್ಯೆ ಪ್ರಕರಣ- ಗೋವಾದಲ್ಲಿ ಆರೋಪಿ ಅರೆಸ್ಟ್​

ಉಡುಪಿ: ಕುಂದಾಪುರದ ಕಾಳಾವರದಲ್ಲಿ ಮೊನ್ನೆ ತಡರಾತ್ರಿ ನಡೆದಿದ್ದ ಯುವ ಖ್ಯಾತ ಉದ್ಯಮಿ ಕೂಡಾಲ್ ಅಜೇಂದ್ರ ಶೆಟ್ಟಿ (33) ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಉದ್ಯಮಿಯ ಗೆಳೆಯ ಅನೂಪ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶುಕ್ರವಾರ ತಡರಾತ್ರಿ ಅಜೇಂದ್ರ ಶೆಟ್ಟಿಯ ಮೃತದೇಹ ಫೈನಾನ್ಸ್ ಕಚೇರಿಯಲ್ಲೇ ಪತ್ತೆಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದಂತೆ ಜಿಲ್ಲೆಯೇ ಬೆಚ್ಚಿಬಿತ್ತಿತ್ತು. ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಒಂದೇ ದಿನದಲ್ಲಿ ಅಜೇಂದ್ರ ಶೆಟ್ಟಿಯವರ ಫೈನಾನ್ಸ್​ ಸಂಸ್ಥೆಯ ಪಾಲಿದಾರ ಅನೂಪ್​​ ಶೆಟ್ಟಿಯನ್ನು ಗೋವಾದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ವಾಪಾಸ್ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

blank

ಮೃತ ಅಜೇಂದ್ರ ಸಹೋದರ ಅನೂಫ್ ಶೆಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಅಂತ ದೂರು ನೀಡಿದ್ದರು. ಕೊಲೆಯಾದ ನಂತರ ಅನೂಪ್, ಅಜೇಂದ್ರ ಕಾರು ತೆಗೆದುಕೊಂಡು ಪರಾರಿ ಆಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕಿಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಜುಲೈ 30ರ ಶುಕ್ರವಾರ ತಡರಾತ್ರಿ ಅಸೊಡಿನ ಕಚೇರಿಯಲ್ಲೇ ದುಷ್ಕರ್ಮಿಗಳು ಉದ್ಯಮಿ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದರು. ರಾತ್ರಿಯಾದರೂ ಅಜೇಂದ್ರ ಮನೆಗೆ ಬಾರದ ಕಾರಣ ಕುಟುಂಬಸ್ಥರು ಕಚೇರಿಗೆ ಬಂದು ನೋಡಿದಾಗ ಉದ್ಯಮಿಯ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಅಜೇಂದ್ರ ಶೆಟ್ಟಿ ಕಾಳಾವರದಲ್ಲಿ ಫೈನಾನ್ಸ್ ನಡೆಸುತ್ತಿದ್ದ, ಫೈನಾನ್ಸ್ ಹಣದ ವಿಚಾರದಲ್ಲಿಯೇ ಉದ್ಯಮಿಯ ಕೊಲೆಯಾಗಿದೆ ಎಂಬ ಶಂಕೆ ಆ ವೇಳೆ ವ್ಯಕ್ತವಾಗಿತ್ತು. ಘಟನೆ ಕುರಿತಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Source: newsfirstlive.com Source link