ವನಿಂದು ಹಸರಂಗ​ ಬೆನ್ನ ಬಿದ್ದ IPL ಫ್ರಾಂಚೈಸಿಗಳು -ಹಸರಂಗ ಕಾಲಿಟ್ರೆ ಬಲಿಷ್ಠವಾಗುತ್ತಾ RCB ಬೌಲಿಂಗ್​?

ವನಿಂದು ಹಸರಂಗ​ ಬೆನ್ನ ಬಿದ್ದ IPL ಫ್ರಾಂಚೈಸಿಗಳು -ಹಸರಂಗ ಕಾಲಿಟ್ರೆ ಬಲಿಷ್ಠವಾಗುತ್ತಾ RCB ಬೌಲಿಂಗ್​?

ಸೆಪ್ಟೆಂಬರ್​ 19ರಿಂದ 2ನೇ ಹಂತದ ಐಪಿಎಲ್​, ಯುಎಇನಲ್ಲಿ ಮರು ಆಯೋಜನೆಯಾಗ್ತಿದೆ. ಆದರೆ ಫ್ರಾಂಚೈಸಿಗಳು, ಆಟಗಾರರ ರಿಪ್ಲೇಸ್​ಮೆಂಟ್​ನತ್ತ ಕಣ್ಣಿಟ್ಟಿವೆ. ಅದರಲ್ಲೂ ಶ್ರೀಲಂಕಾದ ಈ ಆಟಗಾರನ ಮೇಲಂತೂ ನಾಲ್ಕೈದು ಫ್ರಾಂಚೈಸಿಗಳು ಒಲವು ತೋರಿವೆ. ಆ ಆಟಗಾರ ಯಾರು, ನೋಡೋಣ ಬನ್ನಿ..

ವಿಶ್ವದ ಬಿಗ್ಗೆಸ್ಟ್​ ಲೀಗ್​ ಇಂಡಿಯನ್​ ಪ್ರೀಮಿಯರ್​ ಲೀಗ್​ ಪ್ರಾರಂಭಕ್ಕೆ, ಇನ್ನು ತಿಂಗಳುಗಳಷ್ಟೆ ಉಳಿದಿದೆ. ಫ್ರಾಂಚೈಸಿಗಳು ಕೂಡ 2ನೇ ಹಂತದ ಐಪಿಎಲ್​ಗಾಗಿ, ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸ್ತಿವೆ. ಇದರ ನಡುವೆ ಕೆಲ ಫ್ರಾಂಚೈಸಿಗಳು ಆಟಗಾರರ ರಿಪ್ಲೇಸ್​ಮೆಂಟ್​ಗೆ, ಮುಂದಾಗಿವೆ. ಸದ್ಯ ನಾಲ್ಕು ಫ್ರಾಂಚೈಸಿಗಳು ಈ ಆಟಗಾರನ ಹಿಂದೆ ಬಿದ್ದಿವೆ. ಅದರಲ್ಲೂ ಆರ್​​ಸಿಬಿ ಒಂದು ಹೆಜ್ಜೆ ಮುಂದೆ ಹೋಗಿದೆ.

blank

ಬ್ಯುಸಿ ಶೆಡ್ಯೂಲ್​ನಿಂದಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್​ ಸೇರಿದಂತೆ ಹಲವು ದೇಶಗಳ ಆಟಗಾರರು, ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ. ಇದು ಫ್ರಾಂಚೈಸಿಗಳಿಗೆ ತೀರಾ ತಲೆನೋವು ತಂದಿಟ್ಟಿದೆ.

ಹೀಗಾಗಿ ಬದಲೀ ಆಟಗಾರರ ಹುಡುಕುತ್ತಾ ಹೊರಟ​ ಫ್ರಾಂಚೈಸಿಗಳು, ಶ್ರೀಲಂಕಾ ತಂಡದ ಆಲ್​ರೌಂಡರ್ ವನಿಂದು ಹಸರಂಗ​ ಬೆನ್ನ ಹಿಂದೆ ಸುತ್ತುತ್ತಿವೆ. ಕೊಲ್ಕತ್ತಾ ನೈಟ್​ ರೈಡರ್ಸ್​​, ಡೆಲ್ಲಿ ಕ್ಯಾಪಿಟಲ್ಸ್​, ಆರ್​​ಸಿಬಿ, ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿಗಳು, ಹಸರಂಗ ಖರೀದಿಗೆ ಮುಂದಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಟಿ-20 ಸರಣಿಯಲ್ಲಿ ಧವನ್​ ಸ್ಲೋ ಇನ್ನಿಂಗ್ಸ್; ಗಬ್ಬರ್​ ಸ್ಥಾನ ಕಿತ್ತುಕೊಳ್ತಾರಾ ಪಡಿಕ್ಕಲ್​..?

ಈ ಪಟ್ಟಿಯಲ್ಲಿ ಪಂಜಾಬ್​ ಕಿಂಗ್ಸ್​ ಕೂಡ ಇದೆ ಅನ್ನೋದು ಮಾಹಿತಿ ಲಭ್ಯವಾಗಿದೆ. ಈ ನಾಲ್ಕು ಫ್ರಾಂಚೈಸಿಗಳು ಖರೀದಿಸಬೇಕೆಂಬ ಒಲವು ತೋರಿದ್ರೆ, ಆರ್​​ಸಿಬಿ ಮಾತ್ರ ಟೂರ್ನಿಯಿಂದ ಹಿಂದೆ ಸರಿದಿರುವ ಆಸಿಸ್​​ ಲೆಗ್​ಸ್ಪಿನ್ನರ್ ಆ್ಯಡಂ ಜಂಪಾ ಒಪ್ಪಂದವನ್ನ ರದ್ದುಪಡಿಸಿ, ಹಸರಂಗನನ್ನ ತಂಡಕ್ಕೆ ಕರೆತರಲು ಚಿಂತನೆ ನಡೆಸಿದೆ.

blank

ಹಸರಂಗ ಮೇಲ್ಯಾಕೆ ಫ್ರಾಂಚೈಸಿಗಳ ಒಲವು..?

ವನಿಂದು ಹಸರಂಗಗೆ ಸದ್ಯ ಬೇಡಿಕೆ ಅನ್ನೋದು, ಆಕಾಶಕ್ಕೆ ಮುಟ್ಟಿದೆ. ಏಕೆಂದರೆ ಕಳೆದ ಹಲವು ಸರಣಿಗಳಲ್ಲಿ ಹಸರಂಗ ನೀಡಿರುವ ಅದ್ಭುತ ಪ್ರದರ್ಶನವೇ, ಕಾರಣ. ಸದ್ಯ ಬೌಲಿಂಗ್​​​ ವಿಭಾಗದ ಱಂಕಿಂಗ್​​​ನಲ್ಲಿ 2ನೇ ಸ್ಥಾನದಲ್ಲಿರುವ ಹಸರಂಗ, ಟೀಮ್ ಇಂಡಿಯಾ ಸರಣಿ ಸೇರಿದಂತೆ, ಈ ಹಿಂದಿನ ಸರಣಿಗಳಲ್ಲಿ ವಿಕೆಟ್​ ಬೇಟೆಯಾಡಿ ಗಮನ ಸೆಳೆದಿದ್ದಾರೆ.  ಜೊತೆಗೆ ಬ್ಯಾಟಿಂಗ್​ನಲ್ಲೂ ತಂಡಕ್ಕೆ ರನ್​ ಕೊಡುಗೆ ನೀಡಿದ್ದಾರೆ. ಮತ್ತೊಂದು ವಿಶೇಷ ಅಂದರೆ ಯುಎಇ ಪಿಚ್​ಗಳು ಸ್ಪಿನ್​ಗೆ ಸಹಕಾರಿ ಆಗಲಿವೆ. ಹೀಗಾಗಿಯೇ ಫ್ರಾಂಚೈಸಿಗಳು ಹಸರಂಗ ಹಿಂದೆ ಬಿದ್ದಿವೆ.

ಹಸರಂಗ ಕಾಲಿಟ್ಟರೆ, ಬಲಿಷ್ಠವಾಗುತ್ತಾ RCB ಬೌಲಿಂಗ್​.?

ಕಳೆದ 13 ಆವೃತ್ತಿಗಳಿಂದಲೂ ಆರ್​ಸಿಬಿ, ತೀರಾ ಕಳಪೆಯಾಗಿತ್ತು. ಇದೀಗ ಅರ್ಧಕ್ಕೆ ಮೊಟುಕುಗೊಂಡ ಟೂರ್ನಿಯಲ್ಲಿ ಹರ್ಷಲ್​ ಪಟೇಲ್​, ಬೌಲಿಂಗ್​ ದಾಳಿ ತಂಡಕ್ಕೆ ಬಲ ತಂದಿದೆ. ಜೊತೆಗೆ ಸ್ಪಿನ್​​​ನಲ್ಲಿ ಯುಜುವೇಂದ್ರ ಚಹಲ್​​ ಕೂಡ, ಮೋಡಿ ಮಾಡ್ತಿದ್ದಾರೆ. ಇನ್ನು ಲಂಕಾದ ಲೆಗ್​ ಸ್ಪಿನ್ನರ್​​​ ಕೂಡ ತಂಡಕ್ಕೆ ಕಾಲಿಟ್ರೆ, ಆರ್​​ಸಿಬಿ ಮತ್ತಷ್ಟು ಬಲಗೊಳ್ಳುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.! ಹಸರಂಗ ಆರ್​​ಸಿಬಿ ಪರ ಆಡ್ತಾರಾ ಅಥವಾ ಇನ್ನಿತರ ಫ್ರಾಂಚೈಸಿ ಪಾಲಾಗ್ತಾರಾ ಅನ್ನೋದು, ಶೀಘ್ರವೇ ಗೊತ್ತಾಗಲಿದೆ.

Source: newsfirstlive.com Source link